ಜಿಲ್ಲೆಯಲ್ಲಿ ಒಟ್ಟು 68 ಸಾವಿರ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಇದ್ದು, ಮುಂದಿನ 3-4 ತಿಂಗಳುಗಳಲ್ಲಿ ಸಮಸ್ಯೆ ಇತ್ಯರ್ಥಗೊಳಿಸಲಾಗು ವುದು ಎಂದು ಶನಿವಾರ ಇಲಾಖೆಯ ಪ್ರಗತಿ ಪರಿಶೀಲನ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
Advertisement
ಕುಮ್ಕಿ, ಬಾಣೆ ಇತ್ಯಾದಿ ಸಮಸ್ಯೆ ಬಗೆಹರಿಸಲು ಅರಣ್ಯ, ಕಂದಾಯ ಇಲಾಖೆ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದರು.
ಜನರಿಗಾಗಿ ಹೊಸ ರಸ್ತೆ ನಿರ್ಮಾಣಕ್ಕೆ ವನ್ಯಜೀವಿ ಮೀಸಲು ಅರಣ್ಯವಲ್ಲದಿದ್ದರೆ ಅನುಮತಿ ನೀಡಲು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಅಧಿಕಾರ ಕೊಡಲಾಗಿದೆ. ಮೀಸಲು ಅರಣ್ಯ ಪ್ರದೇಶವಾಗಿದ್ದರೆ ಆನ್‌ಲೈನ್‌ನಲ್ಲಿ ಪ್ರಸ್ತಾವನೆ ಸಲ್ಲಿಸಬೇಕು. ಮಂಡಳಿ ಅಧ್ಯಕ್ಷರಾಗಿ ಸಿಎಂ, ಉಪಾಧ್ಯಕ್ಷರಾಗಿ ಅರಣ್ಯ ಸಚಿವರಿದ್ದು ಸಭೆ ನಡೆಸಿ ಅನುಮತಿ ನೀಡಲಾಗುವುದು ಎಂದರು.
ಮೆಸ್ಕಾಂ ಕಾಮಗಾರಿಯಾಗಿದ್ದರೆ, ಮೀಸಲು ಅರಣ್ಯ 12 ಹೆಕ್ಟೇರ್‌ಗಿಂತ ಹೆಚ್ಚಾಗಿದ್ದರೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಕೇಂದ್ರ ಸರಕಾರದ ಪ್ರಾದೇಶಿಕ ಕಚೇರಿ ಸ್ತರದಲ್ಲಿ ಸಭೆ ನಡೆಸಿ ಇದರ ಕುರಿತು ಅನುಮತಿ ಕೊಡಿಸಲು ಪ್ರಯತ್ನಿಸುತ್ತೇನೆ ಎಂದರು.
ಬಸ್ ತಂಗುದಾಣ, ಸೇತುವೆ ಇತ್ಯಾದಿ ನಿರ್ಮಿಸುವಾಗ ಗಿಡಗಳನ್ನು ಕಡಿಯದೆ ಇದ್ದರೆ ಮಾನವೀಯ ದೃಷ್ಟಿಯಿಂದ ಎನ್‌ಒಸಿ ನೀಡುವ ಬಗೆಗೂ ಶೀಘ್ರವೇ ಸುತ್ತೋಲೆ ಹೊರಡಿಸಲಾಗುವುದು. ಪೇಜಾವರ ವಿಶ್ವೇಶತೀರ್ಥ ಶ್ರೀಗಳ ಹೆಸರಿನಲ್ಲಿ ನೀಲಾವರದಲ್ಲಿ ಸ್ಮತಿವನ ನಿರ್ಮಾಣವಾಗಲಿದೆ ಎಂದರು.