ಚಿಕ್ಕನಾಯಕನಹಳ್ಳಿ: ಲಾಕ್‌ಡೌನ್‌ನಿಂದ ಸಂಕಷ್ಟಎದುರಿಸುತ್ತಿರುವ ರೈತರ ನೆರವಿಗೆ ತೋಟಗಾರಿಕೆ ಇಲಾಖೆಧಾವಿಸಿದ್ದು. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆಒದಗಿಸಲು ಸಹಾಯವಾಣಿಯನ್ನು ಪ್ರಾರಂಭಿ ಸಿದೆ.ತರಕಾರಿ, ಹಣ್ಣು, ಹೂವು ಸೇರಿದಂತೆ ರೈತರ ಬೆಳೆಗಳಿಗೆ ಸೂಕ್ತಬೆಲೆ ಕೊಡಿಸುವಲ್ಲಿ ಇಲಾಖೆ ಕಾರ್ಯಪ್ರವೃತ ವಾಗಿದೆ.
ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆರ್ಭಟಹೆಚ್ಚಾಗುತ್ತಿದ್ದು, ತಾಲೂಕು ಆಡಳಿತ 14 ದಿನ ಕರ್ಫ್ಯೂಜಾರಿಗೊಳಿಸಿದ್ದು, ಸಂತೆ, ದಿನನಿತ್ಯ ನಡೆಯುವ ಮಾರ್ಕೆಟ್ ,ತರಕಾರಿ ಅಂಗಡಿ ಸಂಪೂರ್ಣ ಬಂದ್ ಆಗಿದೆ. ಇದರಿಂದರೈತರು ಬೆಳೆದ ಬೆಳೆಗೆ ಮಾರುಕಟ್ಟೆಯ ಅವಶ್ಯಕತೆ ಇದ್ದು,ತೋಟಗಾರಿಕೆ ಇಲಾಖೆ ರೈತ ಹಾಗೂ ಖರೀದಿದಾರರ ನಡುವೆ ಸೇತುವೆಯಾಗಿ ಕೆಲಸ ನಿರ್ವಹಿಸುತ್ತಿದೆ. ತಾಲೂಕಿನಲ್ಲಿ ರೈತರುಬೆಳೆದ ಹೂ, ತರಕಾರಿ, ಹಣ್ಣುಗಳನ್ನು ತೋಟಗಾರಿಕೆಇಲಾಖೆಯ ಸಹಾಯದೊಂದಿಗೆ ಉತ ¤ಮ ಬೆಲೆಗೆ ಮಾರಾಟಮಾಡಬಹುದಾಗಿದೆ.
ರೈತರ ಜಮೀನಿಗೆ ಭೇಟಿ: ತೋಟಗಾರಿಕೆ ಇಲಾಖೆಯಿಂದತೋಟಗಾರಿಕೆ ಉಪ ನಿರ್ದೇಶಕರು ತಾಲೂಕುಮಟ್ಟದಅಧಿಕಾರಿ ಗಳು, ಹೋಬಳಿ ಮಟ್ಟದ ಅಧಿಕಾರಿಗಳು ರೈತರಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ತಾಂತ್ರಿಕ ಸಲಹೆ,ಮಾರುಕಟ್ಟೆಗಳ ಮಾಹಿತಿ, ತಾಲೂಕು, ಜಿಲ್ಲೆಯಸುತ್ತಮುತ್ತಲಿರುವ ಖರೀದಿದಾರರ ಬಗ್ಗೆ ಮಾಹಿತಿಗಳನ್ನುನೀಡಲಾಗುತ್ತಿದ್ದು, ಕರ್ಫ್ಯೂ ಸಮಯದಲ್ಲಿ ರೈತರಿಗೆನೆರವಾಗುತ್ತಿದ್ದಾರೆ.
ಸದುಪಯೋಗ ಪಡಿಸಿಕೊಳ್ಳಿ: 14 ದಿನ ಕರ್ಫ್ಯೂಸಮಯದಲ್ಲಿ ರೈತರು ತಮ್ಮ ಬೆಳೆಗಳಿಗೆ ತೋಟಗಾರಿಕೆಇಲಾಖೆಯ ಸಹಾಯದಿಂದ ಮಾರಕಟೆ rಯನ್ನುಪಡೆದುಕೊಳ್ಳಬಹುದಾಗಿದೆ. ಮಧ್ಯವರ್ತಿಗಳತೊಂದರೆಯಿಲ್ಲದೆ ತಮ್ಮ ಬೆಳೆಗಳನ್ನು ನೇರವಾಗಿಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾಗಿದೆ.ಕಲ್ಲಂಗಡಿ, ಟೊಮೇಟೊ, ಮೆಣಸಿನಕಾಯಿ, ಬದನೆ,ಹೂವುಗಳು, ಸೋಪ್ಪು ಸೇರಿದಂತೆ ಇತರೆ ರೈತರ ಬೆಳೆಗಳಿಗೆತೋಟಗಾರಿಕೆ ಇಲಾಖೆ ಮಾರುಕಟ್ಟೆಯನ್ನು ನೀಡಲಿದೆ.
ತೋಟಗಾರಿಕೆ ರೈತರ ಸಹಾಯವಾಣಿ ತುಮಕೂರು-ದೂ.ಸಂಖ್ಯೆ: 0816-2970310, ಚಿಕ್ಕನಾಯಕನಹಳ್ಳಿ-ದೂ.ಸಂ:08133-267457 ಸಂಪರ್ಕಿಸಬಹುದಾಗಿದೆ.
ರೈತರು ತಾವು ಬೆಳೆದ ಹಣ್ಣು ತರಕಾರಿಸೇರಿದಂತೆ ತೋಟಗಾರಿಕೆ ಉತ್ಪನ್ನಗಳನ್ನುಮಾರಾಟಕ್ಕೆ ಖರೀದಿದಾರರ ಮುಖಾಂತರಮಾರಾಟ ಮಾಡಿಸಲಾಗುವುದು. ರೈತರಿಗೆಹಣ್ಣು-ತರಕಾರಿ ಮಾರಾಟ ಮಾಡಲು ಹಾಗೂಸಾಗಾಣೆಕೆ ಮಾಡಲು ತೊಂದರೆ ಉಂಟಾಗದಂತೆನೋಡಿಕೊಳ್ಳಲು ತಾಲೂಕುವಾರುಸಹಾಯವಾಣಿ ಕೇಂದ್ರಗಳನ್ನು ಆರಂಭಿಸಿದ್ದೇವೆ.ಇದರಿಂದ ರೈತರಿಗೆ ಅನುಕೂಲವಾಗುತ್ತದೆ.● ರಘು ಬಿ. ತೋಟಗಾರಿಕೆ ಉಪನಿರ್ದೇಶಕ,ತುಮಕೂರು