Advertisement

ಇಲಾಖೆ ನಡಿಗೆ ರೈತರ ಬಾಗಿಲಿಗೆ

12:57 PM May 26, 2017 | Team Udayavani |

ಹರಿಹರ: ಪ್ರಸಕ್ತ ವರ್ಷದ ಇಲಾಖೆ ನಡಿಗೆ ರೈತರ ಬಾಗಿಲಿಗೆ ಕೃಷಿ ಅಭಿಯಾನಕ್ಕೆ ನಗರದ ಕೃಷಿ ಇಲಾಖೆ ಆವರಣದಲ್ಲಿ ಗುರುವಾರ ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜುನಾಥ್‌ ಚಾಲನೆ ನೀಡಿದರು. ನಂತರ ಮಾತನಾಡಿದರು.

Advertisement

ಕೃಷಿ ಹಾಗೂ ಬೇಸಾಯ ಸಂಬಂಧಿ ತ ಇಲಾಖೆಗಳ ಸಮನ್ವಯದೊಂದಿಗೆ ರೈತಪರ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ ಹಾಗೂ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ನೀಡುವ ನಿಟ್ಟಿನಲ್ಲಿ ಕೃಷಿ ಇಲಾಖೆಯ ನಡಿಗೆ ರೈತರ ಬಾಗಿಲಿಗೆ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದರು.

 ಹಿಂದೆಲ್ಲಾ ಪೈರುಗಳ ಅಸಮಂಜಸ ಬೆಳವಣಿಗೆ, ರೋಗಬಾಧೆ, ಇಳುವರಿ ಕುಂಠಿತಗೊಂಡರೆ ರೈತರು ತಲೆ ಮೇಲೆ ಕೈಹೊತ್ತು ಕೂರಬೇಕಾಗಿತ್ತು. ಆದರೆ ಈಗ ಅಧಿಕಾರಿಗಳೆ ರೈತರ ಮನೆ ಬಾಗಿಲಿಗೆ ಬಂದು ಸೂಕ್ತ ಸಲಹೆ, ಮಾರ್ಗದರ್ಶನ ನೀಡುತ್ತಾರೆ.

ಕಾರ್ಯಕ್ರಮದಲ್ಲಿ ರೈತರಿಗೆ ಮಾಹಿತಿ ನೀಡುವುದು ಮಾತ್ರವಲ್ಲದೆ ವಿಜ್ಞಾನಿಗಳೊಂದಿಗೆ ನೇರ ಸಂವಾದ ನಡೆಸಲು ಅವಕಾಶ ಕಲ್ಪಿಸುವ ಈ ಅಭಿಯಾನವನ್ನು ತಾಲೂಕಿನ ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಿ.ಪಿ.ಗೋವರ್ಧನ್‌ ಮಾತನಾಡಿ, ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಮೇ.25 ರಿಂದ 27ರವರೆಗೆ, ಮಲೆಬೆನ್ನೂರು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೇ.28 ರಿಂದ 30ರವರೆಗೆ ಅಭಿಯಾನದ ವಾಹನ ಸಂಚರಿಸಲಿದೆ.

Advertisement

ಪ್ರತಿ ಹೋಬಳಿ ಕೇಂದ್ರದಲ್ಲಿ ಮೂರನೇ ದಿನ ಕೃಷಿ ವಿಜ್ಞಾನಿಗಳು ಮತ್ತು ರೈತರ ಸಂವಾದ ಕಾರ್ಯಕ್ರಮವಿದ್ದು, ರೈತರಿಗೆ ಕೃಷಿ ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ ಮಾಡಿಕೊಡಲಾಗುವುದು ಎಂದರು. 

ಬಿತ್ತನೆ ಬೀಜ ವಿತರಣೆ: ಪ್ರಸಕ್ತ ಮುಂಗಾರು ಹಂಗಾಮಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಆರಂಭವಾಗಿದೆ. ಎಲ್ಲಾ ವರ್ಗದ ರೈತರಿಗೆ ಹಿಡುವಳಿಗನುಸಾರ ಗರಿಷ್ಟ 5 ಎಕರೆಗೆ ಬೀಜ ವಿತರಿಸಲಾಗುತ್ತಿದ್ದು, ಎಸ್ಸಿ-ಎಸ್ಟಿ ರೈತರಿಗೆ ಶೇ.75, ಸಾಮಾನ್ಯ ವರ್ಗದ ರೈತರಿಗೆ ಶೇ.50ರ ರಿಯಯಿತಿ ದರವಿದೆ.

ಗ್ರಾಮ ಲೆಕ್ಕಾಧಿಕಾರಿಗಳಿಂದ ಭೂ- ಹಿಡುವಳಿ ಮಾಹಿತಿಯುಳ್ಳ ಪರಮಿಟ್‌ ಮತ್ತು ಗುರುತಿನ ಚೀಟಿಯೊಂದಿಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಿಗೆ ಬಂದು ಬೀಜ ಪಡೆಯಬಹುದು. ಒಬ್ಬ ರೈತರಿಗೆ ಒಂದು ಪರಮಿಟ್‌ಗೆ ಮಾತ್ರ ಬೀಜ ನೀಡಲಾಗುವುದು ಎಂದರು.

ತಾಪಂ ಉಪಾಧ್ಯಕ್ಷೆ ಜಯಮ್ಮ, ತಹಶೀಲ್ದಾರ್‌ ಜಿ.ನಳಿನಾ, ಪಶು ಸಂಗೋಪನಾ ಇಲಾಖೆಯ ಡಾ| ದಾಸಪ್ಪ, ತೋಟಗಾರಿಕಾ ಇಲಾಖೆ ಅಧಿಕಾರಿಗಳಾದ ಮಂಜನಾಯ್ಕ, ಸತೀಶ್‌, ವಿ.ಪಿ.ಗೋವರ್ಧನ್‌, ತಾಂತ್ರಿಕ ಅಧಿಕಾರಿಗಳಾದ ಡಿ.ಎಂ.ಜೀವನ್‌ ಸಾಬ್‌, ಜಿ.ಎಂ.ಚಂದ್ರಶೇಖರಪ್ಪ , ಕೃಷಿ ಅಧಿಕಾರಿಗಳಾದ ಎಸ್‌.ನಟರಾಜ್‌, ಮಹಮ್ಮದ್‌ ರμàವುಲ್ಲಾ ರಜ್ವಿ, ಎಂ.ಎಂ. ಹುಣಸಿಕಟ್ಟೆ, ಸಿ.ಕೆ.ಮಲ್ಲಿಕಾರ್ಜುನಯ್ಯ, ಆರ್‌.ದೇವೇಂದ್ರಪ್ಪ, ಎಸ್‌.ಬಿ.ಗುಡಿ ಮತ್ತಿತತರಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next