Advertisement

ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲು ಆಗ್ರಹ

05:20 PM Jun 07, 2018 | |

ಅಮೀನಗಡ: ಪಟ್ಟಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಉಪತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಸರಕಾರದ 14ನೇ ಹಣಕಾಸು ಯೋಜನೆಯಿಂದ ಲಕ್ಷಾಂತರ ರೂ.ಖರ್ಚು ಮಾಡಿ ಪಟ್ಟಣದಲ್ಲಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕ ಅವೈಜ್ಞಾನಿಕವಾಗಿವೆ. ಶುದ್ಧ ಕುಡಿಯುವ ನೀರು ಘಟಕಗಳಿಂದ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ನೀರಿನ ಘಟಕ ನಿರ್ಮಾಣವಾಗಿ ಹಲವಾರು ತಿಂಗಳು ಕಳೆದರೂ ಆರಂಭವಾಗಿಲ್ಲ ಎಂದರು.

Advertisement

ಲಕ್ಷಾಂತರ ರೂ ಖರ್ಚು ಮಾಡಿ ತೋರಿಕೆಗೆ ನೀರಿನ ಘಟಕ ಸ್ಥಾಪನೆ ಮಾಡಿದ್ದಾರೆ. ಕೇವಲ ಉದ್ಘಾಟನೆಗೆ ಮಾತ್ರ ಸೀಮಿತವಾದಂತೆ ತೋರುತ್ತಿದೆ. ಪಟ್ಟಣದಲ್ಲಿ ಉದ್ಘಾಟನೆಯಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೂಡಲೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿ ಕಾರಿಗಳಿಗೆ ಮತ್ತು ಕ್ಷೇತ್ರದ ಶಾಸಕರಿಗೆ ಪ್ರತ್ಯೇಕವಾಗಿ ಉಪತಹಶೀಲ್ದಾರ್‌ ಎಸ್‌.ವಿ. ಕುಂದರಗಿ ಅವರ ಮೂಲಕ ಮನವಿ ಸಲ್ಲಿಸಿದರು.ಅಧ್ಯಕ್ಷ ಸಂಜಯ ಐಹೊಳ್ಳಿ, ನಗರ ಘಟಕದ ಆಧ್ಯಕ್ಷ ಮಂಜು ಭಜಂತ್ರಿ,ದರ್ಶನ ಮೊಕಾಶಿ,ಚಂದ್ರು ಹಳ್ಳಿ,ಹುಲ್ಲಪ್ಪ ಭಜಂತ್ರಿ, ಚನ್ನಬಸಪ್ಪ ಯರಗೇರಿ, ಶ್ರೀಧರ ಭಜಂತ್ರಿ,ಮುತ್ತು ಭಜಂತ್ರಿ, ರಾಘು ಯರಗೇರಿ, ನಕೇತನ ಪಟೇಲ, ಸಂತೋಷ ಚವ್ಹಾಣ, ರಾಘು ಹಡಪದ, ಸುರೇಶ ಹಡಪದ, ಗುರುಬಸಯ್ಯ ಸರಗನಾಚಾರಿ, ಅಶೋಕ ನರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next