ನವದೆಹಲಿ: ಕಾನ್ಪುರ ಮತ್ತು ಪ್ರಯಾಗ್‌ರಾಜ್ ಗಳಲ್ಲಿ ಕೈಗೊಳ್ಳಲಾಗಿರುವ ಅಕ್ರಮ ಕಟ್ಟಡಗಳನ್ನು ಕೆಡವಿ ಹಾಕುವ ಕಾರ್ಯ ಕಾನೂನಿಗೆ ಅನ್ವಯವಾಗಿಯೇ ನಡೆಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಸಮರ್ಥಿಸಿಕೊಂಡಿದೆ.
ಈ ಬಗ್ಗೆ ಸುಪ್ರೀಂಕೋರ್ಟ್ ಸಲ್ಲಿಸಲಾಗಿರುವ ರಾಜ್ಯ ಸರ್ಕಾರದ ಅಫಿಡವಿಟ್‌ನಲ್ಲಿ ಅರಿಕೆ ಮಾಡಲಾಗಿದೆ. ಅಕ್ರಮ ಕಟ್ಟಡಗಳನ್ನು ಕೆಡವಿ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಂಘಟನೆಗಳು ಕೋಮು ಬಣ್ಣ ನೀಡುತ್ತಿವೆ ಎಂದು ಅದರಲ್ಲಿ ಆರೋಪಿಸಲಾಗಿದೆ.
ಬಿಜೆಪಿ ಮುಖಂಡರು ಪ್ರವಾದಿ ಮೊಹಮ್ಮದ್ ಅವರನ್ನು ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಪ್ರತಿಯಾಗಿ ನಡೆದ ಹಿಂಸಾಚಾರಕ್ಕೆ ಪ್ರತೀಕಾರವಾಗಿ ಬುಲ್ಡೋಜರ್ ಕಾರ್ಯಾಚರಣೆ ನಡೆಸಿದ್ದಲ್ಲ ಎಂದೂ ಅದರಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಟೈಯರ್ ಸ್ಪೋಟಗೊಂಡು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಬಸ್ : ಇಬ್ಬರು ಸಾವು, ನಾಲ್ವರಿಗೆ ಗಾಯ
ನಿಜಕ್ಕೂ ತೊಂದರೆಗೆ ಈಡಾದ ಯಾವೊಬ್ಬ ವ್ಯಕ್ತಿಯೂ ಕೋರ್ಟ್‌ಗೆ ರಾಜ್ಯ ಸರ್ಕಾರದ ವಿರುದ್ಧ ಅರಿಕೆ ಮಾಡಿಲ್ಲ ಎಂದೂ ರಾಜ್ಯ ಸರ್ಕಾರ ವಾದಿಸಿದೆ.