Advertisement
ತಾಲೂಕು ಕೇಂದ್ರದಿಂದ 40 ಕಿ.ಮೀ. ದೂರದ ಕಲ್ಮಕಾರು ಭಾಗಕ್ಕೆ ಸುಳ್ಯದಿಂದ ರಾತ್ರಿ ತಂಗುವ ಒಂದು ಬಸ್ ಬಿಟ್ಟರೆ ಬೇರೆ ಯಾವುದೇ ಬಸ್ ಬರುತ್ತಿಲ್ಲ. ಮಧ್ಯಾಹ್ನ 11 ಗಂಟೆಗೆ ಅಂಚೆ ಬಸ್, ಸಂಜೆ ನಾಲ್ಕು ಗಂಟೆಗೆ ಕೋಲ್ಚಾರ್ ಬಸ್ ಸುಳ್ಯದಿಂದ ಬರುತ್ತಿದ್ದವು. 4 ವರ್ಷಗಳಿಂದ ಇವೂ ಬರುತ್ತಿಲ್ಲ.
Related Articles
Advertisement
ಗ್ರಾಮಾಂತರ ಪ್ರದೇಶಗಳಿಗೆ ಅವರ ಬೇಡಿಕೆಗೆ ತಕ್ಕಂತೆ ಬಸ್ ಸೌಲಭ್ಯ ಒದಗಿಸಿಲ್ಲ. ತಾಲೂಕಿನ ಗಡಿಗ್ರಾಮಗಳಾದ ಕೊಲ್ಲಮೊಗ್ರ, ಕಲ್ಮಕಾರು, ಬಾಳುಗೋಡು, ಮಡಪ್ಪಾಡಿ ಮಂಡೆಕೋಲು, ಹಾಗೂ ಗ್ರಾಮೀಣ ಪ್ರದೇಶದ ಮರ್ಕಂಜ, ಆಲೆಟ್ಟಿ, ಕುಕ್ಕುಜಡ್ಕ, ಚೊಕ್ಕಾಡಿ ಭಾಗದ ಜನತೆ ತಮ್ಮ ಪ್ರಯಾಣಕ್ಕಾಗಿ ಖಾಸಗಿ ಟೆಂಪೋ, ಜೀಪ್ ಗಳನ್ನು ಅವಲಂಬಿಸಿದ್ದಾರೆ.
ಗ್ರಾಮೀಣ ಸಂಪರ್ಕ ರಸ್ತೆಗಳಾದ ಗುತ್ತಿಗಾರು- ಬಳ್ಳಕ- ಪಂಜ, ಚೊಕ್ಕಾಡಿ- ಪಾಜೆಪಳ್ಳ-ಬೆಳ್ಳಾರೆ, ಸುಬ್ರಹ್ಮಣ್ಯ- ಐನೆಕಿದು- ಹರಿಹರ, ಗುತ್ತಿಗಾರು- ಕಂದ್ರಪ್ಪಾಡಿ- ಮಡಪ್ಪಾಡಿ, ಅರಂತೋಡು- ಮರ್ಕಂಜ, ರಸ್ತೆಗಳಲ್ಲಿ ಕೆಲ ಅವಧಿಗೆ ಸೀಮಿತವಾಗಿ ಬಸ್‌ಗಳು ಸಂಚರಿಸುತ್ತವೆ. ಈ ಭಾಗದಲ್ಲಿ ಇಂದಿಗೂ ಜೀಪ್, ವ್ಯಾನುಗಳಲ್ಲಿ ನೇತಾಡುತ್ತ ಜನ ಓಡಾಡುತ್ತಾರೆಯ ರಾತ್ರಿ ವೇಳೆ 7ರಿಂದ 8 ಗಂಟೆ ಒಳಗಡೆ ಸುಳ್ಯ ನಿಲ್ದಾಣದಿಂದ ಬಸ್ ಸಂಚಾರ ಸ್ಥಗಿತಗೊಳ್ಳುತ್ತದೆ.
ಸುಳ್ಯ-ಪುತ್ತೂರು ನಡುವೆ ಬೆಳಗ್ಗೆ 6 ರಿಂದ ರಾತ್ರಿ 8.30 ರ ತನಕ ಪ್ರತಿ 15 ನಿಮಿಷಕ್ಕೆ ಒಂದು ಬಸ್ ಸಂಚರಿಸುತ್ತಿದೆ. ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಪುತ್ತೂರು ಹಾಗೂ ಕೇರಳ ಇತ್ಯಾದಿ ದೂರದ ಊರುಗಳಿಗೂ ಬಸ್‌ಗಳ ವ್ಯವಸ್ಥೆಯಿದೆ. ಗ್ರಾಮೀಣ ಭಾಗಕ್ಕೆ ತೆರಳುವ ಸಾರಿಗೆ ವ್ಯವಸ್ಥೆ ಸ್ಥಿತಿ ಹಾಗೆಯೇ ಇದೆ.
ಕೇವಲ 28 ಬಸ್ ಹೆಚ್ಚಳಕೇವಲ 28 ಬಸ್ ಹೆಚ್ಚಳ ಡಿಪೋ ಆಗುವ ಮೊದಲು ಸುಳ್ಯ ನಿಲ್ದಾಣಕ್ಕೆ ದಿನವೊಂದಕ್ಕೆ 290 ಬಸ್‌ಗಳು ಬಂದು ಹೋಗುತ್ತಿದ್ದವು. ಈಗ 315 ಬಸ್ ಗಳಿವೆ. ಅಂದರೆ, ಹೆಚ್ಚಳವಾಗಿದ್ದು 28 ಬಸ್‌ಗಳು ಮಾತ್ರ. ಈ ಪೈಕಿ ಹುಬ್ಬಳ್ಳಿ, ಗೋಕರ್ಣ, ಕಾರವಾರ, ಶಿವಮೊಗ್ಗ, ಚಳ್ಳಕೆರೆ, ಬಿಸಿಲೆ-ಮೈಸೂರು, ಬಿಸಿಲೆ – ಬೆಂಗಳೂರು ಮಾರ್ಗಗಳಲ್ಲಿ ಹೊಸ ಬಸ್‌ಗಳ ಓಡಾಟ ಆರಂಭವಾಗಿದೆ. ಹೆಚ್ಚುವರಿ ಎಂದು ಸುಬ್ರಹ್ಮಣ್ಯ-5, ಉಬರಡ್ಕ-1 ಮಂಡೆಕೋಲು-1, ಮಡಪ್ಪಾಡಿ-1 ಬಸ್ ಓಡಾಟ ವ್ಯವಸ್ಥೆಯಷ್ಟೆ ಆಗಿದೆ. ಖಾಸಗಿ ಮೊರೆ
ಅನಿವಾರ್ಯ ಗ್ರಾಮೀಣ ಭಾಗಕ್ಕೆ ಸಾಕಷ್ಟು ಬಸ್ ವ್ಯವಸ್ಥೆ ಕಲ್ಪಿಸಬೇಕು, ಸರ್ಕಾರಿ ಬಸ್‌ನ ವ್ಯವಸ್ಥೆ ಇದ್ದಲ್ಲಿ ಜನ ಅದನ್ನೆ ಆಶ್ರಯಿಸಿ ಪ್ರಯಾಣಿಸುತ್ತಾರೆ. ಅದು ಕೈ ಕೊಟ್ಟಾಗ ಅನಿವಾರ್ಯವಾಗಿ ಖಾಸಗಿ ವಾಹನಗಳ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ಬಸ್ ಒದಗಿಸುವಂತೆ ಸಂಸ್ಥೆಗೆ ಮನವಿ ಮಾಡಿದ್ದೇವೆ.
– ಸತೀಶ ಕೊಮ್ಮೆಮನೆ
ಕಲ್ಮಕಾರು ನಿವಾಸಿ ಬಾಲಕೃಷ್ಣ ಭೀಮಗುಳಿ