Advertisement
ಗುಲ್ವಾಡಿಯಲ್ಲಿ ವೆಂಟೆಂಡ್ ಡ್ಯಾಂ ನಿರ್ಮಾಣವಾದ ಬಳಿಕ ಇಲ್ಲಿನ ಬೈಲ್ಮನೆ ಕೆರೆ, ಗುಲ್ವಾಡಿಯ ಕೆಲವು ಭಾಗ, ಗುಡರಹಕ್ಲು ಭಾಗಗಳ ಕೃಷಿಗೆ ಉಪ್ಪು ನೀರಿನ ಸಮಸ್ಯೆ ಎದುರಾಗುತ್ತಿದೆ. ಹಿಂದೆ ಈ ಸಮಸ್ಯೆ ಇರಲಿಲ್ಲ.
Related Articles
Advertisement
ಇದರಿಂದಾಗಿ ಇಲ್ಲಿನ ಸುಮಾರು 20-25 ಮಂದಿಯ ಸುಮಾರು 25 ಎಕರೆ ಪ್ರದೇಶದಲ್ಲಿ ಹಿಂಗಾರು ಹಂಗಾಮಿನ ಭತ್ತದ ಕೃಷಿಗೆ ತೊಡಕಾಗಿದೆ. ಕೆಲವರಂತೂ ಇಲ್ಲಿ ಉಪ್ಪು ನೀರಿನ ಸಮಸ್ಯೆಯಿಂದಾಗಿ ಹಿಂಗಾರು ಹಂಗಾಮಿನಲ್ಲಿ ಭತ್ತದ ಕೃಷಿಯನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಇನ್ನು ಕೃಷಿಗೆ ಮಾತ್ರವಲ್ಲ, ಬೇಸಗೆಯಲ್ಲಿ ಈ ಭಾಗದಲ್ಲಿ ನೀರಿನ ಸಮಸ್ಯೆಯೂ ಇದ್ದು, ಈ ಕೆರೆಗೆ ನೀರು ಹಾಯಿಸಿದರೆ, ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳ ಬಾವಿಯ ಅಂತರ್ಜಲ ಮಟ್ಟವೂ ಸುಧಾರಿಸಲಿದೆ.
ಮನವಿ ಸಲ್ಲಿಕೆ
ಅಲ್ಲಿನ ಗ್ರಾಮಸ್ಥರು ಈ ಕುರಿತಂತೆ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿದರೆ, ಖಂಡಿತವಾಗಿಯೂ ಈ ಬಗ್ಗೆ ಸಂಬಂಧಪಟ್ಟ ವಾರಾಹಿ ನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. – ಸುಧೀಶ್ ಶೆಟ್ಟಿ, ಅಧ್ಯಕ್ಷರು, ಗುಲ್ವಾಡಿ ಗ್ರಾ.ಪಂ.
ಪರಿಶೀಲನೆ
ಗುಲ್ವಾಡಿಯಲ್ಲಿ ಈಗಾಗಲೇ ಒಂದೆರಡು ಕಡೆಗಳಲ್ಲಿ ಸೌಕೂರು ಏತ ನೀರಾವರಿ ಯೋಜನೆಯ ನೀರನ್ನು ಹಾಯಿಸಲು ಕ್ರಮಕೈಗೊಳ್ಳಲಾಗಿದೆ. ಬೈಲ್ಮನೆ ಕೆರೆಗೆ ನೀರು ಹಾಯಿಸುವ ಸಂಬಂಧ ಅಲ್ಲಿಗೆ ಭೇಟಿ, ನೀಡಿ ಪರಿಶೀಲಿಸಲಾಗುವುದು. – ಪ್ರಸನ್ನ ಶೇಟ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ವಾರಾಹಿ ನಿಗಮ