Advertisement
ರವಿವಾರ ಬೆಳಗ್ಗೆ 9 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಅಂತಾ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಕ್ಕೆ ಚಾಲನೆ ನೀಡಲಿದ್ದು, ಸಾಮೂಹಿಕವಾಗಿ ಸಂವಿಧಾನದ ಪೀಠಿಕೆಯನ್ನು ವಾಚನ ಮಾಡಲಾಗುತ್ತದೆ. ಅನಂತರ ಮಾನವ ಸರಪಳಿ ನಿರ್ಮಾಣವಾಗಲಿದ್ದು, ಬಳಿಕ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.
ಶನಿವಾರ ಸಂಜೆ ಈ ಕುರಿತು ಮಾಹಿತಿ ನೀಡಿದ ಸಮಾಜ ಕಲ್ಯಾಣ ಸಚಿವ ಡಾ| ಎಚ್.ಸಿ. ಮಹದೇವಪ್ಪ, 2007ರ ಸೆ. 15ರಂದು ವಿಶ್ವಸಂಸ್ಥೆಯು “ಪ್ರಜಾಪ್ರಭುತ್ವ ದಿನ’ವನ್ನು ಘೋಷಿಸಿದ್ದು, ಅದರ ಅಂಗವಾಗಿ ಸಮಾಜ ಕಲ್ಯಾಣ, ಪೌರಾಡಳಿತ, ಗ್ರಾಮೀಣಾಭಿ ವೃದ್ಧಿ, ಶಿಕ್ಷಣ ಮತ್ತಿತರ ವಿವಿಧ ಇಲಾಖೆಗಳು ಸೇರಿ ವಿಶಿಷ್ಟ ಕಾರ್ಯಕ್ರಮ ವನ್ನು ರೂಪಿಸಿವೆ ಎಂದರು.
2023ರ ಸೆ. 15ರಂದು ರಾಜ್ಯಾದ್ಯಂತ 2.30 ಕೋಟಿ ಜನರು ಸಂವಿಧಾನದ ಪೀಠಿಕೆ ಓದುವ ಮೂಲಕ ದಾಖಲೆ ಬರೆದಿದ್ದರು. ಈ ಬಾರಿ ಬೀದರ್‌ನಿಂದ ಚಾಮರಾಜನಗರದ ವರೆಗೆ 2,500 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಿಸಲು ನಿರ್ಧರಿಸಿದ್ದು, ಕನಿಷ್ಠ 25 ಲಕ್ಷ ಜನರು ಇದರಲ್ಲಿ ಭಾಗಿಯಾಗಲಿದ್ದಾರೆ. ಇದುವರೆಗೆ 14 ಲಕ್ಷ ಜನರು ನೋಂದಣಿ ಮಾಡಿ ಕೊಂಡಿದ್ದಾರೆ. ಅಲ್ಲದೆ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 3 ಕೋಟಿ ಜನರು ಭಾಗವಹಿಸುವ ಅಂದಾಜಿದೆ. ಕೆನರಾ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ರೋಟರಿ ಕ್ಲಬ್, ರೈತ ಸಂಘ ಗಳು, ನಾಗರಿಕ ಸಂಘ-ಸಂಸ್ಥೆಗಳು ಕೈ ಜೋಡಿಸಿವೆ ಎಂದು ವಿವರಿಸಿದರು.
Related Articles
ಅಸಮಾನತೆ ತೊಡಗಿಸಿ, ಸಮ ಸಮಾಜದ ಗುರಿ ತಲುಪಲು, ಸರ್ವಾಂ ಗೀಣ ಅಭಿವೃದ್ಧಿಗೆ ಪ್ರಬಲ ಅಸ್ತ್ರವಾಗಿ ರುವ ಪ್ರಜಾಸತ್ತಾತ್ಮಕ ಅಧಿಕಾರ ಬಳಕೆ ಆಗಬೇಕು. ಭಾರತವು ಅತ್ಯಂತ ಬಲಿಷ್ಠ ಪ್ರಜಾಸತ್ತಾತ್ಮಕ ರಾಷ್ಟ್ರ ಎಂಬ ಸಂದೇಶವು ವಿಶ್ವಕ್ಕೆ ರವಾನೆಯಾಗಬೇಕು. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
Advertisement
ಪ್ರತಿ ಜಿಲ್ಲಾ, ತಾಲೂಕು ಕೇಂದ್ರ ಗಳಲ್ಲೂ ಮಾನವ ಸರಪಳಿ ಜೋಡಣೆ ಆಗಲಿದ್ದು, ಸಮುದ್ರದಲ್ಲೂ ಮಾನವ ಸರಪಳಿ ರಚನೆ ಆಗಲಿದೆ. ಎಂದು ಸಚಿವ ಮಹದೇವಪ್ಪ ಅವರು ವಿವರಿಸಿದರು.
ಕರಾವಳಿಯಲ್ಲಿ
ದ. ಕನ್ನಡ: ಸುಮಾರು 130 ಕಿ.ಮೀ. ಉದ್ದದ ಮಾನವ ಸರಪಳಿಉಡುಪಿ: ಲಕ್ಷ ಜನರು ಭಾಗಿ, ಸುಮಾರು 107 ಕಿ.ಮೀ. ಉದ್ದ ವಿಶ್ವ ದಾಖಲೆ ಬರೆಯುವು ದಷ್ಟೇ ಈ ಕಾರ್ಯಕ್ರಮದ ಉದ್ದೇಶವಲ್ಲ. ಇತ್ತೀಚೆಗೆ ಪ್ರಜಾಸತ್ತಾತ್ಮಕ ಮೌಲ್ಯಗಳು ಕುಸಿಯುತ್ತಿವೆ. ಅಸಮಾನತೆ ತೊಲಗಿಸಿ, ಸಮ ಸಮಾಜದ ಗುರಿ ತಲುಪಲು, ಸರ್ವಾಂಗೀಣ ಅಭಿವೃದ್ಧಿಗೆ ಪ್ರಬಲ ಅಸ್ತ್ರವಾಗಿರುವ ಪ್ರಜಾಸತ್ತಾತ್ಮಕ ಅಧಿಕಾರ ಬಳಕೆ ಆಗಬೇಕು. ಅದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
– ಡಾ| ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ