Advertisement

ಟೂಲ್ ಕಿಟ್ ಟೆಂಡರ್ ನಲ್ಲಿ ಅಕ್ರಮ ಆರೋಪ: ದಾಖಲೆ ಬಿಡುಗಡೆ ಮಾಡಿದ ಇಲಾಖೆ

04:45 PM Jul 12, 2022 | Team Udayavani |

ಬೆಂಗಳೂರು :  ಕೈಗಾರಿಕಾ ತರಬೇತಿ ಕೇಂದ್ರಗಳಿಗೆ ಟೂಲ್ಸ್ ಕಿಟ್ ಟೆಂಡರ್ ನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಈಗ ಇಲಾಖೆ ದಾಖಲೆ ಬಿಡುಗಡೆಗೊಳಿಸಿದ್ದು, ಸುಮಾರು ಆರು ಕೋಟಿಯಷ್ಟು ಉಳಿತಾಯವಾಗಿದೆ ಎಂದು ಪ್ರತಿಪಾದಿಸಿದೆ.

Advertisement

ಟೆಂಡರ್ ನಲ್ಲಿ ಗೋಲ್ ಮಾಲ್ ಆಗಿದೆ ಎಂದು ಆಮ್ ಆದ್ಮಿ ಪಕ್ಷ ಸೋಮವಾರ ಆರೋಪ ಮಾಡಿತ್ತು. ಆದರೆ ಇದಕ್ಕೆ ದಾಖಲೆ ಸಮೇತ ಸ್ಪಷ್ಟನೆ ನೀಡಿರುವ ಇಲಾಖೆ, ಆರೋಪ ಸಾರ್ವಜನಿಕರನ್ನು ತಪ್ಪುದಾರಿಗೆ ಹಿಡಿಯುವಂತಿದೆ. ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದೆ.

ಸೆಪ್ಟಂಬರ್ 21, 2021ರಂದು ಹದಿಮೂರು ಸಾವಿರ ವಿಸ್ಯಾರ್ಥಿಗಳಿಗೆ ಟೂಲ್ಸ್ ಪೂರೈಕೆಗೆ ಟೆಂಡರ್‌ ಕರೆಯಲಾಗಿತ್ತು. ಆದರೆ ಎಲ್ 1 ಆಗಿ ಪರಿಗಣಿಸಲ್ಪಟ್ಟವರು 22 ಕೋಟಿ ರೂ. ಕೋಟ್ ಮಾಡಿದ್ದರು. ಇದು ಇಲಾಖೆ ನಿಗದಿ ಮಾಡಿದ ಬಜೆಟ್ ಗಿಂತ ಹೆಚ್ಚಾಗಿತ್ತು. ಹೀಗಾಗಿ ಟೆಂಡರ್ ರದ್ದು ಮಾಡಿ ಡಿಸೆಂಬರ್ ತಿಂಗಳಲ್ಲಿ ಮತ್ತೆ ಟೆಂಡರ್ ಕರೆಯಲಾಗಿತ್ತು. ಬಳಿಕ 15.99 ಕೋಟಿಗೆ ಬಿಡ್ ಮಾಡಿದವರಿಗೆ ಟೆಂಡರ್ ಅಂತಿಮಗೊಳಿಸಲಾಗಿತ್ತು. ಇದರಿಂದ ಇಲಾಖೆಗೆ ಸುಮಾರು 6 ಕೋಟಿ ರೂ. ಉಳಿತಾಯವಾಗಿದೆ. ಹೀಗಾಗಿ ಭ್ರಷ್ಟಾಚಾರದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ

Advertisement

Udayavani is now on Telegram. Click here to join our channel and stay updated with the latest news.

Next