Advertisement
ಅವರು ಮಂಜನಾಡಿ ಗ್ರಾ.ಪಂ., ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಹಾಗೂ ಪಶುಸಂಗೋಪನ ಇಲಾಖೆ ಮಂಗಳೂರು ಇವುಗಳ ಸಹಯೋಗದೊಂದಿಗೆ, ಮಂಜನಾಡಿ ಗ್ರಾ.ಪಂ. ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ “ಕೃಷಿಕರಿಗೆ ಇಲಾಖೆ ಮಾಹಿತಿ ಕಾರ್ಯಾಗಾರ’ದಲ್ಲಿ ಮಾತನಾಡಿದರು.
Related Articles
Advertisement
ಅಡಿಕೆ ತೋಟ ಪುನಶ್ಚೇತನಕ್ಕೆ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಯಡಿ ಮಾತ್ರ ಅವಕಾಶವಿದ್ದು, ಪಂಚಾ ಯತ್‌ನಲ್ಲಿ ಉದ್ಯೋಗ ಚೀಟಿಯನ್ನು ನೋಂದಾಯಿಸಿ ಯೋಜನೆಯಲ್ಲಿ ತೊಡ ಗಿಸಿಕೊಳ್ಳಬಹುದಾಗಿದೆ. ಯೋಜನೆಯಡಿ 200 ಗಿಡಗಳಿಗೆ 24,000 ರೂ. ಸಹಾಯ ಧನ ಹಾಗೂ ಗೊಬ್ಬರ, ಗಿಡ ಖರೀದಿ ರಶೀದಿ ಗಳಿದ್ದಲ್ಲಿ ಅದನ್ನು ಇಲಾಖೆಯಿಂದ ಪಡೆದು ಕೊಳ್ಳಬಹುದು ಎಂದು ತಿಳಿಸಿದರು.
ಗೇರು, ಬಾಳೆ, ಕೋಕೊ, ತೆಂಗು ಗಿಡ ಗಳನ್ನು ಇಲಾಖೆಯಿಂದ ವಿತರಿಸಲಾ ಗುವುದು. ಕಾಳು ಮೆಣಸು ಪುನಶ್ಚೇತನದಡಿ ಇಲಾಖೆ ವತಿಯಿಂದ 1 ಎಕರೆಗೆ 200 ಗಿಡಗಳನ್ನು ನೀಡಲಾಗುವುದು ಎಂದರು. ಫಲಾನುಭವಿಗಳಿಗೆ ಸಹಾಯಧನ ಚೆಕ್‌ಗಳನ್ನು ವಿತರಿಸಲಾಯಿತು. ಪಶು ಸಂಗೋಪನ ಇಲಾಖೆಯ ಹಿರಿಯ ಪಶುವೈದ್ಯಕೀಯ ಪರೀಕ್ಷಕ ದೇವಾನಂದ ಎಸ್. ಸಹಾಯಕ ಕೃಷಿ ಅಧಿಕಾರಿ ಬಾಲಕೃಷ್ಣ, ನಿವೃತ್ತ ತೋಟಗಾರಿಕೆ ಅಧಿಕಾರಿ ಕೇಶವ ಶೆಟ್ಟಿ, ಪಿಡಿಒ ಪರಮೇಶ್ವರ ಭಂಡಾರಿ, ಮಂಜನಾಡಿ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್, ಉಪಾಧ್ಯಕ್ಷೆ ಮರಿಯಮ್ಮ, ಮಾಜಿ ಅಧ್ಯಕ್ಷ ಮೊದಿನ್ ಕುಂಞ ಮರಾಟಿಮೂಲೆ, ಸದಸ್ಯರಾದ ಎ.ಎಂ. ಇಸ್ಮಾಯಿಲ್, ಎಂ. ಇಲಿಯಾಸ್, ಕುಂಞಿ ಬಾವಾ, ಎಂ. ಅಬ್ಟಾಸ್, ನಿವೃತ್ತ ಪಿಡಿಒ ರಮಾನಾಥ ಪೂಂಜ ಉಪಸ್ಥಿತರಿದ್ದರು. ಮೌಲಾನ ಆಜಾದ್ ಆಂಗ್ಲ ಮಾಧ್ಯಮ ಶಾಲೆ
ರಾಜ್ಯದಲ್ಲಿ 100 ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳ ಸ್ಥಾಪನೆಗೆ ರಾಜ್ಯ ಸರಕಾರ ಈ ವರ್ಷದ ಬಜೆಟಿನಲ್ಲಿ ಶಿಫಾರಸ್ಸು ಮಾಡಿದ್ದು ಜಿಲ್ಲೆ ಯಲ್ಲಿ ಪ್ರಾರಂಭಗೊಳ್ಳಲಿರುವ ನಾಲ್ಕು ಶಾಲೆಗಳಲ್ಲಿ ಒಂದು ಮಂಜನಾಡಿಯಲ್ಲಿ ಸ್ಥಾಪನೆಗೊಳ್ಳಲಿದೆ ಎಂದು ಜಿ.ಪಂ. ಮಾಜಿ ಸದಸ್ಯ ಎಂ.ಎಸ್. ಕರೀಂ ತಿಳಿಸಿದರು. ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪಂಚಾಯತ್ ಸದಸ್ಯರ ಶ್ರಮ ಹಾಗೂ ಈ ಭಾಗದ ಶಾಸಕ ಯು.ಟಿ. ಖಾದರ್ ಅವರ ಮುತುವರ್ಜಿಯಿಂದ ಅಲ್ಪಸಂಖ್ಯಾಕರೇ ಹೆಚ್ಚಿರುವ ಮಂಜನಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೌಲಾನ ಆಜಾದ್ ಆಂಗ್ಲ ಮಾಧ್ಯಮ ಶಾಲೆ ಆರಂಭವಾಗಲಿದ್ದು, ಇಲ್ಲಿ 6ರಿಂದ 10ನೇ ತರಗತಿಯವರೆಗೆ 75 ಶೇ.ದಷ್ಟು ಅಲ್ಪಸಂಖ್ಯಾಕರಿಗೆ ಹಾಗೂ ಶೇಕಡಾ 25 ರಷ್ಟು ಇತರ ಸಮುದಾಯದ ವಿದ್ಯಾರ್ಥಿ ಗಳಿಗೆ ಉಚಿತ ಶಿಕ್ಷಣ, ವಸತಿ, ಪುಸ್ತಕ, ಬ್ಯಾಗ್ ನೀಡಲಾಗುತ್ತದೆ. ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗಿಂತ ಹೆಚ್ಚಿನ ರೀತಿಯಲ್ಲಿ ಸೌಲಭ್ಯಗಳನ್ನು ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆಯಬೇಕೆಂದು ತಿಳಿಸಿದರು. “ಮಂಜನಾಡಿ ಆಸುಪಾಸಿನಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿದ್ದು, ಬಡವರ್ಗದ ಜನರಿಗೆ ಅಧಿಕ ಶುಲ್ಕವನ್ನು ಕಟ್ಟಿ ಕಲಿಸಲು ಅಲ್ಲಿ ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡ ರಾಜ್ಯ ಸರಕಾರ ಬಡ ವರ್ಗದ ಜನರಿಗೆ ಅನೂಕೂಲವಾಗುವಂತೆ ಉಚಿತ ಆಂಗ್ಲ ಶಿಕ್ಷಣವನ್ನು ನೀಡುವ ನಿಟ್ಟಿ ನಲ್ಲಿ ಶಾಲೆಗಳನ್ನು ಸ್ಥಾಪಿಸಿದೆ. ಈಗ 6ರಿಂದ 10ನೇ ತರಗತಿಯವರೆಗೆ ಆರಂಭವಾಗುವ ಈ ಶಾಲೆ ಭವಿಷ್ಯದಲ್ಲಿ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿವರೆಗೂ ಆರಂಭವಾಗುವ ನಿರೀಕ್ಷೆಯಲ್ಲಿದ್ದೇವೆ’ ಎಂದರು.