Advertisement
ಹಳ್ಯಾಳ, ಬೆಳಗಲಿ, ಬು.ಅರಳಿಕಟ್ಟಿ ಹಾಗೂ ಕೋಳಿವಾಡ ಗ್ರಾಪಂಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ.ಈ ಗ್ರಾಪಂಗಳಲ್ಲಿ ಮನೆ ಮನೆ ಸರ್ವೇಮಾಡುವ ಮೂಲಕ ಮಹಿಳೆಯರಿಗೆ ತಾವುಇರುವ ಊರಿನಲ್ಲಿ ಉದ್ಯೋಗ ಲಭ್ಯತೆ ಕುರಿತುಜಾಗೃತಿ ಹಾಗೂ ಅದರ ಲಾಭಗಳ ಕುರಿತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಮನವರಿಕೆ ಮಾಡುತ್ತಿದ್ದಾರೆ.
Related Articles
Advertisement
ಇದಾದ ಒಂದು ವಾರಗಳ ಕಾಲ ಮತ್ತೆ ಎನ್‌ಎಂಆರ್ ಸಿದ್ಧಪಡಿಸಲು ಬರುವುದಿಲ್ಲ.ಆದರೆ ಕೆಲ ಗ್ರಾಮೀಣ ಭಾಗದಲ್ಲಿ ಮಹಿಳೆಯರುಕೆಲಸ ನಡೆಯುವ ಸ್ಥಳಗಳಿಗೆ ಆಗಮಿಸಿ ನಮಗೂ ಕೆಲಸ ಬೇಕು ಎನ್ನುವವರ ಸಂಖ್ಯೆ ಹೆಚ್ಚತೊಡಗಿದೆ.
ಮಹಿಳಾಸ್ನೇಹಿ ವ್ಯವಸ್ಥೆ :
ಮಹಿಳೆಯರು ಹೆಚ್ಚು ಹೆಚ್ಚು ಉದ್ಯೋಗದತ್ತತೊಡಗಿಸಬೇಕು ಎನ್ನುವ ದೃಷ್ಟಿಯಿಂದಪೂರಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅವರಮಕ್ಕಳನ್ನು ನೋಡಿಕೊಳ್ಳಲು ಆಯಾ ವ್ಯವಸ್ಥೆ,ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮಹಿಳೆಯರ 25 ಜನರ ಒಂದು ತಂಡ ಮಾಡಿ ಅವರಲ್ಲೊಬ್ಬರನ್ನು “ಕಾಯಕ ಬಂಧು’ ಎಂದು ನೇಮಕ ಮಾಡಿ ಅವರಿಗೆ ಉಸ್ತುವಾರಿ ನೀಡಲಾಗುತ್ತದೆ. ಪ್ರತಿ ಮಾನವ ದಿನಕ್ಕೆ ಕಾಯಕ ಬಂಧು ಮಹಿಳೆಗೆ 5 ರೂ. ಹಾಗೂ ಪುರುಷನಿಗೆ 4 ರೂ. ಹೆಚ್ಚುವರಿ ಹಣ ನೀಡಲಾಗುತ್ತದೆ.
ಕೆಲಸ ಬೇಕಾದರೆ ಗ್ರಾಪಂ ಸಂಪರ್ಕಿಸಿ: ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚು ಮಹಿಳೆಯರನ್ನು ಉದ್ಯೋಗ ಖಾತ್ರಿ ಯೋಜನೆಯಡಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕಾಯಕೋತ್ಸವ ಯೋಜನೆ ಜಾರಿಗೆ ತರಲಾಗಿದೆ.ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲೆಡೆ ಪ್ರಚಾರಹಾಗೂ ಸರ್ವೇ ಕಾರ್ಯ ಜಾರಿಯಲ್ಲಿದ್ದು, ಅಷ್ಟಾಗಿಯೋ ಜನರಿಗೆ ಕೆಲಸ ಸಿಗದೇಇದ್ದಲ್ಲಿ ಅವರು ನೇರವಾಗಿ ಗ್ರಾಪಂಗೆ ತೆರಳಿ ಉದ್ಯೋಗ ಬೇಕು ಎಂದು ಬೇಡಿಕೆ ಸಲ್ಲಿಸಿದಲ್ಲಿ 15 ದಿನದೊಳಗೆ ಅವರಿಗೆ ಕಾಯಕೋತ್ಸವ ಯೋಜನೆಯಡಿ ಉದ್ಯೋಗ ನೀಡಲಾಗುತ್ತದೆ.
ಮಹಿಳಾ ಕಾಯಕೋತ್ಸವ ಯೋಜನೆಯಡಿ ಸ್ವಂತ ಊರಿನಲ್ಲಿಯೇ ಕೆಲಸ ಮಾಡಿ ಕೂಲಿಪಡೆಯಬಹುದು. ಇದಲ್ಲದೇ ಉದ್ಯೋಗಕ್ಕೆ ಆಗಮಿಸುವ ಮಹಿಳೆಯರಿಗೆ ಮಹಿಳಾ ಸ್ನೇಹಿ ವ್ಯವಸ್ಥೆ ಕಲ್ಪಿಸಲಾಗುವುದು. ಮೊದಲನೇ ಹಂತದಲ್ಲಿ ನಾಲ್ಕು ಗ್ರಾಪಂಗಳು 2ನೇ ಹಂತದಲ್ಲಿ 6 ಗ್ರಾಪಂಗಳನ್ನು ತೆಗೆದುಕೊಳ್ಳಲಾಗುವುದು. –ಗಂಗಾಧರ ಕಂದಕೂರ, ತಾಪಂ ಇಒ
-ಬಸವರಾಜ ಹೂಗಾರ