Advertisement

10 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಸಲಗರ ಚಾಲನೆ

03:23 PM Apr 04, 2022 | Team Udayavani |

ಬಸವಕಲ್ಯಾಣ: ಸರ್ಕಾರದ ಆಸ್ತಿ ನಮ್ಮದು. ಇದನ್ನು ಸಂರಕ್ಷಿಸುವ ಜವಾಬ್ದಾರಿಯೂ ನಮ್ಮದೆಂಬ ಭಾವನೆ ಎಲ್ಲರಲ್ಲೂ ಇರಬೇಕಾದ ಅವಶ್ಯಕತೆ ಇದೆ ಎಂದು ಶಾಸಕ ಶರಣು ಸಲಗರ ಹೇಳಿದರು.

Advertisement

2020-21ನೇ ಸಾಲಿನ ಕೆಕೆಆರ್‌ ಡಿಬಿಯ ಮೈಕ್ರೋ ಮತ್ತು ಜಿ.ಡಿ.ಕ್ಯೂ ಯೋಜನೆಯ ಲೋಕೋಪಯೋಗಿ ಇಲಾಖೆ ಅನುದಾನದಡಿಯಲ್ಲಿ ತಾಲೂಕಿನ ಧನ್ನೂರಾ (ಕೆ) ಗ್ರಾಮದಲ್ಲಿ 10 ಕೋಟಿ ರೂ.ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿ.ಸಿ.ರಸ್ತೆ, ಚರಂಡಿ, ಹೈಮಾಸ್ಟ್‌, ಬೀದಿದೀಪ, ಫುಟ್‌ಪಾತ್‌, ಡಿವೈಡರ್‌ ಸೇರಿ ಸುಸಜ್ಜಿತ ವ್ಯವಸ್ಥೆಗಳನ್ನೊಳಗೊಂಡ ರಸ್ತೆ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವ ಜತೆಗೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.

ನಮ್ಮೆಲ್ಲರ ತೆರಿಗೆ ಹಣದಿಂದ ನಿರ್ಮಾಣವಾಗುತ್ತಿರುವ ರಸ್ತೆಗಳನ್ನು ಕಾಪಾಡಿಕೊಂಡು ಹೋದರೆ ಸುಮಾರು 20 ವರ್ಷಗಳವರೆಗೆ ಬಾಳಿಕೆ ಬರುತ್ತವೆ. ಈ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಗ್ರಾಪಂ ಅಧ್ಯಕ್ಷೆ ತೇಜಮ್ಮಾ ಆರ್‌ ಶಿಂಧೆ, ಗ್ರಾಪಂ ಉಪಾಧ್ಯಕ್ಷ ನಾಮದೇವ ಜಗತಾಪ, ಎಇಇ ಶರಣಗೌಡ ಪಾಟೀಲ, ಎಇ ಅಲ್ತಾಫ್‌, ಮುಖಂಡರಾದ ಸಿದ್ದು ಬಿರಾದರ, ಜ್ಞಾನೋಬಾ ನಿಟ್ಟೂರೆ, ಹಣಮಂತ ಬಿರಾದಾರ, ಮನೀಶ ಖಟಾಳೆ, ಗಣೇಶ ಮೇತ್ರೆ, ನರಸಿಂಗ ದೊಡ್ಡಮನಿ, ವೀರಶೆಟ್ಟಿ ಗೌರೆ, ಮಹಾದೇವ ಹಲಿಂಗೆ, ಶಿವಶಂಕರ ಬಚ್ಚಣ್ಣೆ, ಸಚೀನ ತೆಲಂಗ, ಸೋಮನಾಥ ಬಚ್ಚಣ್ಣೆ, ಸಚೀನ ಬಿರಾದರ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next