Advertisement
ಕೋವಿಡ್ -19 ದಿಂದಾಗಿ ಸುದೀರ್ಘ ಸಮಯ ಬಂದ್ ಆಗಿದ್ದ ದಂತ ಚಿಕಿತ್ಸಾಲಯಗಳು ಈಗ ಬಾಗಿಲು ತೆರೆದಿವೆ. ಸರಕಾರ ಸೂಚಿಸಿದ ನಿರ್ದಿಷ್ಟ ಮಾರ್ಗಸೂಚಿಯಂತೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ವಿವಿಧ ರೀತಿಯ ನಿಬಂಧನೆಗಳನ್ನು ಪಾಲಿಸುವುದು ನಮ್ಮ ಕರ್ತವ್ಯವೂ ಆಗಿದೆ.
Related Articles
Advertisement
ದಂತ ವೈದ್ಯರಲ್ಲಿಗೆ ತೆರಳುವ ಮೊದಲೇ ಫೋನ್ ಮಾಡಿ ಸಮಯ ನಿಗದಿಪಡಿಸಿ. ಯಾಕೆಂದರೆ ಒಬ್ಬರಿಗೆ ಚಿಕಿತ್ಸೆ ನೀಡಿದ ಬಳಿಕ ಚಿಕಿತ್ಸಾ ಕೊಠಡಿಯನ್ನು ಸ್ಯಾನಿಟೈಸರ್ ಮತ್ತು ಇತರ ಸ್ವತ್ಛತಾ ದ್ರಾವಣ ಬಳಸಿ ಶುಚಿಗೊಳಿಸಲು ಸಮಯ ಬೇಕಾಗುವುದು. ಇದರಿಂದ ಹೊರಗಡೆ ತುಂಬಾ ಹೊತ್ತು ಕಾಯುವುದನ್ನು ತಪ್ಪಿಸಬಹುದು.
ದಂತ ವೈದ್ಯರು ತಿಳಿಸುವ ಮುನ್ನೆಚ್ಚರಿಕೆ, ಸಲಹೆ, ಮಾರ್ಗದರ್ಶನಗಳನ್ನು ತಪ್ಪದೆ ಪಾಲಿಸಿ. ವೈದ್ಯರು ತಿಳಿಸಿದಂತೆ ಒಂದೇ ಭೇಟಿಯಲ್ಲಿ ಚಿಕಿತ್ಸೆಗೆ ಸಂಬಂಧಿಸಿ ಸಾಧ್ಯವಾದಷ್ಟು ಕೆಲಸಗಳನ್ನು ಮುಗಿಸಿ. ಸಮಯ ಇಲ್ಲ. ಮತ್ತೂಮ್ಮೆ ಬರುತ್ತೇನೆ ಎಂಬುದಕ್ಕೆ ಇದು ಸರಿಯಾದ ಸಮಯವಲ್ಲ.
“ಟೆಲಿಮೆಡಿಸಿನ್’ ಮೂಲಕವೂ ಸಣ್ಣಪುಟ್ಟ ಸಮಸ್ಯೆಗಳಿಗೆ ಮಾಹಿತಿ ಪಡೆಯಬಹುದು. ರೋಗಿಗಳು ವೈದ್ಯರಿಗೆ ಫೋನ್ ಕಾಲ್, ಇ-ಮೇಲ್, ವಾಟ್ಸ್‌ಆ್ಯಪ್ ಇತ್ಯಾದಿಗಳ ಮೂಲಕ ಸಮಸ್ಯೆ ತಿಳಿಸಿದರೆ ಔಷಧಗಳ ಹೆಸರನ್ನು ಸೂಚಿಸುತ್ತಾರೆ. ಹಲ್ಲು ಅಂದಗೊಳಿಸುವುದು ಸಹಿತ ಯಾವುದಕ್ಕೂ ಸ್ವಯಂ ಚಿಕಿತ್ಸೆ ಸರಿಯಾದ ಕ್ರಮವಲ್ಲ.
ಹಲ್ಲು ಕಟ್ಟಿಸುವುದು, ಸರಿಗೆ ಹಾಕುವುದು ಇತ್ಯಾದಿ ಚಿಕಿತ್ಸೆಗಳನ್ನೂ ಸ್ವಲ್ಪ ಸಮಯ ಮುಂದೂಡುವುದು ಉತ್ತಮ. 6 ತಿಂಗಳುಗಳಿಗೊಮ್ಮೆ ನಡೆಸುವ ದಂತ ತಪಾಸಣೆ (ರುಟೀನ್ ಚೆಕಪ್) ಇತ್ಯಾದಿಗಳ ಬಗ್ಗೆ ವೈದ್ಯರನ್ನು ಫೋನ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದು ಮುಂದುವರಿಯುವುದು ಉತ್ತಮ.
ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಬಳಿಕ ಅಂಗಡಿ, ಮಾರುಕಟ್ಟೆಗೆ ತೆರಳದೆ ನೇರವಾಗಿ ಮನೆಗೆ ಬಂದು ಸ್ಯಾನಿಟೈಸರ್ ಅಥವಾ ಸೋಪ್ ಬಳಸಿ ಚೆನ್ನಾಗಿ ಕೈಯನ್ನು ಸ್ವತ್ಛಗೊಳಿಸಿ. ಬಟ್ಟೆಯನ್ನು ಡಿಟರ್ಜೆಂಟ್ ಬಳಸಿ ವಾಶ್ ಮಾಡಿ. ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಉತ್ತಮ.
ನಿಮಗೆ ಏನಾದರೂ ಸಂಶಯ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸಪ್ ಮಾಡಿ.- 9148594259