Advertisement
ಇತ್ತೀಚಿನ ಕೆಲವು ವರ್ಷಗಳಿಂದೀಚೆಗೆ ಅಂಗಾಂಗ ದಾನದ ಮಹತ್ವದ ಬಗೆಗೆ ಸಾರ್ವಜನಿಕವಾಗಿ ವ್ಯಾಪಕ ಅರಿವು ಮೂಡಿಸಲಾಗುತ್ತಿರುವುದರಿಂದ ಜನರು ಅಂಗಾಂಗ ದಾನದತ್ತ ಆಸಕ್ತಿ ತೋರಲಾರಂಭಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಮೃತರು/ಮೆದುಳು ನಿಷ್ಕ್ರಿಯಗೊಂಡ ದಾನಿಗಳಿಂದ ಅಂಗಾಂಗ ದಾನ ಈಗಷ್ಟೇ ಹೆಚ್ಚು ಪ್ರಚಲಿತಗೊಳ್ಳುತ್ತಿದೆ. ಅಗತ್ಯವುಳ್ಳವರ ಪ್ರಾಣ ಉಳಿಸುವುದಕ್ಕಾಗಿ ಅಂಗಾಂಗ ದಾನ ಹೆಚ್ಚು ಹೆಚ್ಚು ನಡೆಯಬೇಕು. ಈ ಹಿನ್ನೆಲೆಯಲ್ಲಿ ಮಾರ್ಗದರ್ಶಿ ಸೂತ್ರ ರೂಪಿಸಿರುವುದು ಒಳ್ಳೆಯ ಹೆಜ್ಜೆ.
Related Articles
Advertisement
ಅಂಗಾಂಗ ಸಾಗಾಟ ನಡೆಸಲು ಬಳಸುವ ಸಾಧನ, ಅದಕ್ಕೆ ಅಗತ್ಯವಿರುವ ವೈದ್ಯಕೀಯ ವ್ಯವಸ್ಥೆಗಳು, ಅವುಗಳ ಸಂರಕ್ಷಣೆಗೆ ಕೈಗೊಳ್ಳಬೇಕಿರುವ ಉಪಕ್ರಮಗಳ ಜತೆಯಲ್ಲಿ ಸಾಗಾಟದ ಸಂದರ್ಭದಲ್ಲಿ ಸಂಚಾರ ದಟ್ಟಣೆಯ ಕಾರಣದಿಂದಾಗಿ ಸಮಯ ವಿಳಂಬವಾಗಿ ಇಡೀ ಪ್ರಯತ್ನವೇ ನಿಷ#ಲವಾಗದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಇವೆಲ್ಲವನ್ನು ಪರಿಗಣಿಸಿಯೇ ಆರೋಗ್ಯ ಇಲಾಖೆ ಮಾನವ ಅಂಗಾಂಗಗಳ ಸಾಗಾಟಕ್ಕಾಗಿ ಈಗ ಮಾರ್ಗಸೂಚಿಯನ್ನು ರೂಪಿಸಿದೆ.
ದೂರದ ನಗರಗಳಿಗೆ ಅಂಗಾಂಗ ಸಾಗಾಟಕ್ಕಾಗಿ ವಿಮಾನಗಳನ್ನು ಆದ್ಯತೆಯ ಮೇಲೆ ಬಳಸಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ಇದಕ್ಕಾಗಿ ಅಂಗಾಂಗ ರವಾನೆಯ ಪ್ರತಿಯೊಂದು ಹಂತದಲ್ಲೂ ಅನುಸರಿಸಬೇಕಾದ ಕ್ರಮಗಳು ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆ ಮಾಡಬೇಕಿರುವ ವ್ಯವಸ್ಥೆಗಳು ಮತ್ತು ಭದ್ರತೆ ಕುರಿತಂತೆ ಈ ಮಾರ್ಗದರ್ಶಿ ಸೂತ್ರದಲ್ಲಿ ಸವಿವರವಾಗಿ ತಿಳಿಸಲಾಗಿದೆ.
ಈ ಮಾರ್ಗಸೂಚಿ ಅಕ್ಷರಶಃ ಕಾರ್ಯಗತವಾದದ್ದೇ ಆದಲ್ಲಿ ಅಂಗಾಂಗ ಸಾಗಾಟದ ಸಂದರ್ಭದಲ್ಲಿ ಸದ್ಯ ತಲೆದೋರುತ್ತಿರುವ ಅಡೆತಡೆಗಳು ನಿವಾರಣೆ ಯಾಗಿ ಅದೆಷ್ಟೋ ಮಂದಿ ಮರುಜೀವ ಪಡೆದುಕೊಳ್ಳಲು ನೆರವಾಗಲಿದೆ. ಜತೆಯಲ್ಲಿ ಅಂಗಾಂಗ ದಾನದ ಬಗೆಗೆ ಜನರಿಗೆ ಇನ್ನಷ್ಟು ಪ್ರೇರಣೆ ಲಭಿಸಲಿದೆ.