Advertisement
ಅಪರ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಅವರಿಗೆ ಶನಿವಾರ ಮನವಿ ಸಲ್ಲಿಸಿರುವ ಸಮಿತಿಯು ಚೀನಾವು ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗುತ್ತಿದ್ದ ಭಾರತೀಯ ನಾಗರಿಕರನ್ನು ನಾಥೂಲಾ ದರ್ರೆಯಿಂದ ಮುಂದೆ ಹೋಗದಂತೆ ತಡೆದಿದೆ. ಭೂತಾನ್-ಭಾರತ- ಚೀನಾ ಗಡಿಯಿಂದ ನುಗ್ಗಿ ಗಡಿ ದಾಟುವಾಗ ಕೃತ್ಯ ವೆಸಗಿದೆ ಹಾಗೂ ಭಾರತೀಯ ಬಂಕರ್‌ಗಳನ್ನು ನಾಶ ಮಾಡಿದೆ.
Related Articles
Advertisement
ತನಿಖೆಗೆ ಒತ್ತಾಯ: ಬಂಟ್ವಾಳದ ಶರತ್ ಮಡಿವಾಳ ಹತ್ಯೆ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ನಡೆದ ಸರಣಿ ಹಿಂದೂ ನಾಯಕರ ಹತ್ಯಾಪ್ರಕರಣದ ತನಿಖೆಯನ್ನು ಎನ್‌ಐಎ ಗೆ ನೀಡಬೇಕು. ತ್ವರಿತಗತಿಯಲ್ಲಿ ಕೋರ್ಟ್‌ಗಳನ್ನು ಸ್ಥಾಪಿಸಿ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ನೀಡಬೇಕು.
ಜಿಹಾದಿ ಭಯೋತ್ಪಾದಕರು ಕರ್ನಾಟಕ ರಾಜ್ಯದಲ್ಲಿ ಕಳೆದ 2 ವರ್ಷದಲ್ಲಿ 24 ಹಿಂದೂ ನಾಯಕರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬೆಂಗಳೂರು ರುದ್ರೇಶ್ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ತನಿಖೆ ಮಾಡಿದಾಗ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಿಂದೆ ಮತಿಯ ಶಕ್ತಿಗಳ ಕೈವಾಡವಿದೆ ಎಂದಿತ್ತು. ಪಕ್ಕದ ಕೇರಳದಲ್ಲಿ ತರಬೇತಿಯನ್ನು ಸಹ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಅಪರಾಧಿಗೆ ಶಿಕ್ಷೆ: ಈ ಎಲ್ಲಾ ಪ್ರಕರಣಗಳನ್ನು ಸೂಕ್ಷವಾಗಿ ಅವಲೋಕಿಸಿದಾಗ ರಾಜ್ಯದ ಕಾಂಗ್ರೆಸ್ ಸರ್ಕಾರವೇ ನೇರವಾಗಿ ಹಿಂದೂ ನಾಯಕರ ಪಿತೂರಿಯ ಹಿಂದೆ ಇದೆ ಎಂಬ ಸಂದೇಹ ಮೂಡುತ್ತಿದೆ. ಅದಕ್ಕಾಗಿ ಈ ಪ್ರಕರಣವು ಕೂಲಂಕಶವಾಗಿ ತನಿಖೆಯಾಗಬೇಕು ಮತ್ತು ಹಿಂದೂ ಮುಖಂಡರ ಹತ್ಯೆಯ ಹಿಂದಿನ ನಿಜವಾದ ಕೈವಾಡ ಹೊರಬರಬೇಕು ಹಾಗೂ ಸಂಬಂಧ ಪಟ್ಟವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಪಡಿಸಿದರು.