ಎಚ್.ಡಿ.ಕೋಟೆ: “ಸರ್ಕಾರದಿಂದ ದುಡ್ಡು ತಿನ್ನೋಕೆ ನೀವು ನಮ್ಮನ್ನು ಬಲಿಪಶು ಮಾಡ್ತೀರಿ, ನಮಗೇನಾದರೂ ಆದ್ರೆ ನಮ್ಮ ಜಮೀನುಗಳಲ್ಲಿ ನೀವು ಉತ್ತು ಬಿತ್ತು ತ್ತೀರಾ’ ಎಂದು ಕೊರೊನಾ ಲಸಿಕೆ ನೀಡಲು ಆಗಮಿಸಿದ್ದ ಗ್ರಾಮ ಲೆಕ್ಕಿಗರನ್ನೇ ತಾಲೂಕಿನ ರಾಜೇಗೌಡನಹುಂಡಿ ರೈತ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ತಾಲೂಕಿನ ರಾಜೇಗೌಡನಹುಂಡಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸರ್ಕಾರದ ಆದೇಶದಂತೆ ಕೊರೊನಾ ಲಸಿಕಾ ಅಭಿಯಾನ ನಡೆಯಿತು. ಈ ವೇಳೆ ಲಸಿಕೆ ಪಡೆಯುವಂತೆ ಗ್ರಾಮಲೆಕ್ಕಿಗ ಅನಿಲ್, ಭೀಮನಹಳ್ಳಿ ಪಿಡಿಒ ಮಂಜು ನಾಥ್ ಸೇರಿದಂತೆ ಅರೋಗ್ಯ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರು ಲಸಿಕೆ ಪಡೆಯುವಂತೆ ಮನವಿ ಮಾಡಿಕೊಂಡರು.
317 ಮಂದಿ ಲಸಿಕೆ ಪಡೆದಿಲ್ಲ: ಗ್ರಾಮ ದಲ್ಲಿ ಒಟ್ಟು ಲಸಿಕೆ ಪಡೆಯಬೇಕಾದ 1101 ಮಂದಿ ಪೈಕಿ 677ಮಂದಿಗೆ ಲಸಿಕೆ ನೀಡ ಲಾಗಿತ್ತು. ಇನ್ನುಳಿದಂತೆ 424ಮಂದಿಗೆ ಲಸಿಕೆ ನೀಡಬೇಕಿದ್ದು ಅದರಲ್ಲಿ 64ಮಂದಿ ರಾಜೇಗೌಡನ ಹುಂಡಿ ಆದಿವಾಸಿಗರಿದ್ದರು. ಇಂದು ಲಸಿಕೆ ನೀಡವ ಅಭಿಯಾನ ಆರಂಭ ಗೊಳ್ಳುತ್ತಿದ್ದಂತೆಯೇ ಕುಪಿತರಾದ ರಾಜೇ ಗೌಡನಹುಂಡಿ ರೈತರು, ನಾವು ಲಸಿಕೆ ಪಡೆದಾಗ, ಆರೋಗ್ಯದಲ್ಲಿ ಏರುಪೇರಾ ದರೆ ಅಧಿಕಾರಿಗಳು ಬಂದು ಕೃಷಿ ಚಟು ವಟಿಕೆ ನಡೆಸಲ್ಲ.
ಇದನ್ನೂ ಓದಿ;- ಬುಹ್ಲ್ ನಿಂದ ಭಾರತದ ದಿನಸಿ ವ್ಯಾಪಾರಿಗಳಿಗಾಗಿ ಇಂಪ್ರೆಝ್ ಪಿಓಎಸ್ ಆ್ಯಪ್
ಸರ್ಕಾರದಿಂದ ಹಣ ತಿನ್ನುವದುರು ದ್ದೇಶದಿಂದ ನಮ್ಮನ್ನೇಕೆ ಬಲಿ ಪಶುಗಳನ್ನಾಗಿ ಸುತ್ತೀರಿ ಎಂದು ತರಾಟೆಗೆ ತೆಗೆದು ಕೊಂಡರು. ಈ ವೇಳೆ ಮಾತಿನ ಚಕಮಕಿ ನಡೆದು ಲಸಿಕೆ ಪಡೆಯದೇ ಇದ್ದರೆ ಪಡಿತರ ವಿತರಿಸಲ್ಲ ಎನ್ನುವ ಎಚ್ಚರಿಕೆ ಮಾತಿಗೂ ರೈತರು ಬಗ್ಗಲಿಲ್ಲ. ಆದರೂ ಅಧಿಕಾರಿಗಳ ಸೂಚನೆ ಮತ್ತು ಸರ್ಕಾರದ ಆದೇಶದಂತೆ ಭಾನುವಾರ 107ಮಂದಿಗೆ ಲಸಿಕೆ ನೀಡುವಲ್ಲಿ ಅಧಿಕಾರಿ ಗಳು ಯಶಸ್ವಿಯಾದರೂ ಇನ್ನೂ 317 ಮಂದಿ ಲಸಿಕೆ ಪಡೆದುಕೊಂಡಿಲ್ಲ.
ರಾಜೇಗೌಡನ ಹುಂಡಿ ಹಾಡಿಯಲ್ಲಿ ಒಟ್ಟು 64ಮಂದಿ ಲಸಿಕೆ ಪಡೆಯಬೇಕಿದ್ದು ಮೊದಲ ಲಸಿಕೆ 6ಮಂದಿ, 2ನೇ ಲಸಿಕೆ ಒಬ್ಬರು ಸೇರಿ ಒಟ್ಟು 7ಮಂದಿ ಮಾತ್ರ ಲಸಿಕೆ ಪಡೆದುಕೊಂಡರೆ ಇನ್ನುಳಿದಂತೆ 57ಮಂದಿ ಲಸಿಕೆ ಪಡೆದಿಲ್ಲ. ಲಸಿಕಾ ಕೇಂದ್ರಕ್ಕೆ ಭಾನುವಾರ ತಹಶೀ ಲ್ದಾರ್ ನರಗುಂದ, ತಾಲೂಕು ಆರೋಗ್ಯಾ ಧಿಕಾರಿ ಡಾ.ರವಿಕುಮಾರ್, ಆರೋಗ್ಯ ಇಲಾಖೆಯ ದಿವ್ಯಾ, ಅಂಗನವಾಡಿ ಕಾರ್ಯ ಕರ್ತೆಯರಾದ ಸಿ.ಚಂದ್ರಮ್ಮ, ವನಿತ, ಆಶಾ ಕಾರ್ಯಕರ್ತೆ ಸರೋಜಾ ಮತ್ತಿತರರಿದ್ದರು.