Advertisement

ನೀರಲ್ಲಿ ಮುಳುಗಿದ ವ್ಯಕ್ತಿ ರಕ್ಷಣೆ ಪ್ರಾತ್ಯಕ್ಷಿಕೆ

06:01 PM May 28, 2022 | Team Udayavani |

ಪಾಂಡವಪುರ: ನೀರಿನಲ್ಲಿ ಮುಳುಗಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡುವುದು ಸೇರಿ ವಿಪತ್ತು ಸಂದರ್ಭ ಹೇಗೆ ನಿಬಾಯಿಸಬೇಕು ಎಂಬುದರ ಕುರಿತು ಅಣುಕು ಪ್ರದರ್ಶನ ತಾಲೂಕಿನ ತೊಣ್ಣೂರು ಕೆರೆಯಲ್ಲಿ ಶುಕ್ರವಾರ ನಡೆಯಿತು.

Advertisement

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಸಂಯುಕ್ತಾ ಶ್ರಯದಲ್ಲಿ ಎನ್‌ಡಿಆರ್‌ಎಫ್‌ ತಂಡ, ಅಗ್ನಿ ಶಾಮಕ ದಳದ ಸಿಬ್ಬಂದಿಯಿಂದ ವಿಪತ್ತು ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ನಡೆಯಿತು.

ವಿಪತ್ತು ನಿರ್ವಹಣೆ ಅಣುಕು ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ತೊಣ್ಣೂರುಕೆರೆಯ ಏರಿ ಮೇಲೆ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಎನ್‌ಡಿಆರ್‌ಎಫ್‌ ತಂಡ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ನಡೆಸಿದ ಕಾರ್ಯಗಾರದಲ್ಲಿ ಆಕಸ್ಮಿಕ ವಾಗಿ ವ್ಯಕ್ತಿಗಳು ನೀರಿನಲ್ಲಿ ಮುಳುಗಿದ ಸಂದರ್ಭ ದಲ್ಲಿ ಅಥವಾ ಪ್ರವಾಹ ಎದುರಾದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿದ ವ್ಯಕ್ತಿ ಹೇಗೆ ರಕ್ಷಣೆ ಮಾಡಬೇಕು, ಜತೆಗೆ ಅನುಸರಿಸಬೇಕಾದ ಕ್ರಮದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ಜಲವಿಪತ್ತು ನಿರ್ವಹಣೆ: ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ಮೇಲೆತ್ತಿ ಪ್ರಾಥಮಿಕ ಚಿಕಿತ್ಸೆ ನೀಡುವುದು ಹೇಗೆ, ಬಳಿಕ ಆ ವ್ಯಕ್ತಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ರವಾನಿಸುವ ಕ್ರಮಗಳು, ನೀರಿನಲ್ಲಿ ಮುಳುಗಿ ಕುಡಿದ ನೀರು ಹೊರ ತೆಗೆಯುವುದು ಹೇಗೆ? ದೋಣಿಯ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ, ಜಲವಿಪತ್ತು ಎದುರಾದ ಸಂದರ್ಭದಲ್ಲಿ ಯಾವ ರೀತಿ ಕ್ರಮ ಅನುಸರಿಸಬೇಕು ಎಂಬ ಪ್ರಾತ್ಯಕ್ಷಿಕೆ ನಡೆಯಿತು.

ರಕ್ಷಣಾ ಜಾಕೇಟ್‌ ಹಾಕಿರಬೇಕು: ದೋಣಿಗಳು ಮುಳು ಗಿದ ಸಂದರ್ಭದಲ್ಲಿ ನೀರಿಗೆ ಇಳಿಯುವಾಗ ರಕ್ಷಣಾ ಜಾಕೇಟ್‌ ಹಾಕಿಕೊಂಡು ಇಳಿಯುವ ಕುರಿತು, ಜತೆಗೆ ಮನೆಯಲ್ಲಿ ಇರುವಂತ ತೆಂಗಿನಕಾಯಿ ಕಟ್ಟಿಕೊಂಡು, ಖಾಲಿ ವಾಟರ್‌ ಬಾಟಲ್‌, ಬಿಂದಿಗೆಗಳನ್ನು ಕಟ್ಟಿಕೊಂಡು ನೀರಿನಲ್ಲಿ ಮುಳುಗಿ ಈಜುವುದರ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.

Advertisement

ಕೆರೆ ಸೌಂದರ್ಯ ವೀಕ್ಷಣೆ: ಎನ್‌ಡಿಆರ್‌ಎಫ್‌ ತಂಡ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ನಡೆಸಿಕೊಟ್ಟ ಎಲ್ಲಾ ಪ್ರಾತ್ಯಕ್ಷಿಕೆಗಳನ್ನು ಜಿಲ್ಲಾಧಿಕಾರಿ ಎಸ್‌.ಅಶ್ವಥಿ,ಜಿಪಂ ಸಿಇಒ ದಿವ್ಯಾಪ್ರಭು, ಎಸ್ಪಿ ಎನ್‌.ಯತೀಂದ್ರ, ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್‌ ಎಸ್‌.ಎನ್‌.ನಯನಾ ವೀಕ್ಷಣೆ ಮಾಡಿ ದರು. ಬಳಿಕ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಸೇರಿ ಎಲ್ಲಾ ಅಧಿಕಾರಿಗಳು ವಾಟರ್‌ ಬೋಟ್‌ ಗಳಲ್ಲಿ ತೊಣ್ಣೂರು ಕೆರೆ ಸುತ್ತಾಡಿ ಪ್ರಾಕೃತಿಕ ಸೌಂದರ್ಯ ಸವಿದರು.

ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಮಾತನಾಡಿ, ಜಿಲ್ಲೆಯ ಎನ್‌ಡಿಆರ್‌ಎಫ್‌ ತಂಡ ಹಾಗೂ ಅಗ್ನಿ ಶಾಮಕದಳ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಜಿಲ್ಲಾಡಳಿತದಿಂದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಅಗತ್ಯ ಸಲಕರಣೆಗಳನ್ನು ಒದಗಿಸಲಾಗಿದೆ. ಪ್ರವಾಹ ಎದುರಾದ ಸಂದರ್ಭದಲ್ಲಿ ಜನ ಜಾನುವಾರು ಅಥವಾ ಆಸ್ತಿ ರಕ್ಷಣೆ ಮಾಡುವ ಕುರಿತು ನಮ್ಮ ತಂಡಗಳು ಸಮ ರ್ಥವಾಗಿ ಕೆಲಸ ನಿರ್ವಹಿಸುತ್ತಿವೆ. ಯಂತ್ರೋ ಪಕರಣ ಬಳಕೆ ಮಾಡಿಕೊಂಡು ರಕ್ಷಣೆ ಮಾಡುವ ಕುರಿತು ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ಪ್ರಶಂಸಿದರು.

ಈ ವೇಳೆ ಎನ್‌ಡಿಆರ್‌ಎಫ್‌, ಅಗ್ನಿಶಾಮಕ ದಳದ ಸಿಬ್ಬಂದಿ ಪ್ರವಾಹ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಬಳಕೆ ಮಾಡುವಂತಹ ಯಂತ್ರೋಪಕರಣಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಜಿಲ್ಲಾ ವಾರ್ತಾಧಿಕಾರಿ ನಿರ್ಮಲಾ, ತಾಪಂ ಇಒ ಆರ್‌.ಪಿ.ಮಹೇಶ್‌, ಪುರಸಭೆ ಮುಖ್ಯಾಧಿಕಾರಿ ವೀಣಾ, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next