Advertisement

ನೋಟು ನಿಷೇಧ ಭಾರತದ ಮಹೋನ್ನತ ಕ್ರಮ: ಆ್ಯಪ್ಪಲ್‌ ಸಿಇಓ ಕುಕ್‌

10:51 AM Feb 01, 2017 | |

ನ್ಯೂಯಾರ್ಕ್‌ : ಭಾರತ ಸರಕಾರ ಕಳೆದ ವರ್ಷ ಕೈಗೊಂಡಿದ್ದ ನೋಟು ಅಪನಗದೀಕರಣದ ಕ್ರಮವು ದೀರ್ಘಾವಧಿಯಲ್ಲಿ ಅತ್ಯಂತ ಮಹೋನ್ನತ ಹಜ್ಜೆ ಎನಿಸಲಿದೆ ಎಂದು ಆ್ಯಪ್ಪಲ್‌ ಸಿಇಓ ಟಿಂ ಕುಕ್‌ ಹೇಳಿದ್ದಾರೆ. ಮಾತ್ರವಲ್ಲದೆ ತಮ್ಮ ಕಂಪೆನಿಯು ಭಾರತದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡುವ ಬಲವಾದ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ. 

Advertisement

ನೋಟು ಅಪನಗದೀಕರಣದ ಹೊರತಾಗಿಯೂ ಅಮೆರಿಕದ ಐಫೋನ್‌ ಉತ್ಪಾದಿಸುವ ಆ್ಯಪ್ಪಲ್‌ ಕಂಪೆನಿ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಸಾರ್ವಕಾಲಿಕ ಆದಾಯ ಗಳಿಕೆಯ ನಿರ್ವಹಣೆಯನ್ನು ತೋರಿದೆ ಮತ್ತು ನಮಗೆ ಆ ಬಗ್ಗೆ ಅತೀವವಾದ ಸಂತಸವಿದೆ ಎಂದು ಕುಕ್‌ ಅವರು 2016ರ ಡಿಸೆಂಬರ್‌ 31ಕ್ಕೆ ಕೊನೆಗೊಂಡ ತಮ್ಮ ಕಂಪೆನಿಯ 2017ರ ಮೊದಲ ತ್ತೈಮಾಸಿಕ ಫ‌ಲಿತಾಂಶವನ್ನು ಬಿಡುಗಡೆ ಮಾಡುವ ಕಾನ್‌ಫ‌ರೆನ್ಸ್‌ ಕಾಲ್‌ ನಲ್ಲಿ ಹೇಳಿದರು. 

ಭಾರತದ ನೋಟು ಅಪನಗದೀಕರಣ ಕ್ರಮವು ನಿರೀಕ್ಷಿತ ರೀತಿಯಲ್ಲಿ ಪರಿಣಾಮಕಾರಿಯಾಗಿ ಸಾಗಿಲ್ಲವಾದರೂ ಅದರಿಂದ ನಿಶ್ಚಿತವಾಗಿಯೂ ದೇಶದ ಆರ್ಥಿಕತೆಗೆ ಲಾಭವಾಗಲಿದೆ ಎಂದು 56ರ ಹರೆಯದ ಟಿಂ ಕುಕ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next