ದೇವದುರ್ಗ: ಅತಿ ಹೆಚ್ಚು ಗುಡ್ಡಗಾಡು ಹೊಂದಿರುವ ತಾಲೂಕು ಭೂ ಪ್ರದೇಶ ಅರಣ್ಯ ಹಾಗೂ ಸಸ್ಯ ಕ್ಷೇತ್ರಕ್ಕೆ ಹೆಸರುವಾಸಿಯಾಗಿದೆ.ಇಲ್ಲಿ ಬೆಳೆಯುವ ಸೀತಾಫಲಕ್ಕೆ ಬಹು ಬೇಡಿಕೆ ಇದೆ. ಇಲ್ಲಿ ದೊರೆಯುವ ಹಣ್ಣುಗಳು ಮಹಾರಾಷ್ಟ್ರ, ಪುಣೆ, ಆಂಧ್ರಪ್ರದೇಶ ಸೇರಿ ಹೊರ ಜಿಲ್ಲೆಗಳಿಗೂರಫ್ತಾಗುತ್ತಿವೆ. ನಾಲ್ಕು ಹೋಬಳಿಯ ಸುಮಾರು12 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹೊಂದಿದೆ. ಇಲ್ಲಿ ವಿವಿಧ ತಳಿಯ ಗಿಡಗಳ ಜತೆಗೆ ಹಣ್ಣಿನ ಮರಗಳಿವೆ. ಅರಣ್ಯ ಇಲಾಖೆ ಕಾಯ್ದಿಟ್ಟ ಗಲಗ, ಅರಕೇರಾ, ದೇವದುರ್ಗ, ಜಾಲಹಳ್ಳಿ, ಬುಂಕಲದೊಡ್ಡಿ, ಮುಂಡರಗಿ, ವೆಂಗಳಾಪುರ, ಕರಿಗುಡ್ಡ, ಮೇದಿನಾಪುರ, ಬುಂಕಲದೊಡ್ಡಿ, ಕರಡಿಗುಡ್ಡದಲ್ಲಿ ಅಪಾರ ಸೀತಾ ಫಲ ಗಿಡಗಳಿವೆ. ಅಲ್ಲದೇ ಸರ್ಕಾರಿ ಜಾಗ, ರೈತರ ಜಮೀನಿನಲ್ಲೂ ಸಾವಿರಾರು ಸೀತಾಫಲ ಗಿಡಗಳಿವೆ.
ರೈತರು ಜಮೀನಿನನಲ್ಲಿ ಬೆಳೆದ ಹಣ್ಣುಗಳನ್ನು ಮಾರುಕಟ್ಟೆಗೆ ನೀಡಿದರೆ, ಅರಣ್ಯ ಪ್ರದೇಶದಲ್ಲಿ ಬೆಳೆಯುವ ಹಣ್ಣುಗಳನ್ನು ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಟೆಂಡರ್ ಮೂಲಕ 3 ವರ್ಷಗಳ ಕಾಲ ಅರಣ್ಯ ಇಲಾಖೆ ಗುತ್ತಿಗೆ ನೀಡುತ್ತಿದೆ. ಗುತ್ತಿಗೆದಾರರು ಇಲ್ಲಿ ಸಂಗ್ರಹಿಸಿದ ಹಣ್ಣುಗಳನ್ನು ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಸಾಗಿಸುತ್ತಿದ್ದಾರೆ.
ಸೀತಾಫಲ, ರಾಮಫಲ, ಹನುಮಫಲ ಹಣ್ಣಿನ ತಳಿಗಳಾಗಿದ್ದು, ನಮ್ಮ ಭಾಗದಲ್ಲಿ ಸೀತಾಫಲ ಅತ್ಯಂತ ಪ್ರಸಿದ್ಧಿಯಾಗಿದೆ. ಕರಿಗುಡ್ಡ, ಅರಕೇರಾ, ಗಲಗ, ಮುಂಡರಗಿ ಭಾಗದ ಹಣ್ಣುಗಳು ಅತ್ಯಂತ ರುಚಿಕರ ಹಾಗೂ ಫೇಮಸ್ ಆಗಿವೆ. ಪಟ್ಟಣದ ಬಸ್ ನಿಲ್ದಾಣ ಮುಂಭಾಗ, ಕಟಕರ ಕಟ್ಟೆ, ಮಿನಿ ವಿಧಾನಸೌಧ ಮುಂಭಾಗ, ಅರಕೇರಾ, ಗಲಗ, ಜಾಲಹಳ್ಳಿ ಪಟ್ಟಣದಲ್ಲಿ ಬೆಳಗ್ಗೆ ಹಣ್ಣುಗಳು ಬರುತ್ತವೆ.
ನಶಿಸಿದವು ಲಕ್ಷಾಂತರ ಗಿಡಗಳು : ಗುಡ್ಡಗಾಡು ಪ್ರದೇಶದಿಂದ ಕೂಡಿದ್ದ ದೇವದುರ್ಗ ತಾಲೂಕು ನಾರಾಯಣಪುರ ಬಲದಂಡೆ ನಾಲೆ ಬಂದ ನಂತರ ಬಹುತೇಕ ಪ್ರದೇಶ ಕ್ಷೀಣಿಸುತ್ತಿದೆ. ಖಾಲಿ ಜಾಗ, ಜಮೀನುಗಳನ್ನುರೈತರು ಭತ್ತದ ಗದ್ದೆಗಳಾಗಿ ಮಾರ್ಪಡಿಸಿದ್ದಾರೆ. ಗುಡ್ಡಗಾಡು ಒತ್ತುವರಿಯಾಗಿ ಅರಣ್ಯ ಪ್ರದೇಶ ಕೂಡ ಕುಸಿದಿದೆ. ಇದರಿಂದ ಸೀತಾಫಲ ಗಿಡಗಳು ನಶಿಸಿವೆ. ಕೆಲ ವರ್ಷಗಳ ಹಿಂದೆ ಸೀತಾಫಲಸೀಸನ್ ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್‌ವರೆಗೆ ಇರುತ್ತಿತ್ತು. ಆದರೆ ಈ ಬಾರಿ ಹಣ್ಣಿನ ಸೀಸನ್ ಒಂದು ತಿಂಗಳಿಗೆ ಇಳಿದಿದೆ
ತಾಲೂಕಿನಲ್ಲಿ 12 ಸಾವಿರ ಹೆಕ್ಟೇರ್‌ನಷ್ಟು ಅರಣ್ಯಪ್ರದೇಶವಿದೆ. 14ಕ್ಕೂ ಹೆಚ್ಚು ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಲಕ್ಷಾಂತರ ಸೀತಾಫಲ ಗಿಡಗಳಿವೆ.ಅರಣ್ಯ ಪ್ರದೇಶದ ಗಿಡಗಳನ್ನು 3 ವರ್ಷಗಳ ಕಾಲ ಟೆಂಡರ್ ಮೂಲಕಗುತ್ತಿಗೆದಾರರಿಗೆ ನೀಡಲಾಗುತ್ತಿದೆ.
-ಹೆಸರು ಹೇಳಲಿಚ್ಛಿಸದ ಅರಣ್ಯ ರಕ್ಷಕ