Advertisement

ಕಾಂಞಂಗಾಡಿನಲ್ಲಿ  ಟ್ರೋಮಾ ಕೇರ್‌ ಸೆಂಟರ್‌ ಸ್ಥಾಪಿಸಲು ಆಗ್ರಹ

06:35 AM Aug 28, 2018 | |

ಕಾಸರಗೋಡು: ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಮೂಲಭೂತ ಸೌಕರ್ಯಗಳ ಮೂಲಕ ಜಿಲ್ಲೆಯಲ್ಲಿ ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಕೊಡಮಾಡಬೇಕು ಎಂದು ಕೇಂದ್ರ ಆರೋಗ್ಯ ಸಚಿವರಲ್ಲಿ ವಿನಂತಿಸಲಾಯಿತು.

Advertisement

ಕಾಂಞಂಗಾಡು ಕೇಂದ್ರೀಕೃತವಾಗಿ ಟ್ರೋಮಾ ಕೇರ್‌ ಸೆಂಟರ್‌ ಅನ್ನು ಸ್ಥಾಪಿಸ ಬೇಕೆಂದು  ಆರೋಗ್ಯ  ಸಚಿವ  ಅಶ್ವಿ‌ನಿ ಕುಮಾರ್‌ ಚೌಬೆ ಮತ್ತು ಕೇಂದ್ರ ಆಯುಷ್‌ ಇಲಾಖೆ   ಸಚಿವ   ಶ್ರೀಪಾದ  ನಾಯಕ್‌ ಅವರಿಗೆ ನೀಡಿದ ಮನವಿಯಲ್ಲಿ ಕೇಳಿಕೊಳ್ಳಲಾಗಿದೆ.  ಕಾಂಞಂಗಾಡು ಅಭಿವೃದ್ಧಿ ಫೋರಂ- ಟ್ರೋಮಾ ಕೇರ್‌ ನಿರ್ಮಾಣದ ಮನವಿಯನ್ನು ಸಚಿವದ್ವಯರಿಗೆ ನೀಡಿದೆ. 

ಮಂಗಳೂರಿಗೇ ಓಡಬೇಕು
ಪ್ರಸ್ತುತ ಅಪಘಾತ ಸಂಭವಿಸಿದಾಗ ಸೂಕ್ತ ಚಿಕಿತ್ಸೆ ನೀಡುವ ಸೌಲಭ್ಯಗಳು ಜಿಲ್ಲೆಯ ಆಸ್ಪತ್ರೆಗಳಲ್ಲಿ ಇಲ್ಲದಾಗಿವೆೆ. ಗಂಭೀರ ರಸ್ತೆ ಅಪಘಾತಗಳು ಸಂಭವಿಸಿದ ಸಂದರ್ಭಗಳಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ದೂರದ ಮಂಗಳೂರಿಗೆ ತೆರಳಲು ಸುಮಾರು ಎರಡು ಗಂಟೆ ವ್ಯಯವಾಗುತ್ತದೆ.

ಸೌಲಭ್ಯವಿದ್ದಲ್ಲಿ ಸುರಕ್ಷೆ
ದಿನವೊಂದಕ್ಕೆ ನೂರಕ್ಕೂ ಹೆಚ್ಚು ಮಂದಿ ವಿವಿಧ ರೋಗಿಗಳು ಆ್ಯಂಬುಲೆನ್ಸ್‌ ಮೂಲಕ ಮಂಗಳೂರಿಗೆ ತೆರಳುವ ಸನ್ನಿವೇಶ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಸುಸಜ್ಜಿತ ವೈದ್ಯಕೀಯ ಸೇವಾ ಸೌಲಭ್ಯಗಳು ಲಭ್ಯವಾದಲ್ಲಿ ಹೆಚ್ಚಿನ ಅಪಾಯಗಳನ್ನು ತಪ್ಪಿಸಿ, ಆರೋಗ್ಯ ರಕ್ಷಣೆ ಸಾಧ್ಯವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಾಂಞಂಗಾಡು ಡೆವಲಪ್‌ಮೆಂಟ್‌ ಫೋರಂ ಸದಸ್ಯರಾದ ಎಂ.ಕೆ. ವಿನೋದ್‌ಕುಮಾರ್‌, ಪಿ.ಎಂ. ನಾಸರ್‌, ಎನ್‌. ನಾಸರ್‌, ಎನ್‌. ಸುರೇಶ್‌, ರಾಹುಲ್‌ಚಿತ್ತಾರಿ ಮೊದಲಾದವರು ಸಚಿವರನ್ನು ಭೇಟಿ ಮಾಡಿದ ತಂಡದಲ್ಲಿದ್ದರು.

Advertisement

ಜಿಲ್ಲೆಗೆ ಆಧುನಿಕ ವೈದ್ಯಕೀಯ ಸೌಲಭ್ಯ
ರಾಜ್ಯ ಸರಕಾರದೊಂದಿಗೆ ಚರ್ಚಿಸಿ ಜಿಲ್ಲೆಯ ವೈದ್ಯಕೀಯ ರಂಗದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯುವಲ್ಲಿ ಕೇಂದ್ರ ಮುತುವರ್ಜಿ ವಹಿಸಲಿದೆ .
– ಅಶ್ವಿ‌ನಿ ಕುಮಾರ್‌ ಚೌಬೆ 
ಕೇಂದ್ರ ಆರೋಗ್ಯ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next