Advertisement

ಕಾಂತರಾಜ್‌ ವರದಿ ಅನುಷ್ಠಾನಕ್ಕೆ ಆಗ್ರಹ

03:25 PM Aug 14, 2021 | Team Udayavani |

ಕೋಲಾರ: ರಾಜ್ಯದ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬುವ ಮತ್ತೊಂದು ಹಂತದ ಹೋರಾಟಕ್ಕೆ ಕೋಲಾರ  ಸಾಕ್ಷಿಯಾಗುತ್ತಿದೆ. ಹೋರಾಟಗಳ ತವರು ಜಿಲ್ಲೆ ಎನಿಸಿಕೊಂಡಿರುವ ಕೋಲಾರ ನೆಲದಿಂದಲೇ ಹಿಂದೊಮ್ಮೆ 25 ವರ್ಷಗಳ ಹಿಂದೆ ಅಹಿಂದ ಹೋರಾಟ ಆರಂಭವಾಗಿ ಹಿಂದುಳಿದ ವರ್ಗಗಳಲ್ಲಿ ಚೈತನ್ಯ ತುಂಬುವಲ್ಲಿ ಸಹಕಾರಿಯಾಗಿತ್ತು. ರಾಜಕೀಯವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಕೋಲಾರದ ಅಹಿಂದ ಚಳವಳಿ ವೇದಿಕೆಯನ್ನು ರೂಪಿಸಿತ್ತು.

Advertisement

ಈ 25 ವರ್ಷಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ, ಚಪ್ಪನ್ನಾರು ಜಾತಿಗಳಾಗಿ ವಿಭಜನೆಯಾಗಿರುವ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಸಾಮಾಜಿಕ,ಆರ್ಥಿಕ, ರಾಜಕೀಯ, ಶೈಕ್ಷಣಿಕ ಪರಿಸ್ಥಿತಿಯನ್ನು ಅವಲೋಕಿಸಿದರೆ ಬದಲಾವಣೆ ಶೂನ್ಯ ಎನಿಸುತ್ತಿದೆ.ಜನಸಂಖ್ಯೆ ಹೆಚ್ಚಿರುವ ಸಮುದಾಯಗಳು ರಾಜಕೀಯ ಸ್ಥಾನಮಾನಗಳನ್ನು ಕಬಳಿಸುತ್ತಿರುವುದು, ಬಲಾಡ್ಯ ಸಮುದಾಯಗಳ ಆರ್ಭಟದಲ್ಲಿ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಸಮುದಾಯವು ಧ್ವನಿ ಕಳೆದುಕೊಂಡಿರುವುದು ವಾಸ್ತವದ ಸ್ಥಿತಿಯಾಗಿದೆ.

ಇದನ್ನೂ ಓದಿ:‘ಇನ್ನಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಿ’: ಶಾಸಕ ಶ್ರೀನಿವಾಸ್- ಸಂಸದ ಬಸವರಾಜ್ ಮಾತಿನ ಸಮರ

ಅಹಿಂದ: ಸರಿಯಾಗಿ 25 ವರ್ಷಗಳ ಹಿಂದೆ 1997ರಲ್ಲಿ ಹಿಂದುಳಿದ ವರ್ಗಗಳನ್ನು ದಲಿತ ಹಾಗೂ ಅಲ್ಪಸಂಖ್ಯಾತರನ್ನೊಳಗೊಂಡಂತೆ ಸಂಘಟಿಸಲು ಕೋಲಾರ ನೆಲದಿಂದಲೇ ಅಹಿಂದ ಚಳವಳಿ ಆರಂಭವಾಗಿತ್ತು. ಸಾಮಾನ್ಯಕ್ಷೇತ್ರಗಳಲ್ಲಿ ಬಲಾಡ್ಯ ಸಮುದಾಯಗಳೇ ಶಾಸಕ, ಸಂಸದರಾಗಿ ಆಯ್ಕೆಯಾಗುತ್ತಿದ್ದ ಸಂದರ್ಭದಲ್ಲಿ ಹಿಂದುಳಿದವರನು ಸಂಘಟಿಸಿ ಒಗ್ಗೂಡಿಸಿ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸವಲತ್ತುಗಳನ್ನು ದಕ್ಕಿಸಿಕೊಳ್ಳಬೇಕೆಂಬ ಧ್ಯೇಯದಿಂದಲೇ ಅಹಿಂದ ಚಳವಳಿಗೆ ಅವಿಭಜಿತ ಕೋಲಾರ ಜಿಲ್ಲೆ ವೇದಿಕೆಯಾಗಿತ್ತು.

ಎಚ್‌.ಡಿ.ದೇವೇಗೌಡ ಪ್ರಧಾನಿಯಾಗಿ, ಜೆ.ಎಚ್‌.ಪಟೇಲ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವರಾಗಿದ್ದ ಆರ್‌.ಎಲ್‌.ಜಾಲಪ್ಪರ ಮಾರ್ಗದರ್ಶನದಲ್ಲಿ ಅಹಿಂದ ಚಳವಳಿಗೆ ನಾಂದಿ ಹಾಡಲಾಗಿತ್ತು. ಖ್ಯಾತ ವಕೀಲರು ಹಾಗೂ ಅನೇಕ ಸಾಮಾಜಿಕ ಚಳವಳಿಗಳ ನೇತಾರರು ಆಗಿರುವ ಸಿ.ಎಸ್‌.ದ್ವಾರಕಾನಾಥ್‌ ಅಹಿಂದ ಪದವನ್ನು ಹೋರಾಟಕ್ಕೆಕೊಡುಗೆಯಾಗಿ ನೀಡಿದ್ದರು.

Advertisement

ಅವಿಭಜಿತ ಕೋಲಾರ ನೆಲದಲ್ಲಿ ತೀವ್ರಗತಿಯಲ್ಲಿದ್ದ ದಲಿತ ಚಳವಳಿ ಮಾದರಿಯಲ್ಲಿ ಹಿಂದುಳಿದವರ ಚಳವಳಿಯನ್ನು ಅಲ್ಪಸಂಖ್ಯಾತರನ್ನು ಸೇರಿಸಿಕೊಂಡು ಮುಂದುವರೆಸುವ ಉದ್ದೇಶ ‌ ಈಚಳವಳಿಯದ್ದಾಗಿತ್ತು. ವಿಧಾನ ಪರಿಷತ್‌ ಸದಸ್ಯರಾಗಿದ್ದ ವಿ.ಆರ್‌.ಸುದರ್ಶನ್‌, ದಲಿತ ಚಳವಳಿಯ ಸಿ.ಎಂ.ಮುನಿಯಪ್ಪ,ಲಕ್ಷ್ಮೀಪತಿ ಕೋಲಾರ, ಮುನಿಸ್ವಾಮಿ, ಹ.ಸೋಮಶೇಖರ್‌ ಇತರರು ಅವಿಭಜಿತಕೋಲಾರ ಜಿಲ್ಲೆಯ ಪ್ರತಿ
ಗ್ರಾಮವನ್ನು ಸುತ್ತಾಡಿಹೋರಾಟವನ್ನು ಸಂಘಟಿಸಿದ್ದರು.ಅಹಿಂದ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಲಾಯಂಸಿಂಗ್‌ ಯಾದವ್‌ ಆಗಮಿಸಬೇಕಾಗಿತ್ತಾದರೂ ಸಾಧ್ಯವಾಗಿರಲಿಲ್ಲ. ಈಗ ಉಪ ಮುಖ್ಯಮಂತ್ರಿ ಯಾಗಿದ್ದ ಸಿದ್ದರಾಮಯ್ಯ ಹಾಗೂ ದಲಿತ ಚಳವಳಿಯ ಮಾರ್ಗದರ್ಶಕರಾಗಿರುವ ದೇವನೂರು ಮಹದೇವ ಅಹಿಂದ ಕಾರ್ಯಕ್ರಮವನ್ನು ಸಹಸ್ರಾರು ಜನರ ಸಮ್ಮುಖದಲ್ಲಿ ಉದ್ಘಾಟಿಸಿದ್ದು ಐತಿಹಾಸ
ವಾಗಿತ್ತು.ಈ ಕಾರ್ಯಕ್ರಮ ಹಿಂದುಳಿದ ವರ್ಗಗಳಲ್ಲಿ ಹೊಸಚೈತನ್ಯ ತುಂಬಲು ಸಹಕಾರಿಯಾಗಿತ್ತು.

ಸಿದ್ದರಾಮಯ್ಯ ನೇತೃತ್ವ: ಕೋಲಾರದಲ್ಲಿ 1997 ರಲ್ಲಿ ಆರಂಭವಾಗಿದ್ದ ಅಹಿಂದ ಚಳವಳಿಯ ಕೋಲಾರ ದಾಟಿ ಇಡೀ ರಾಜ್ಯ ತಲುಪಿದ್ದು, ಸಿದ್ದರಾಮಯ್ಯ ಜೆಡಿಎಸ್‌ ತೊರೆದಾಗಲೇ. ಅಹಿಂದ ಹೆಸರಿನಲ್ಲಿಯೇ ಹುಬ್ಬಳ್ಳಿ, ಹಾಸನದಲ್ಲಿ ಬೃಹತ್‌ ಕಾರ್ಯಕ್ರಮವನು ° ಆಯೋಜಿಸಿದ್ದ
ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಅದ್ವಿತೀಯ ನಾಯಕರಾಗಿ ಹೊರ ಹೊಮ್ಮಿದ್ದರು. ನಂತರದ ದಿನಗಳಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ ಸೇರ್ಪಡೆಯಾಗಿ ರಾಜ್ಯದ ಮುಖ್ಯಮಂತ್ರಿ ಗಾದಿಗೇರಲು ಇದೇ ಅಹಿಂದ ಚಳವಳಿ ಸಹಕಾರ ನೀಡಿತ್ತು.

ಕಾಂತರಾಜ್‌ ವರದಿ
ರಾಜ್ಯದಲ್ಲಿ ಆರ್ಥಿಕವಾಗಿ ರಾಜಕೀಯವಾಗಿ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುತ್ತಿರುವ ಬಲಾಡ್ಯಜಾತಿಗಳು ಹಿಂದುಳಿದ ಹಾಗೂಅತಿ ಹಿಂದುಳಿದ ವರ್ಗಗಳನ್ನು ಕಡೆಗಣಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಇದರಿಂದ ಹಿಂದುಳಿದವರ ಹಾಗೂಇತರೇಜಾತಿಗಳ ನಿಖರ
ಜನಸಂಖ್ಯೆ ಅರಿತುಕೊಳ್ಳುವ ಸಲುವಾಗಿಯೇ 162 ಕೋಟಿರೂ. ವೆಚ್ಚ ಮಾಡಿ ಕಾಂತರಾಜ್‌ ವರದಿಯನ್ನು ರೂಪಿಸಲಾಗಿದೆ. ಆದರೆ,ಈ ವರದಿಯನ್ನು ಸರಕಾರಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ವರದಿಯ ಮುಖ್ಯಾಂಶಗನ್ನು ಜನಸಂಖ್ಯಾ ನಿಖರ ಮಾಹಿತಿಯನ್ನು
ಬಹಿರಂಗಪಡಿಸುತ್ತಿಲ್ಲ.ಈ ಮಾಹಿತಿ ಹೊರಬಿದ್ದರೆಜನಸಂಖ್ಯೆಗೆ ತಕ್ಕಂತೆ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ರಾಜಕೀಯ ಸ್ಥಾನ ನೀಡಬೇಕಾಗುತ್ತದೆ. ಜನಸಂಖ್ಯೆ ನಿಖರ ಅಂಶಗಳು ಹಿಂದುಳಿದವರಲ್ಲಿ ಚೈತನ್ಯ ಮೂಡಿಸುತ್ತದೆ ಎಂಬಕಾರಣಕ್ಕೆ ಮೂಲೆಗುಂಪು ಮಾಡಲಾಗಿದೆ.

ಮತ್ತೊಂದು ಹೋರಾಟ
ಕಾಂತರಾಜ್‌ ವರದಿಯನ್ನು ಸರಕಾರಗಳು ಸ್ಪೀಕರಿಸಿ ಬಹಿರಂಗಪಡಿಸಬೇಕು, ವರದಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಅನುಷ್ಠಾನಕ್ಕೆ ತರಬೇಕೆಂಬ ಉದ್ದೇಶದಿಂದಲೇ ಮತ್ತೆ ಹಿಂದುಳಿದ ವರ್ಗಗಳ ಮತ್ತು ಅತಿ ಹಿಂದುಳಿದ ವರ್ಗಗಳ ಒಕ್ಕೂಟದ ಹೆಸರಿನಲ್ಲಿ ಹೋರಾಟಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.

ಹೋರಾಟದ ಸಿದ್ಧತೆಯ ಭಾಗವಾಗಿ ಕೋಲಾರ ಜಿಲ್ಲಾ ಕೇಂದ್ರದಿಂದಲೇ ಜಾಗೃತಿ ಸಭೆಗಳಿಗೆ ಚಾಲನೆ ನೀಡಲು ಹಿಂದುಳಿದ ವರ್ಗಗಳು ಮುಂದಾಗಿದ್ದು, ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಆ.14ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಹಿಂದುಳಿದ ಮುಖಂಡರ ಸುದ್ದಿಗೋಷ್ಠಿ,12 ಗಂಟೆಗೆ ಸಭೆಯನ್ನು ಕರೆಯಲಾಗಿದೆ. ಸಭೆಗೆ ಮುಖಂಡರಾದ ಎಂ.ಸಿ.ವೇಣುಗೋಪಾಲ್‌, ದ್ವಾರಕಾನಾಥ್‌, ಪ್ರೊ.ರವಿವರ್ಮಕುಮಾರ್‌, ವಿ.ಆರ್‌.ಸುದರ್ಶನ್‌, ಪಿ.ಆರ್‌.ರಮೇಶ್‌,ಕೆ.ಪಿ.ನಂಜುಂಡಿ, ಪ್ರೊ.ನರಸಿಂಹಯ್ಯ,ನೆ.ಲ.ನರೇಂದ್ರಬಾಬು, ಎಸ್‌.ಆರ್‌.ಯಲ್ಲಪ್ಪ,ಡಾ.ಜಿ.ರಮೇಶ್‌, ಎಚ್‌.ಸುಬ್ಬಣ್ಣ, ಬಿ.ವೆಂಕಟೇಶ್‌ ಇತರರು ಆಗಮಿಸುತ್ತಿದ್ದಾರೆ.

ಕೋಲಾರದಿಂದ ಆರಂಭವಾಗುವ ಯಾವುದೇ ಹೋರಾಟ ರಾಜ್ಯ ವ್ಯಾಪಿಸುತ್ತದೆಯೆಂಬ ಮಾತಿದೆ. ಹಾಗೆಯೇ ಹಿಂದುಳಿದ ವರ್ಗಗಳ ಮತ್ತೊಂದು ಹೋರಾಟ ಕೋಲಾರದಿಂದ ಆರಂಭವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಭೆ ನಡೆಸುವ ಮೂಲಕ ರಾಜ್ಯವ್ಯಾಪಿ ಹೋರಾಟವನ್ನು ಸಜ್ಜುಗೊಳಿಸಲಾಗುತ್ತಿದೆ. ಈ ಮೂಲಕ ಕಾಂತರಾಜ ವರದಿ ಬಹಿರಂಗಗೊಂಡು ವರದಿ ಶಿಫಾರಸುಗಳು ಅನುಷ್ಠಾನಗೊಂಡು ಹಿಂದುಳಿದ, ಅತಿ
ಹಿಂದುಳಿದ ವರ್ಗಗಳಲ್ಲಿ ರಾಜಕೀಯ ಚೈತನ್ಯ ಮೂಡಿಸುತ್ತದೆಯೆಂದು ನಿರೀಕ್ಷಿಸಲಾಗುತ್ತಿದೆ.

ಹಿಂದುಳಿದವರನ್ನು ಒಗ್ಗೂಡಿ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ, ಆರ್ಥಿಕ ಸೌಲಭ್ಯಗಳನ್ನುಕಲ್ಪಿಸಬೇಕೆಂಬ ಉದ್ದೇಶದಿಂದಲೇ 1997ರಲ್ಲಿ ಅಹಿಂದ ಚಳವಳಿಯನ್ನು ಆರ್‌. ಎಲ್‌.ಜಾಲಪ್ಪ ಹಾಗೂ ಇತರೇ ಮುಖಂಡರ ಸಹಕಾರದಿಂದ ಅವಿಭಜಿತಕೋಲಾರ ಜಿಲ್ಲೆಯಿಂದಲೇ ಆರಂಭಿಸಲಾಗಿತ್ತು.
-ವಿ.ಆರ್‌.ಸುದರ್ಶನ, ಮಾಜಿ ಸಭಾಪತಿ,ಕೋಲಾರ

ಕಾಂತರಾಜ್‌ ವರದಿ ಅನುಷ್ಠಾನದ ಬೇಡಿಕೆ ಮತ್ತು ಹಿಂದುಳಿದ ವರ್ಗಗಳ ಸಂಘಟನೆ, ಜಾಗೃತಿ ಮೂಡಿಸುವ ಉದ್ದೇಶದಿಂದ ಮತ್ತೊಂದು ಹಂತದ ಹೋರಾಟಕ್ಕೆಕೋಲಾರದಿಂದಲೇ ಮತ್ತೆ ಚಾಲನೆ ನೀಡಲಾಗುತ್ತಿದೆ. ನಂತರ ಪ್ರತಿ ಜಿಲ್ಲಾಕೇಂದ್ರದಲ್ಲೂ ಈ ರೀತಿಯ
ಸಭೆಗಳು ನಡೆಯಲಿವೆ.
-ಪ್ರಸಾದ್‌ ಬಾಬು ಅಧ್ಯಕ್ಷ, ಫ‌ಲ್ಗುಣ, ಪ್ರಧಾನ ಕಾರ್ಯದರ್ಶಿ, ಕೋಲಾರ
ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ.

– ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next