Advertisement
ಇದರೊಂದಿಗೆ ಮತ್ತೂಮ್ಮೆ ಡೆಂಘೀ ಭೂತ ಕಾಡಲಾರಂಭಿಸಿದೆ. ಅಚ್ಚರಿ ಎಂದರೆ ಈ ಬಾರಿ ನಗರ ಪ್ರದೇಶದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಭೂಪಾಲ ತೆಗನೂರು ಗ್ರಾಮದಲ್ಲಿ 2013-14ನೇ ಸಾಲನಲ್ಲಿ ಡೆಂಘೀಯಿಂದ ಇಡಿ ಊರು ಖಾಲಿಯಾಗಿತ್ತು.
Related Articles
Advertisement
ಮೇ ತಿಂಗಳಲ್ಲಿ 12, ಜೂನ್ 22ರವೆಗೆ ಅತಿ ಹೆಚ್ಚು ಅಂದರೆ 23 ಪ್ರಕರಣಗಳು ಪತ್ತೆಯಾಗಿವೆ. ಕಳೆದ ಆರು ತಿಂಗಳಲ್ಲಿ ಜಿಲ್ಲೆಯಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ. ಜೂನ್ ತಿಂಗಳಲ್ಲಿ ಮಳೆ ನೀರು ಸಂಗ್ರಹ ಹೆಚ್ಚಾಗುವುದರಿಂದ ಈಡೀಸ್ ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗಿ ಹೆಚ್ಚಾಗಿ ಬಾಲಕರು, ವೃದ್ಧರು ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಅಂಕಿ ಅಂಶಗಳು ಬಹಿರಂಗಗೊಳಿಸಿವೆ.
ರೋಗದ ಭೀತಿ: ಮಳೆಗಾಲ ಶುರುವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಡೆಂಘೀ ಹಾಗೂ ಮಲೇರಿಯಾ ಪ್ರಕರಣಗಳು ಭೀತಿ ಜನರಲ್ಲಿ ಶುರುವಾಗುತ್ತದೆ. ಈ ಹಿಂದೆ ಎರಡು ವರ್ಷಗಳ ಹಿಂದೆ ಡೆಂಘೀ ಹಲವು ಜೀವಗಳನ್ನು ನುಂಗಿತ್ತು. ಅಲ್ಲದೆ, ಮಲೇರಿಯಾದಿಂದಲೂ ಮಕ್ಕಳು ಬಲಿಯಾಗಿರುವ ಕಹಿ ಘಟನೆಗಳಿಗೆ ಜಿಲ್ಲೆ ಸಾಕ್ಷಿಯಾಗಿದೆ.
ಆದ್ದರಿಂದ ಮಳೆಗಾಲ ಶುರುವಾದರೆ ಜನರು ಅದರಲ್ಲೂ ಗ್ರಾಮೀಣ ಭಾಗದಲ್ಲಿನ ಜನರು ಆರೋಗ್ಯ ಇಲಾಖೆಯೊಂದಿಗೆ ಸತತ ಸಂಪರ್ಕ ಸಾಧಿಸುತ್ತಾರೆ. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸಿಬ್ಬಂದಿ ಇರದೇ ಇರುವುದು ಜನರ ಭಯವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ. ಈ ನಿಟ್ಟಿನಲ್ಲಿ ಉಸ್ತುವಾರಿ ಸಚಿವರು ಗಮನಿಸಿ ವ್ಯವಸ್ಥೆ ಸರಿ ಮಾಡಬೇಕಿದೆ.
* ಸೂರ್ಯಕಾಂತ ಎಂ. ಜಮಾದಾರ