Advertisement

ಐಡಿ ಇಲ್ಲದ ಫೆಡರರ್‌ಗೆ ಪ್ರವೇಶ ನಿರಾಕರಣೆ

12:40 AM Jan 20, 2019 | |

ಮೆಲ್ಬರ್ನ್: ಗುರುತುಪತ್ರ ಮರೆತು ಬಂದ ಟೆನಿಸ್‌ ದಿಗ್ಗಜ ರೋಜರ್‌ ಫೆಡರರ್‌ಗೆ ಭದ್ರತಾ ಸಿಬಂದಿಯೊಬ್ಬರು “ಲಾಕರ್‌ ರೂಮ್‌’ನ ಪ್ರವೇಶ ನಿರಾಕರಿಸಿದ ಘಟನೆ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದ ವೇಳೆ ನಡೆದಿದೆ.

Advertisement

ಫೆಡರರ್‌ ಲಾಕರ್‌ ರೂಮ್‌ ಪ್ರವೇಶ ದ್ವಾರದ ಬಳಿ ಸಮೀಸುತ್ತಿದ್ದಂತೆ ಐಡಿ ತೋರಿಸಿ ಎಂದು ಭದ್ರತಾ ಸಿಬಂದಿ ಹೇಳಿದ್ದಾರೆ. ಆದರೆ ಅವರು ಐಡಿ ಮರೆತು ಬಂದಿದ್ದರು. ಹೀಗಾಗಿ ತಂಡದ ಸದಸ್ಯರು ಬರುವ ತನಕ ಫೆಡರರ್‌ ತಾಳ್ಮೆಯಿಂದ ಕಾಯಬೇಕಾಯಿತು. ಈ ಘಟನೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 20 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡೆಯ, 37 ವರ್ಷದ ಫೆಡರರ್‌ ತಾಳ್ಮೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next