Advertisement
ಪ್ರಸ್ತುತ ಪರಿಸ್ಥಿತಿಯಲ್ಲಿ ದಂತ ಚಿಕಿತ್ಸೆ : ಕೋವಿಡ್ ಸೋಂಕು ಮುಖ್ಯವಾಗಿ ಉಗುಳು, ಶಾರೀರಿಕ ದ್ರವ, ಕೆಮ್ಮುವುದರಿಂದ ಹೊರಹೊಮ್ಮುವ ಹನಿಗಳಿಂದ ಹರಡುತ್ತದೆ. ದಂತ ಚಿಕಿತ್ಸೆಯಲ್ಲಿ ಬಳಸುವ ಹಲವು ಪರಿಕರಗಳು ನೀರನ್ನು ಚಿಮ್ಮಿಸುತ್ತವೆ. ಇದರಿಂದ ಬಾಯಿಯಲ್ಲಿರುವ ದ್ರವ ಆಚೆ ಸಿಡಿಯುವುದು ಸಹಜ. ಇದರಿಂದ ಸುತ್ತಮುತ್ತಲಿನ ವಾತಾವರಣವು ದ್ರವದ ಹನಿ (ಡ್ರಾಪ್ಲೆಟ್ಸ್)ಗಳಿಂದ ಕಲುಷಿತವಾಗುವ ಸಂಭವ ಹೆಚ್ಚು. ಇಂತಹ ಹನಿಗಳಿಂದ ಅಥವಾ ಹನಿಗಳಿಂದ ಕೂಡಿದ ವಸ್ತುಗಳ ಮೇಲ್ಮೆ„ ಸಂಪರ್ಕದಿಂದ ಸೋಂಕು ಹರಡುತ್ತದೆ.
Related Articles
- ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಿ ಬನ್ನಿ.
- ಗುಂಪು ಗುಂಪಾಗಿ ಸೇರಬೇಡಿ. ರೋಗಿಯ ಜತೆಗೆ ಅನಗತ್ಯವಾಗಿ ಇತರ ಕುಟುಂಬ ಸದಸ್ಯರನ್ನು ಕರೆದುಕೊಂಡು ಬರಬೇಡಿ
- ಹ್ಯಾಂಡ್ ಸ್ಯಾನಿಟೈಸರ್ ಬಳಸಿ.
- ಸ್ಮಾರ್ಟ್‌ಫೋನ್ ಬಳಸುವ ಪ್ರತಿಯೊಬ್ಬರೂ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು
- ಪ್ರವೇಶ ದ್ವಾರದಲ್ಲಿ ನಿಮ್ಮ ದೇಹದ ಉಷ್ಣತೆಯನ್ನು ಪರಿಶೀಲಿಸುತ್ತಾರೆ.
- ಚಿಕಿತ್ಸೆ ಮುಗಿದ ಬಳಿಕ ನೇರ ಮನೆಗೆ ಹೋಗಿ ನಿಮ್ಮ ವೈಯಕ್ತಿಕ ಸ್ವಚ್ಛತೆ ಪಾಲಿಸುವುದು ಅಗತ್ಯ.
- 6 ಅಡಿ ಅಥವಾ 2 ಮೀಟರ್ ಸಾಮಾಜಿಕ ಅಂತರ ಪಾಲಿಸಿ.
- ಪ್ರವೇಶ ದ್ವಾರದಲ್ಲಿನ ಕೌಂಟರ್‌ನಲ್ಲಿ ವೈದ್ಯರು ಕೆಲವು ಆರೋಗ್ಯ ತಪಾಸಣೆಯ ಪ್ರಶ್ನೆಯನ್ನು ಕೇಳುತ್ತಾರೆ. ನಿಮ್ಮಲ್ಲಿ ಜ್ವರದ ಲಕ್ಷಣಗಳು ಇದ್ದರೆ ಅಥವಾ ಕೋವಿಡ್ ರಿಸ್ಕ್ ಜಾಸ್ತಿ ಇದ್ದರೆ ಅಲ್ಲಿಯ ವೈದ್ಯರು ಹೇಳುವ ಸೂಚನೆಯನ್ನು ಪಾಲಿಸಿ.
- ಚಿಕಿತ್ಸೆಯ ಮುನ್ನ ದಂತವೈದ್ಯರು ಕೊಡುವ ಮೌತ್‌ವಾಶ್‌ನಿಂದ ಬಾಯಿ ಮುಕ್ಕಳಿಸಿ.
- ಚಿಕಿತ್ಸೆ ಮುಗಿದ ಬಳಿಕ ನೇರ ಮನೆಗೆ ಹೋಗಿ ನಿಮ್ಮ ವೈಯಕ್ತಿಕ ಸ್ವಚ್ಛತೆ ಪಾಲಿಸುವುದು ಅಗತ್ಯ.
Advertisement
ದೂರವಾಣಿ ಸಮಾಲೋಚನೆ (ಟೆಲಿಡೆಂಟಿಸ್ಟ್ರಿ) : ದಂತ ವೈದ್ಯರೊಂದಿಗೆ ಸಮಾಲೋಚನೆ ಅಗತ್ಯವಾದಾಗ, ಹಲ್ಲು ನೋವು ಬಂದಾಗ ಸ್ವಯಂ ಔಷಧ ಮಾಡಿಕೊಂಡು ನೋವು ನಿವಾರಕ ಔಷಧಗಳನ್ನು ತೆಗೆದುಕೊಳ್ಳುವುದು ಬಹಳ ಅಪಾಯಕಾರಿ. ಆ್ಯಂಟಿಬಯೋಟಿಕ್ ಔಷಧಗಳನ್ನು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಿ. ಇಲ್ಲದಿದ್ದರೆ ಆ್ಯಂಟಿಬಯೋಟಿಕ್ ರೆಸಿಸ್ಟೆನ್ಸ್ ಆಗುವ ಸಾಧ್ಯತೆ ಇದೆ. ಉಳಿದೆಲ್ಲ ಸಣ್ಣಪುಟ್ಟ ತೊಂದರೆಗಳಿಗೆ, ಔಷಧಗಳ ಮಾಹಿತಿಗೆ ದಂತವೈದ್ಯರ ಬಳಿ ಮಾಹಿತಿ ಪಡೆಯಬಹುದು.
ಹಲ್ಲಿನ ಆರೋಗ್ಯಕ್ಕೆ ಹತ್ತು ಸರಳ ಸೂತ್ರಗಳು :
ನಿಯಮಿತವಾಗಿ ಹಲ್ಲುಜ್ಜುವುದು : ದಿನವೂ ಎರಡು ಬಾರಿ ಹಲ್ಲುಜ್ಜಬೇಕು. ಸರಿಯಾದ ಕ್ರಮದಲ್ಲಿ ಹಲ್ಲುಜ್ಜುವುದು ಅವಶ್ಯ. ರಾತ್ರಿ ಮಲಗುವ ಮುನ್ನ ಹಲ್ಲುಜ್ಜಿ ಮಲಗಿ. ಮೃದುವಾದ ಬ್ರಶ್‌ನಿಂದ ನಿಧಾನವಾಗಿ ಮೇಲೆ ಕೆಳಗೆ ಸರಿಯಾದ ಕ್ರಮದಲ್ಲಿ ಕನಿಷ್ಠ ಎರಡು ನಿಮಿಷಗಳ ಕಾಲ ಹಲ್ಲುಜ್ಜಬೇಕು.
ಸೂಕ್ತವಾದ ಬ್ರಶ್ ಬಳಕೆ : ಬ್ರಶ್‌ಗಳಲ್ಲಿ ಮೂರು ವಿಧಗಳಿವೆ. ಮೃದು (ಸಾಫ್ಟ್), ಮೀಡಿಯಂ ಮತ್ತು ಹಾರ್ಡ್. ಮೃದು ಅಥವಾ ಮಿಡಿಯಮ್ ಬ್ರಶ್‌ಗಳನ್ನೇ ಉಪಯೋಗಿಸಿ. ಹಾರ್ಡ್ ಬ್ರಶ್‌ಗಳಿಂದ ಹಲ್ಲು ಸವೆಯುವುದು ಖಚಿತ. ಕನಿಷ್ಠ ಮೂರು ತಿಂಗಳಿಗೊಮ್ಮೆ ಬ್ರಶ್ ಬದಲಾಯಿಸಿ. ಹಲ್ಲುಜ್ಜಿದ ಅನಂತರ ಬ್ರಶ್ ಅನ್ನು ಶುಚಿಯಾಗಿಟ್ಟುಕೊಳ್ಳುವುದು ಅಗತ್ಯ.
ಫ್ಲೋರೈಡ್‌ಯುಕ್ತ ಪೇಸ್ಟ್ ಬಳಸಿ : ಮಾರುಕಟ್ಟೆಯಲ್ಲಿ ಪೇಸ್ಟ್ ಖರೀದಿಸುವಾಗ “ಫ್ಲೋರೈಡ್’ ಅಂಶ ಇದೆಯೇ ಎಂದು ಪರಿಶೀಲಿಸಿ ತೆಗೆದುಕೊಳ್ಳಿ. ಫ್ಲೋರೈಡ್ ನಿಮ್ಮ ಹಲ್ಲು ಹುಳುಕಾಗದಂತೆ ಕಾಪಾಡಿ ಹಲ್ಲುಗಳು ಆರೋಗ್ಯವಾಗಿರುವಂತೆ ಸಹಾಯ ಮಾಡುತ್ತದೆ.
ದಂತದಾರ (ಡೆಂಟಲ್ ಫ್ಲೋಸ್) ಬಳಸಿ : ಹಲ್ಲುಗಳ ಸಂಧಿಗಳನ್ನು ಡೆಂಟಲ್ ಫ್ಲೋಸ್ ಬಳಕೆಯಿಂದ ಶುಚಿಗೊಳಿಸಿ.
ನಾಲಗೆ ಶುಚಿಗೊಳಿಸಿ : ಟಂಗ್ ಕ್ಲೀನರ್ ಅಥವಾ ಬ್ರಷ್‌ನ ಹಿಂಬದಿಯಿಂದ ನಾಲಗೆಯನ್ನು ಶುಚಿಗೊಳಿಸಿಕೊಳ್ಳಿ
ವಸಡುಗಳ ಆರೈಕೆ : ಹಲ್ಲುಜ್ಜಿದ ಅನಂತರ ಬೆರಳಿಗೆ ಸ್ವಲ್ಪ ಪೇಸ್ಟ್ ಹಾಕಿಕೊಂಡು ವಸಡನ್ನು ನಯವಾಗಿ ಮಸಾಜ್ ಮಾಡಿ. ಇದರಿಂದ ರಕ್ತಪರಿಚಲನೆ ಹೆಚ್ಚಾಗಿ ವಸಡಿನ ಆರೋಗ್ಯ ವೃದ್ಧಿಸುತ್ತದೆ.
ಮೌತ್‌ವಾಶ್ ಬಳಸಿ : ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಮೌತ್‌ವಾಶ್ ಬಳಸಿ ಬಾಯಿ ಮುಕ್ಕಳಿಸಿ ಅಥವಾ ಉಗುರು ಬೆಚ್ಚಗಿನ ನೀರಿಗೆ ಒಂದು ಚಿಟಿಕೆ ಉಪ್ಪು ಹಾಕಿ ಆ ದ್ರಾವಣದಿಂದ ಬಾಯಿ ಮುಕ್ಕಳಿಸಿ. ಇದರಿಂದ ಬಾಯಿ ವಾಸನೆ, ವಸಡಿನ ಉರಿಯೂತ, ವಸಡಿನಲ್ಲಿ ರಕ್ತ ಒಸರುವುದನ್ನು ನಿಯಂತ್ರಿಸಬಹುದು.
ಸಮತೋಲಿತ ಆಹಾರ ಸೇವನೆ : ಹಲ್ಲಿನ ಆರೋಗ್ಯಕ್ಕೆ ಪೂರಕವಾದ ನಾರುಯುಕ್ತ ಪದಾರ್ಥ, ಯಥೇಚ್ಛ ಹಣ್ಣು ಹಂಪಲು, ಹಸಿ ತರಕಾರಿ ಸೇವಿಸಿ.
ಸಿಹಿ ಜಿಗುಟು ಪದಾರ್ಥಗಳ ಸೇವನೆ ಮಿತಗೊಳಿಸಿ : ಸಿಹಿ, ಜಿಗುಟು ಪದಾರ್ಥಗಳನ್ನು ಸೇವಿಸುವುದು ಕಡಿಮೆ ಮಾಡಿ. ಸೇವಿಸಿದರೂ ಅದರ ಬಳಿಕ ನಿಮ್ಮ ಹಲ್ಲನ್ನು ಶುಚಿಯಾಗಿಟ್ಟುಕೊಳ್ಳಲು ಮರೆಯದಿರಿ. ಇಂಗಾಲಯುಕ್ತ, ಆಮ್ಲಯುಕ್ತ ಕೃತಕ ಪೇಯಗಳನ್ನು ಮಿತಿಗೊಳಿಸಿ.
ನಿಯಮಿತವಾಗಿ ನೀರು ಸೇವನೆ : ಬಾಯಿಯ ಆರೋಗ್ಯಕ್ಕೆ ನೀರು ಸೇವನೆ ಮುಖ್ಯ. ಇಲ್ಲದಿದ್ದರೆ ಒಣ ಬಾಯಿಯ ಸಮಸ್ಯೆ ಉಂಟಾಗಬಹುದು. ದೇಹವು ಸೋಂಕಿನ ವಿರುದ್ಧ ಹೋರಾಡಲು ಮತ್ತು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ದೇಹವು ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ .
ಆರೋಗ್ಯವಂತ ಬಾಯಿ ದೇಹದ ಆರೋಗ್ಯದ ಕೈಗನ್ನಡಿಯಿದ್ದಂತೆ. ಕೋವಿಡ್ ಬಗ್ಗೆ ಅನಗತ್ಯ ಭಯ ಬೇಡ. ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು, ಸಮತೋಲನ ಆಹಾರ ಸೇವನೆ, ನಿಮ್ಮ ಹಲ್ಲಿನ ಆರೈಕೆ, ವ್ಯಾಯಾಮ, ನಿದ್ರೆ, ಸಕಾರಾತ್ಮಕ ಯೋಚನೆಗಳು ಮತ್ತು ಸುತ್ತಮುತ್ತಲಿನ ಪರಿಸರದ ಸ್ವತ್ಛತೆ ಇಂದಿನ ಪ್ರತಿಕೂಲ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ.
ಡಾ| ನೀತಾ ಜಿ. ಶೆಣೈ, ಎಂಡಿಎಸ್
ಕನ್ಸರ್ವೇಟಿವ್ ಡೆಂಟಿಸ್ಟ್ರಿ ಮತ್ತು
ಎಂಡೊಡಾಂಟಿಕ್ಸ್, ಮಣಿಪಾಲ ದಂತ
ವೈದ್ಯಕೀಯ ಕಾಲೇಜು, ಮಣಿಪಾಲ