Advertisement

ನೈತಿಕ ಮತದಾನದಿಂದ ಪ್ರಜಾಪ್ರಭುತ್ವದ ಗೆಲುವು

09:59 PM Apr 14, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯನ್ನು ಪಾರದರ್ಶಕವಾಗಿ ನ್ಯಾಯ ಸಮ್ಮತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ನಿರ್ಭೀತಿಯಿಂದ ನೈತಿಕವಾಗಿ ಮತದಾನ ಮಾಡಿದರೆ ಮಾತ್ರ ಪ್ರಜಾಪ್ರಭುತ್ವದ ನೈಜ ಗೆಲುವು ಸಾಧ್ಯ ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಗುರುದತ್ತ ಹೆಗಡೆ ತಿಳಿಸಿದರು.

Advertisement

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಸಂಜೆ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಲೋಕಸಭಾ ಚುನಾವಣೆ-2019ರ ಭಾಗವಾಗಿ ಆಯೋಜಿಸಿರುವ ಎರಡು ದಿನಗಳ ಹೊನಲು ಬೆಳಕಿನ ಬಾಲಿಬಾಲ್‌ ಪಂದ್ಯಾವಳಿಯ ಅಂತಿಮ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಶ್ರೇಷ್ಠ ಹಕ್ಕು: ರಾಜಕೀಯ ಪಕ್ಷಗಳು ನೀಡುವ ಅಥವಾ ಕೊಡುವ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ತಮ್ಮ ಸ್ವಂತ ವಿವೇಚನೆಯಿಂದ ದೇಶದ ಅಭಿವೃದ್ಧಿಗೆ ಪೂರಕವಾಗುವ ಒಳ್ಳೆಯ ವ್ಯಕ್ತಿಯನ್ನು ಚುನಾವಣೆಯಲ್ಲಿ ಆರಿಸಬೇಕೆಂದರು.

ಕಡ್ಡಾಯವಾಗಿ ಮತದಾನ ಮಾಡಿ: ಈ ಬಾರಿ ಶೇ.100ಕ್ಕೆ ನೂರರಷ್ಟು ಮತದಾನ ಆಗಬೇಕೆಂದು ಜಿಲ್ಲಾ ಸ್ವೀಪ್‌ ಸಮಿತಿ ಅನೇಕ ಮತ ಜಾಗೃತಿಗಾಗಿ ಕಾರ್ಯಕ್ರಮ ರೂಪಿಸಿದ್ದು, ಯುವಕರು, ಮಹಿಳೆಯರು ಕಡ್ಡಾಯವಾಗಿ ಮತದಾನ ಮಾಡಬೇಕೆಂದರು.

ಜಿಲ್ಲಾ ಯುವ ಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಉಪ ನಿರ್ದೇಶಕರಾದ ರುದ್ರಪ್ಪ ಮಾತನಾಡಿ, ಇದೇ ಮೊದಲ ಬಾರಿಗೆ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಯುವ ಜನತೆಗೆ ಕ್ರೀಡೆಗಳನ್ನು ಆಯೋಜಿಸಿದ್ದು, ನಿರೀಕ್ಷೆಗೂ ಮೀರಿ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.

Advertisement

ತಾಪಂ ಇಒ ಕೆ.ಪಿ.ಸಂಜೀವಪ್ಪ, ಜಿಲ್ಲಾ ಸ್ವೀಪ್‌ ಸಮಿತಿ ಸದಸ್ಯರಾದ ಮುನಿರಾಜು, ರವಿಕುಮಾರ್‌, ಡಾ.ಸತೀಶ್‌ ಕುಮಾರ್‌, ದೈಹಿಕ ಶಿಕ್ಷಕರಾದ ಮಾರುತಿ, ಶಿವಪುತ್ರಪ್ಪ ಸೇರಿದಂತೆ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಸಿವಿವಿ ನ್ಪೋರ್ಟ್ಸ್ ಕ್ಲಬ್‌ಗೆ ಮೊದಲ ಬಹುಮಾನ: ಎರಡು ದಿನಗಳ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾವಳಿಯಲ್ಲಿ ಚಿಕ್ಕಬಳ್ಳಾಪುರದ ಸಿವಿವಿ ನ್ಪೋರ್ಟ್ಸ್ ಕ್ಲಬ್‌ ಮೊದಲ ಸ್ಥಾನ ಪಡೆಯುವ ಮೂಲಕ 15 ಸಾವಿರ ರೂ, ನಗದು ಬಹುಮಾನ ತನ್ನದಾಗಿಸಿಕೊಂಡಿದೆ. ಎರಡನೇ ಸ್ಥಾನವನ್ನು ಚಿಕ್ಕಬಳ್ಳಾಪುರದ ಫ್ರೆಂಡ್ಸ್‌ ವಾಲಿಬಾಲ್‌ ಕ್ಲಬ್‌ ಪಡೆದು 10 ಸಾವಿರ ರೂ. ನಗದು ಹಾಗೂ ಮೂರನೇ ಸ್ಥಾನಕ್ಕೆ ಬಾಪೂಜಿ ನ್ಪೋರ್ಟ್ಸ್ ಕ್ಲಬ್‌ ತೃಪ್ತಿ ಪಟ್ಟುಕೊಂಡಿದೆ.

ಉಳಿದಂತೆ ಪಾಲ್ಗೊಂಡಿದ್ದ ಎಲ್ಲಾ ತಂಡಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ವಿಜೇತ ಮೊದಲ ಎರಡು ತಂಡಗಳಿಗೆ ಜಿಪಂ ಸಿಇಒ ಗುರದತ್‌ ಹೆಗಡೆ ಟ್ರೋಫಿ ಹಾಗೂ ನಗದು ಬಹುಮಾನದ ಚೆಕ್‌ಗಳನ್ನು ವಿತರಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಸುಮಾರು 20 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next