Advertisement

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ

12:08 PM Jan 05, 2022 | Team Udayavani |

ಚಿತ್ತಾಪುರ: ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ತಾಲೂಕು ಸಂಚಾಲಕಿ ಪ್ರೀತಿ ದೊಡ್ಡಮನಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರು ಉದ್ಯೋಗದ ಭದ್ರತೆ ಇಲ್ಲದೇ ಎಷ್ಟೋ ತಿಂಗಳು ಕಾಲ ಸಂಬಳ ಇಲ್ಲದೇ ದುಡಿಯುತ್ತಿದ್ದಾರೆ. ಇವರಲ್ಲಿ ಕೆಲವರು ಉನ್ನತ ಪದವಿ ಪಡೆದವರಿದ್ದಾರೆ. ಎನ್‌ಇಟಿ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ಡಾಕ್ಟರೇಟ್‌ ಪದವಿ ಪಡೆದು ಕಾಲೇಜುಗಳಲ್ಲಿ 10-15 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇವರ ನೋವಿಗೆ ಸ್ಪಂದನೆ ದೊರಕದೇ ಇರುವುದು ಅತ್ಯಂತ ಬೇಸರ ಸಂಗತಿ ಎಂದರು.

ರಾಜ್ಯವ್ಯಾಪಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಕಳೆದ 20ಕ್ಕೂ ಹೆಚ್ಚು ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಅವರೊಟ್ಟಿಗೆ ನಿಲ್ಲುವ ಜವಾಬ್ದಾರಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಮೇಲಿದೆ. ಅತಿಥಿ ಉಪನ್ಯಾಸಕರ ಹೋರಾಟದೊಂದಿಗೆ ವಿದ್ಯಾರ್ಥಿಗಳಿದ್ದೇವೆ ಎಂಬ ಘೋಷಣೆಯೊಂದಿಗೆ ಚಳುವಳಿಗೆ ಕರೆ ಕೊಟ್ಟಿದ್ದೇವೆ. ಶಿಕ್ಷಕರು ತರಗತಿ ಬಹಿಷ್ಕರಿಸಿ ಹೋರಾಟದಲ್ಲಿರುವುದರಿಂದ ಶೈಕ್ಷಣಿಕ ಏರುಪೇರು ಉಂಟಾಗಿದೆ. ಆದ್ದರಿಂದ ಶೈಕ್ಷಣಿಕ ಗೊಂದಲವನ್ನು ಕೂಡಲೇ ಬಗೆಹರಿಸಿ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.

ಅತಿಥಿ ಉಪನ್ಯಾಸಕರಾದ ಶ್ರೀನಾಥ ಬೇಟಗೇರಿ, ರಮೇಶ ಕವಡೆ, ಮಹಾದೇವ, ಮನೋಜ್‌, ಅರ್ಜುನ, ಸಾಬಣ್ಣ, ಅನ್ವರ್‌ ಖಾನ್‌, ವೀರೇಶ್‌, ದೇವರಾಜ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next