Advertisement

ಮರಳಿನ ಸಮಸ್ಯೆ ಪರಿಹರಿಸುವಂತೆ ಆಗ್ರಹ: ಘೋಟ್ನೇಕರ

10:15 AM Nov 18, 2021 | Team Udayavani |

ದಾಂಡೇಲಿ: ದಾಂಡೇಲಿ, ಹಳಿಯಾಳ ತಾಲೂಕಿನಲ್ಲಿ ಮರಳಿನ ಸಮಸ್ಯೆ ತೀವ್ರವಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಸರಕಾರಿ ಹಾಗೂ ಖಾಸಗಿ ಕಟ್ಟಡ ನಿರ್ಮಾಣ ಕಾರ್ಯಗಳನ್ನು ನಡೆಸಲು ಕಷ್ಟವಾಗಿದೆ. ಮಳೆಗಾಲದ ಸಂದರ್ಭದಲ್ಲಿ ನದಿಯಿಂದ ಹೊರಬರುವ ಮರಳನ್ನು ತೆಗೆಯಲು ಸಹ ಅನುಮತಿ ನೀಡಲಾಗುತ್ತಿಲ್ಲ.  ಸೂಪಾ ಅಣೆಕಟ್ಟಿಗಾಗಿ ತಮ್ಮ ಭೂಮಿಯನ್ನೆ ಕಳೆದುಕೊಂಡ ರಾಮನಗರದ ಜನತೆ ಕಷ್ಟದಲ್ಲಿದ್ದಾರೆ. ಕೂಡಲೆ ಮರಳಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಅವರು ಬುಧವಾರ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮದ ಮೂಲಕ ರಾಜ್ಯ ಸರಕಾರವನ್ನು ಆಗ್ರಹಿಸಿದರು.

Advertisement

ಇದನ್ನೂ ಓದಿ:ಕೇಂದ್ರ ಸರ್ಕಾರವು ಉಗ್ರರ ಹೆಸರಿನಲ್ಲಿ ನಾಗರಿಕರನ್ನು ಕೊಲ್ಲುತ್ತಿದೆ: ಮೆಹಬೂಬಾ ಮುಫ್ತಿ

ಮರಳಿನ ಸಮಸ್ಯೆಯ ಬಗ್ಗೆ ನಾನು ಈಗಾಗಲೆ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದಿದ್ದೇನೆ. ಮರಳಿನ ಸಮಸ್ಯೆ ಪರಿಹರಿಸುವಂತೆ ಹೋರಾಟ ಮಾಡಿದ್ದೇನೆ. ನಾಡಿಗೆ ಬೆಳಕನ್ನು ನೀಡಲು ತಮ್ಮ ಫಲವತ್ತನೆಯ ಭೂಮಿಯನ್ನೆ ಕಳೆದುಕೊಂಡ ರಾಮನಗರದ ಜನತೆಯ ಬದುಕಿನಲ್ಲಿ ಕತ್ತಲೆ ಆವರಿಸಿದೆ. ಅವರ ಬದುಕಿನಲ್ಲಿಯೂ ಬೆಳಕನ್ನು ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ರೀತಿಯ ಕ್ರಮವನ್ನು ಕೈಗೊಂಡು ಮರಳಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next