Advertisement

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌ಗೆ ಜಯ

09:22 PM Oct 19, 2022 | Team Udayavani |

ಒಡೆನ್ಸೆ (ಡೆನ್ಮಾರ್ಕ್‌): ಡೆನ್ಮಾರ್ಕ್‌ ಓಪನ್‌ ಸೂಪರ್‌-750 ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತದ ಭರವಸೆಯ ಆಟಗಾರ ಲಕ್ಷ್ಯ ಸೇನ್‌ ಗೆಲುವಿನ ಆರಂಭ ಪಡೆದಿದ್ದಾರೆ.

Advertisement

ಕೇವಲ 39 ನಿಮಿಷಗಳಲ್ಲಿ ಮುಗಿದ 32ರ ಸುತ್ತಿನ ಸ್ಪರ್ಧೆಯಲ್ಲಿ ಲಕ್ಷ್ಯ ಸೇನ್‌ ಇಂಡೋನೇಷ್ಯಾದ ಆ್ಯಂಟನಿ ಗಿಂಟಿಂಗ್‌ ವಿರುದ್ಧ 21-16, 21-12 ಅಂತರದ ಗೆಲುವು ಸಾಧಿಸಿದರು. ಇದರೊಂದಿಗೆ ಗಿಂಟಿಂಗ್‌ ವಿರುದ್ಧ ಆಡಿದ ಎಲ್ಲ 3 ಪಂದ್ಯಗಳನ್ನೂ ಲಕ್ಷ್ಯ ಸೇನ್‌ ಗೆದ್ದಂತಾಯಿತು.

ಲಕ್ಷ್ಯ ಸೇನ್‌ ಅವರಿಗೆ ದ್ವಿತೀಯ ಸುತ್ತಿನಲ್ಲಿ ಭಾರತದವರೇ ಆದ ಎಚ್‌.ಎಸ್‌.ಪ್ರಣಯ್‌ ಎದುರಾಗುವ ಸಾಧ್ಯತೆ ಇದೆ.

ಪ್ರಣಯ್‌-ಝಾವೊ ಜುನ್‌ ಪೆಂಗ್‌ ನಡುವಿನ ವಿಜೇತರನ್ನು ಸೇನ್‌ ಎದುರಿಸುವರು. ಕೆ.ಶ್ರೀಕಾಂತ್‌, ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ, ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಕೂಡ ಗೆಲುವಿನ ಆರಂಭ ಕಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next