ಆಲಮೇಲ: ದಲಿತ ಯುವತಿ ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ಹಾಗೂ ಅಂಬೇಡ್ಕರ್ ಮೂರ್ತಿ ತೆರವುಗೊಳಿಸಲು ಮುಂದಾದ ಅಧಿಕಾರಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಅಧಿಕಾರಿ ರೂಶಿ ಆನಂದ ಅವರಿಗೆ ಮನವಿ ಸಲ್ಲಿಸಿದರು.
ಆಲಮೇಲ ತಾಲೂಕು ಅಂಬೇಡ್ಕರ್ ಸೇನೆಯ ತಾಲೂಕು ಅಧ್ಯಕ್ಷ ಅಮಿತ್ ಬ್ಯಾಕೋಡ್ ನೇತೃತ್ವದಲ್ಲಿ ಸೇನೆಯ ಪದಾಧಿಕಾರಿಗಳು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಪಂಕಜ ನಾಯ್ಕೋಡಿ, ಪವನ ಕಾಳೆ ಮಾತನಾಡಿ, ಕಾನೂನು ಸುವ್ಯವಸ್ಥೆ ಹದಗೆಟ್ಟು ದಲಿತ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಬೆಂಗಳೂರಿನಲ್ಲಿ ನಡೆದ ದಲಿತ ಯುವತಿ ಕೊಲೆಯನ್ನು ಸರ್ಕಾರ ಮರ್ಯಾದ ಹತ್ಯೆ ಎಂದು ಪರಿಗಣಿಸಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಉದ್ಯಾನವನದಲ್ಲಿ ಡಾ| ಬಾಬಾಸಾಹೇಬ ಅಂಬೇಡ್ಕರ ಮೂರ್ತಿ ತೆರವುಗೊಳಿಸಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ಸರ್ಕಾರ ಕ್ರಮಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಶರಣಪ್ಪ ನಾಟೀಕಾರ, ವಿಜಯ ಬ್ಯಾಕೋಡ್, ಆಕಾಶ ಆಹೇರಿ, ಸತೀಶ ಕಮಲಾಕರ, ಸಚಿನ ಶಂಬೇವಾಡ, ರವಿ ಪೂಜಾರಿ, ಅಭಿಷೇಕ ಕೇಳಗಿನಮನಿ, ಉಪ ತಹಶೀಲ್ದಾರ್ ಜೋತಿ ಮುಚ್ಚಂಡಿ, ಕಂದಾಯ ನಿರೀಕ್ಷಕ ಎಮ್.ಎ.ಅತ್ತಾರ, ಶಿರಸ್ತೇದಾರ ಪಿ.ಎಸ್.ಮೂಕಿಹಾಳ, ಎಮ್.ಎ. ಅವರಾದಿ, ಗ್ರಾಮಲೆಕ್ಕಾಧಿಕಾರಿ ಭೀಮಣ್ಣ ಜೇರಟಗಿ, ಎಸ್. ಎಸ್.ಬಾಪಗೊಂಡ, ಜಿ.ಎಸ್.ಗಂಗನಹಳ್ಳಿ ಇದ್ದರು.