Advertisement
ಭಾರತದಲ್ಲಿ ಚಿನ್ನಕ್ಕೆ ಹೆಚ್ಚು ವ್ಯಾಮೋಹಭಾರತದಲ್ಲಿ ಚಿನ್ನದ ಬಗ್ಗೆ ಬಹಳಷ್ಟು ವ್ಯಾಮೋಹವಿದೆ. ಪ್ರತೀ ಶುಭ ಸಂದರ್ಭಗಳಲ್ಲೂ ಭಾರತೀಯರು ಚಿನ್ನವನ್ನು ಬಳಸುತ್ತಾರೆ ಹಾಗೂ ಬಂಗಾರವೂ ಶುಭಸಂಕೇತವೆಂದು ನಂಬುತ್ತಾರೆ. ಹಬ್ಬಗಳು, ವಿವಾಹಗಳು, ಮತ್ತು ಇತರ ಶುಭ ಕಾರ್ಯಕ್ರಮಗಳಲ್ಲಿ ಚಿನ್ನವನ್ನು ಖರೀದಿಸುವುದು ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ. ಜತೆಗೆ ದೇವರಿಗೂ ಚಿನ್ನದ ಆಭರಣಗಳನ್ನು ಧರಿಸುವ ಕಾರಣ ದೈವೀಕವಾಗಿಯೂ ಭಾರತದಲ್ಲಿ ಚಿನ್ನ ಮಹತ್ವ ಪಡೆದಿದೆ.
ಭಾರತದಲ್ಲಷ್ಟೇ ಅಲ್ಲದೇ ಇಡೀ ವಿಶ್ವದಲ್ಲಿ ಅತೀ ಹೆಚ್ಚು ಬೇಡಿಕೆಯಿರುವ ಲೋಹವೆಂದರೆ ಅದು ಚಿನ್ನ. ಆದರೆ ಚಿನ್ನವನ್ನು ಆಮದು ಮಾಡಿಕೊಳ್ಳುವುದರಲ್ಲಿ ಚೀನ ಮತ್ತೆ ಭಾರತ ಮುಂದಿವೆ. ವಿಶ್ವಾದ್ಯಂತ ಬೇಡಿಕೆಯಿರುವ ಹಾಗೂ ಒಂದು ಹೂಡಿಕೆಯಾಗಿ ರುವ ಚಿನ್ನವನ್ನು ಸಂಗ್ರಹಿಸಲು ಎಲ್ಲ ದೇಶಗಳೂ ಮುಂದಡಿಯಿಟ್ಟಿವೆ. ಒಂದು ಅಧ್ಯಯನದ ಪ್ರಕಾರ ಅಮೆರಿಕ ಸೇರಿದಂತೆ ಹಲವು ಶ್ರೀಮಂತ ರಾಷ್ಟ್ರಗಳು ತಮ್ಮ ಬ್ಯಾಂಕ್‌ನಲ್ಲಿ ಚಿನ್ನದ ನಾಣ್ಯ ಹಾಗೂ ಬಿಸ್ಕತ್‌ಗಳನ್ನು ಸಂಗ್ರಹಿಸಲು ಸ್ಪರ್ಧೆಗೆ ಬಿದ್ದಿವೆ.
Related Articles
Advertisement
ಆಭರಣಕ್ಕಷ್ಟೇ ಸೀಮಿತವಾಗಿಲ್ಲ ಚಿನ್ನಮೊದಲೇ ಹೇಳಿದಂತೆ ಚಿನ್ನ ಆಭರಣವಷ್ಟೇ ಅಲ್ಲ, ವಿಶ್ವಾಸಾರ್ಹ ಹೂಡಿಕೆಯೂ ಹೌದು. ಇತ್ತೀಚಿನ ವರ್ಷಗಳಲ್ಲಿ ಭೌತಿಕ ಚಿನ್ನವಷ್ಟೇ ಅಲ್ಲದೇ ಡಿಜಿಟಲ್ ಚಿನ್ನವೂ ಬಂದಿರುವುದು ವಿಶೇಷ. ಕೆಲವು ದಶಕಗಳ ಹಿಂದೆ ಚಿನ್ನದ ನಾಣ್ಯ ಹಾಗೂ ಬಿಸ್ಕತ್ ಕೊಳ್ಳುವುದು ವಾಡಿಕೆಯಾಗಿತ್ತು. ಈಗ ಚಿನ್ನವು ಡಿಜಿಟಲ್ ಲೋಕಕ್ಕೆ ಪ್ರವೇಶಿಸಿದ್ದು, ಸರಕಾರವೇ ಚಿನ್ನದ ಮೇಲಿನ ಹೂಡಿಕೆಗೆ ಚಿನ್ನದ ಬಾಂಡ್(ಎಸ್‌ಜಿಬಿ) ಪರಿಚಯಿಸಿದೆ. ಈ ಬಾಂಡ್ಗಳು ಭೌತಿಕ ಚಿನ್ನ ಸಂಗ್ರಹದ ಪರ್ಯಾಯವಾಗಿದೆ. ಇದಲ್ಲದೇ ಇ- ಗೋಲ್ಡ್ ಎಂಬ ಡಿಜಿಟಲ್ ಚಿನ್ನವೂ ಪರಿಚಯವಾಗಿದ್ದು, ಇದರಲ್ಲೂ ಜನರು ಹೂಡಿಕೆ ಮಾಡುತ್ತಿದ್ದಾರೆ. ಚಿನ್ನದ ಬೆಲೆ ಭಾರೀ ಏರಿಕೆ ಹಿಂದಿನ ಕಾರಣಗಳು
1. ಜಾಗತಿಕ ಬೇಡಿಕೆ:
ಸಾಮಾನ್ಯವಾಗಿ ಚಿನ್ನಕ್ಕೆ ಬೇಡಿಕೆಗಳು ಏರುವಾಗ, ಬೆಲೆಗಳು ಸಹ ಏರುತ್ತವೆ. ಭಾರತದಲ್ಲಿ ಮತ್ತು ಇತರ ರಾಷ್ಟ್ರಗಳಲ್ಲಿ ಈ ಬೇಡಿಕೆ ಹೆಚ್ಚಿದಾಗ, ಸಹಜವಾಗಿ ಚಿನ್ನದ ಬೆಲೆ ಪರಿಷ್ಕೃತವಾಗುತ್ತದೆ. 2. ಅರ್ಥವ್ಯವಸ್ಥೆಯ ಅನಿಶ್ಚಿತತೆ:
ಮಾರುಕಟ್ಟೆಯಲ್ಲಿ ನಿರ್ಣಾಯಕ ಬದಲಾ ವಣೆಗಳಾದಾಗ, ಹೂಡಿಕೆದಾರರು ಅಪಾಯಗಳನ್ನು ತಪ್ಪಿಸಲು ಚಿನ್ನವನ್ನು ಖರೀದಿಸುತ್ತಾರೆ. ಇದರಿಂದ ಮಾರುಕಟ್ಟೆ ಯಲ್ಲಿ ಬೆಲೆ ಹೆಚ್ಚಳವಾಗುತ್ತದೆ. 3. ಬಡ್ಡಿದರ ಬದಲಾವಣೆಗಳು:
ಫೆಡರಲ್ ಬ್ಯಾಂಕ್ ಅಥವಾ ಇತರ ಕೇಂದ್ರ ಬ್ಯಾಂಕ್‌ಗಳ ಬಡ್ಡಿದರದಲ್ಲಿ ಏರಿಕೆ, ಹೂಡಿಕೆದಾರರನ್ನು ಚಿನ್ನದಲ್ಲಿ ಹೂಡಲು ಪ್ರಚೋದಿಸುತ್ತದೆ, ಇದು ಬೇಡಿಕೆಯನ್ನು ಹೆಚ್ಚಿಸುತ್ತದೆ. 4.ಅಂತಾರಾಷ್ಟ್ರೀಯ ರಾಜಕೀಯ ವಾತಾವರಣ:
ಯುದ್ಧಗಳು, ರಾಜಕೀಯ ಬಿಕ್ಕಟ್ಟು ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು ಚಿನ್ನವನ್ನು ಸುರಕ್ಷಿತ ಹೂಡಿಕೆ ಪರ್ಯಾಯವಾಗಿ ಪರಿಗಣಿಸುತ್ತವೆ. ಈ ಅಂಶವೂ ಬೆಲೆಯ ಏರಿಕೆಗೆ ಕಾರಣವಾಗಬಹುದು. ಬೆಳ್ಳಿಗೂ ಬಂತು “ಚಿನ್ನ’ದ ಬೆಲೆ!
ದೇಶದಲ್ಲಿ ಚಿನ್ನದಂತೆ ಬೆಳ್ಳಿಯೂ ಮಹತ್ವ ಪಡೆದಿರುವ ಲೋಹವಾಗಿದೆ. ಈ ಹಬ್ಬದ ಋತುವಿನಲ್ಲಿ 90 ಸಾವಿರದ ಗಡಿ ದಾಟಿ ಪ್ರಸ್ತುತ 88 ಸಾವಿರದಲ್ಲಿ ಒಂದು ಕೆ.ಜಿ ಬೆಳ್ಳಿಯ ಬೆಲೆ ಇದೆ. ಇನ್ನು ಮುಂದಿನ ತಿಂಗಳ ದಸರಾ ಹಾಗೂ ಬಳಿಕ ದೀಪಾವಳಿಯ ವೇಳೆಗೆ 1 ಲಕ್ಷ ರೂ.ನ ಗಡಿಯನ್ನೂ ದಾಟಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಈ ಬೆಲೆ ಏರಿಕೆಗೆ ಹಲವು ಕಾರಣವನ್ನು ತಜ್ಞರು ಅಂದಾಜಿಸಿದ್ದಾರೆ. ಅವೆಂದರೆ ಜಾಗತಿಕವಾಗಿ ಬೆಲೆ ಹೆಚ್ಚಳ:
ಈ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಜಾಗತಿಕವಾಗಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಭಾರೀ ಏರಿಕೆ ಕಂಡಿದೆ. ಇದಕ್ಕೆ ಕಾರಣ ಅಮೆರಿಕದ ಡಾಲರ್ ದುರ್ಬಲಗೊಂಡಿದ್ದು. ಇದರಿಂದ ಇನ್ನಷ್ಟು ಬೆಲೆ ಏರಿಕೆಯಾಗುವ ಸಂಭವವಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ದೇಶೀಯ ಬೇಡಿಕೆ ಹೆಚ್ಚಳ:
ಭಾರತದಲ್ಲಿ ಬೆಳ್ಳಿ ಬೇಡಿಕೆ ಏರಿಕೆಯಾಗಿದೆ. ಆಮದು ಮೌಲ್ಯವು 11,000 ಕೋಟಿ ರೂ.ಗೇರಿದೆ. ಕಳೆದ ಆಗಸ್ಟ್‌ನಲ್ಲಿ ಇದೇ ಆಮದು ಕೇವಲ 1,300 ಕೋಟಿ ರೂ. ಇತ್ತು. ಗ್ರಾಹಕರು ಮತ್ತು ಹೂಡಿಕೆದಾರರು ಹಣದುಬ್ಬರ, ಕರೆನ್ಸಿ ಏರಿಳಿತಗಳ ವಿರುದ್ಧ ರಕ್ಷಣೆ ಪಡೆಯಲು ಚಿನ್ನ, ಬೆಳ್ಳಿ ಖರೀದಿಸುತ್ತಿದ್ದು, ಇದು ಬೇಡಿಕೆ, ಬೆಲೆ ಹೆಚ್ಚಳಕ್ಕೆ ಕಾರಣ. ಪೂರೈಕೆ ಕೊರತೆ:
ಸತತ 4ನೇ ವರ್ಷವೂ ಮಾರುಕಟ್ಟೆಯಲ್ಲಿ ಬೆಳ್ಳಿ ಕೊರತೆ ಮುಂದು ವರಿದಿದೆ. ಜಾಗತಿಕ ಬೇಡಿಕೆಯು 2024 ರಲ್ಲಿ ಸಾರ್ವಕಾಲಿಕ ಗರಿಷ್ಠ 1.21 ಶತಕೋಟಿ ಔನ್ಸ್ ಮುಟ್ಟುವ ನಿರೀಕ್ಷೆಯಿದೆ. ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಸಮ ತೋಲನವು ಬೆಳ್ಳಿ ಬೆಲೆ ಏರಿಕೆಗೆ ಒತ್ತು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಭಾರತ ಚಿನ್ನದ ದರವು ಸಾಮಾನ್ಯವಾಗಿ ಲಂಡನ್ ಕ್ರಿಟಿಕಲ್ ಮತ್ತು ನ್ಯೂಯಾರ್ಕ್ ಮೆಟಲ್ ಎಕ್ಸ್‌ಚೇಂಜ್‌ನಲ್ಲಿ ನಿಗದಿಪಡಿಸಿರುವ ಜಾಗತಿಕ ಬೆಲೆಗಳನ್ನು ಆಧರಿಸುತ್ತವೆ. ಈ ಬೆಲೆಗಳು ಭಾರತೀಯ ಮಾರುಕಟ್ಟೆಗೆ ಪ್ರಭಾವ ಬೀರುತ್ತವೆ. ಅಮೆರಿಕದ ಫೆಡರಲ್ ಬ್ಯಾಂಕಿನ ಬಡ್ಡಿದರ ಏರುವಾಗ ಅಥವಾ ಇಳಿಯುವಾಗ, ಹೂಡಿಕೆದಾರರು ಅಪಾಯಕ್ಕೆ ಒಳಪಟ್ಟ ಹೂಡಿಕೆಗಳನ್ನು ಬಿಟ್ಟು ಚಿನ್ನದಲ್ಲಿ ಹೂಡಿಕೆ ಮಾಡಲು ಇಚ್ಛಿಸುತ್ತಾರೆ. ಇದು ಚಿನ್ನದ ಬೇಡಿಕೆಯನ್ನು ಹೆಚ್ಚಿಸುವುದರೊಂದಿಗೆ ಬೆಲೆಯನ್ನೂ ಹೆಚ್ಚಿಸುತ್ತದೆ. ಜಾಗತಿಕವಾಗಿ ಚಿನ್ನವು ಸಾಮಾನ್ಯವಾಗಿ ಡಾಲರ್‌ನಲ್ಲಿ ವ್ಯಾಪಾರವಾಗುತ್ತದೆ. ಅಲ್ಲದೆ, ಡಾಲರ್‌ನ ಮೌಲ್ಯದಲ್ಲಿ ಆಗುವ ಬದಲಾವಣೆಗಳು, ರೂಪಾಯಿ ಅಥವಾ ಇತರ ಕರೆನ್ಸಿಗಳ ಮೇಲೂ ಪ್ರಭಾವ ಬೀರುತ್ತವೆ, ಇದು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗೆ ಪರಿಣಾಮ ಬೀರುತ್ತದೆ. ಚಿನ್ನ ಖರೀದಿ ಹಾಗೂ ಮಾರಾಟಕ್ಕೆ ಸೂಕ್ತ ಸಮಯ ಯಾವುದು?
ಭಾರತದಲ್ಲಿ ಹಬ್ಬದ ಋತು ಈಗಾಗಲೇ ಆರಂಭವಾಗಿದ್ದು, ಇನ್ನು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಆಕಾಶದೆಡೆಗೇ ಮುಖ ಮಾಡಲಿದೆ ಎಂಬುದು ಮಾರುಕಟ್ಟೆ ತಜ್ಞರ ಲೆಕ್ಕಾಚಾರವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ಏರಿಕೆಯನ್ನೇ ಕಾಣಲಿದ್ದು, ಹಬ್ಬಗಳು ಮುಗಿದ ಬಳಿಕ ಬೆಲೆ ಕೊಂಚ ಇಳಿಯಬಹುದು ಎಂದು ತಜ್ಞರು ಅಂದಾಜಿಸುತ್ತಾರೆ. ಅದರಲ್ಲೂ ದೀಪಾವಳಿ ಸಮಯದಲ್ಲಿ ದೇಶಾದ್ಯಂತ ಚಿನ್ನವು ಅತ್ಯಂತ ಹೆಚ್ಚಿನ ಬೇಡಿಕೆಯನ್ನು ಹೊಂದಿರುತ್ತದೆ. ಧನ್‌ತೇರಸ್ ಹಬ್ಬದಂದು ದೇಶದಲ್ಲಿ ಅತಿ ಹೆಚ್ಚು ಚಿನ್ನ ಮಾರಾಟವಾಗಲಿದೆ. ತಮ್ಮ ಬಳಿಯಿರುವ ಚಿನ್ನವನ್ನು ಈಗ ಮಾರಾಟ ಮಾಡುವ ಉದ್ದೇಶವಿದ್ದಲ್ಲಿ ದೀಪಾವಳಿ ವೇಳೆಯು ಸೂಕ್ತವಾಗಿರಲಿದೆ. ಅದೇ ಚಿನ್ನ ಖರೀದಿಗೆ ಹಬ್ಬಗಳ ಬಳಿಕ ಸೂಕ್ತ ಸಮಯವೆನ್ನಬಹುದು. ಜತೆಗೆ ಫೆಡರಲ್ ಬ್ಯಾಂಕಿನ ಬಡ್ಡಿದರವು ಏರಿದಾಗ, ಅದು ಚಿನ್ನದ ಬೆಲೆಗೆ ಪ್ರಭಾವ ಬೀರುವ ಸಾಧ್ಯತೆ ಇದೆ. ಆದ್ದರಿಂದ, ಬಡ್ಡಿದರ ಹೂಡಿಕೆಗಳು ಇಳಿಯುವಾಗ, ಖರೀದಿಗೆ ಉತ್ತಮ ಸಮಯ ಎಂದೂ ಪರಿಗಣಿಸಲಾಗುತ್ತದೆ. – ತೇಜಸ್ವಿನಿ ಸಿ. ಶಾಸ್ತ್ರಿ