Advertisement

ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸಲು ಆಗ್ರಹ

06:18 PM Aug 07, 2022 | Team Udayavani |

ಇಂಡಿ: ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸಬೇಕು ಮತ್ತು ತಾಲೂಕಿನ ವಿವಿಧ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಬೇಕೆಂದು ಆಗ್ರಹಿಸಿ ಶನಿವಾರ ಜೆಡಿಎಸ್‌ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ನೇತೃತ್ವದಲ್ಲಿ ರೈತರು ತಹಶೀಲ್ದಾರ್‌ ನಾಗಯ್ಯ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

Advertisement

ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸದೇ ಇರುವುದರಿಂದ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ತಡವಲಗಾ, ಅಥರ್ಗಾ, ಚವಡಿಹಾಳ, ಬಬಲಾದ, ಹೊರ್ತಿ, ಕೊಟ್ನಾಳ, ಅಗಸನಾಳ, ಅರ್ಜನಾಳ, ಬಳ್ಳೊಳ್ಳಿ, ಅಂಜುಟಗಿ, ಗುಂದವಾನ ಗ್ರಾಮಗಳ ರೈತರು ಮುಂಗಾರು ಬಿತ್ತನೆ ಮಾಡಿಲ್ಲ. ಇಲ್ಲಿ ಸಮರ್ಪಕವಾಗಿ ಮಳೆಯೂ ಆಗಿಲ್ಲ. ಕೂಡಲೇ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿದರು.

ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದರೆ ಬರುವ 15 ದಿನಗಳ ನಂತರ ಇಂಡಿ ತಾಲೂಕಿನ ಅಗಸನಾಳ ಮತ್ತು ಹೊರ್ತಿ ಗ್ರಾಮಗಳ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟಿಸಲಾಗುವದು ಎಂದು ರೈತರು ಎಚ್ಚರಿಕೆ ನೀಡಿದರು.

ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಪೀರಪ್ಪ ಹೊಟಗಾರ, ಲವಕುಶ ಹೂಗಾರ, ಮಹಿಬೂಬ ಬೇನೂರ, ಬಸವರಾಜ ಹಂಜಗಿ, ಗಂಗಾರಾಮ ಪವಾರ, ಭೀಮ ಕೋಳಿ, ಪೀರಪ್ಪ ಹೊಟಗಾರ, ಸೂರ್ಯಕಾಂತ ಹಿರೇಕುರುಬರ, ಶ್ರೀಶೈಲ ಪಾಯಕರ, ಲವಕುಶ ಹೂಗಾರ, ಅಣ್ಣಾರಾಯ ಬಿರಾದಾರ, ವಿಠ್ಠಲ ಹಳ್ಳಿ, ಶಿವಾ ಟೆಂಗಳೆ, ದತ್ತು ಸೂರ್ಯವಂಶಿ, ಡಿ.ಕೆ. ಪೂಜಾರಿ, ಗಡೆಪ್ಪ ಮೇತ್ರಿ, ಡಾ| ರಮೇಶ ರಾಠೊಡ, ದುಂದು ಬಿರಾದಾರ, ರಾಜು ಮುಲ್ಲಾ, ಶರಣಗೌಡ ಪಾಟೀಲ, ಸಿದ್ದಣಗೌಡ ಬಿರಾದಾರ, ಅರವಿಂದ ಮೈದರಗಿ, ಹೂವಣ್ಣ ಪೂಜಾರಿ, ಲಕ್ಷ್ಮಣ ಗುಂಡಕರಜಗಿ, ಶ್ರೀಶೈಲ ವಾಲೀಕಾರ, ಇಸಾಕ್‌ ಸೌದಾಗರ, ಅರವಿಂದ ಮೈದರಗಿ, ಪರಶುರಾಮ ಹಿರೇಕುರುಬರ, ಬೀರಪ್ಪ ಸಗಾಯಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next