Advertisement
ಗ್ರಂಥಪಾಲಕರ ಅಳಲು2019ರಲ್ಲಿ ಗ್ರಾಮೀಣ ಗ್ರಂಥಾ ಲಯಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪಂಚಾಯತ್ ರಾಜ್ ಇಲಾಖೆಗೆ ವರ್ಗಾ ಯಿಸಿದರೂ ಗ್ರಾಮೀಣ ಗ್ರಂಥಾಲಯಗಳ ಮೇಲ್ವಿಚಾರಕರ ದೆಸೆ ಮಾತ್ರ ಬದಲಾಗಲೇ ಇಲ್ಲ. ಕೆಲ ಪಂಚಾಯತ್‌ಗಳು ಗ್ರಂಥಾಲಯ ಕೆಲಸ ಮಾತ್ರವಲ್ಲದೆ ತಮ್ಮ ಪಂಚಾಯತ್ ಕಚೇರಿ ಕೆಲಸವನ್ನು ಮಾಡಿಸಿಕೊಂಡು, ಇಲಾಖೆಯ ಆದೇಶದಂತೆ ಯಾವುದೇ ಭದ್ರತೆ ನೀಡದೇ ಕೊರೊನಾ ಕುರಿತ ಕೆಲಸವನ್ನು ಮಾಡಿಸಿಕೊಂಡರೂ ಹೆಚ್ಚಿನ ವೇತನವಾಗಲಿ, ಗೌರವ ಧನವಾಗಲಿ ನೀಡಲೇ ಇಲ್ಲ ಎನ್ನುವುದು ಗ್ರಂಥಪಾಲಕರ ಅಳಲು.
ಹಿಂದೆ ಗ್ರಂಥಾಲಯ ಇಲಾಖೆಯೇ ಸ್ವತಃ ಸರಕಾರಿ ಮಾದರಿ ಸೇವಾ ನಿಯಮಾವಳಿ ಅನುಸರಿಸಿ ರೋಸ್ಟರ್ ಪದ್ಧತಿ ಅನ್ವಯವೇ ಗ್ರಾಮೀಣ ಗ್ರಂಥಪಾಲಕರನ್ನು ನೇಮಕ ಮಾಡಿಕೊಂಡರೂ, ಇವರ ಬದುಕು ಮಾತ್ರ ಅತ್ಯಂತ ಶೋಚನೀಯವಾಗಿದೆ. ಗ್ರಂಥಪಾಲಕರಾಗಿ ಕೆಲಸ ಮಾಡುತ್ತಿದ್ದ 500 ಮಂದಿ ಅಕಾಲಿಕ ಸಾವನ್ನಪ್ಪಿದರೂ, ಅವರ ಕುಟುಂಬಸ್ಥರಿಗೆ ಉದ್ಯೋಗವೇ ಕಲ್ಪಿಸಿಲ್ಲ. ನೂರಾರು ಮಂದಿ ನಿವೃತ್ತಿ ಯಾದರೂ ಯಾವುದೇ ಭದ್ರತೆ ಯಿಲ್ಲ. ಒಂದು ಸಾವಿರ ಮಂದಿ ಗ್ರಂಥಪಾಲಕರು ನಿವೃತ್ತಿ ಅಂಚಿನಲ್ಲಿ ದ್ದಾರೆ. ವಯಸ್ಸಿನ ಮಿತಿಯಿಂದ ಬೇರೆ ಕೆಲಸಕ್ಕೆ ಸೇರಲು ಆಗಲ್ಲ. ಮಹಿಳೆ, ಅಂಗವಿಕಲರು, ಪ.ಜಾತಿ/ ಪಂಗಡದ ಶೇ. 50 ರಷ್ಟು ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಶೇ. 90 ರಷ್ಟು ಮಂದಿ ಕೆಲಸ ನಿರ್ವಹಿಸುತ್ತಿದ್ದು, ಈ ಅಲ್ಪ ವೇತನದಿಂದ ಕುಟುಂಬ ನಿರ್ವಹಣೆಯನ್ನು ಮಾಡಲಾಗದೇ ಸಂಕಷ್ಟದಲ್ಲಿದ್ದಾರೆ. ಎಲ್ಲೆಲ್ಲಿ ಎಷ್ಟು?
ಉಡುಪಿ ಜಿಲ್ಲೆಯಲ್ಲಿ ಒಟ್ಟಾರೆ ಜಿಲ್ಲಾ ಕೇಂದ್ರ, ನಗರ ಕೇಂದ್ರ, ತಾಲೂಕು ಕೇಂದ್ರಗಳಲ್ಲಿರುವ ಗ್ರಂಥಾಲಯಗಳೆಲ್ಲ ಸೇರಿ 157 ಸಾರ್ವಜನಿಕ ಗ್ರಂಥಾಲಯಗಳಿವೆ. ಆದರೆ ಜಿಲ್ಲೆಯಲ್ಲಿ ಗ್ರಾಮೀಣ ಅಂದರೆ ಪಂಚಾಯತ್ ಮಟ್ಟದಲ್ಲಿರುವ ಗ್ರಂಥಾಯಲಗಳು 147. ಕುಂದಾಪುರ ತಾಲೂಕಿನಲ್ಲಿ 56, ಉಡುಪಿ ತಾಲೂಕಿನಲ್ಲಿ 61 ಹಾಗೂ ಕಾರ್ಕಳ ತಾಲೂಕಿನಲ್ಲಿ 30 ಗ್ರಾಮೀಣ ಗ್ರಂಥಾಲಯಗಳಿವೆ.
Related Articles
ಹಿಂದೆ ಬೆಳಗ್ಗೆ 4 ಗಂಟೆ ಹಾಗೂ ಸಂಜೆ 4 ಗಂಟೆ ಒಟ್ಟು 8 ಗಂಟೆ ದಿನಂಪ್ರತಿ ಗ್ರಂಥಾಲಯವನ್ನು ತೆರೆಯಬೇಕು ಎನ್ನುವ ನಿಯಮವಿತ್ತು. ಆದರೆ ಈಗ ಸಮಯವನ್ನು ದಿನಕ್ಕೆ ಕೇವಲ 4 ಗಂಟೆ ಮಾತ್ರ ಅಂದರೆ ಬೆಳಗ್ಗೆ 2 ಹಾಗೂ ಸಂಜೆ 2 ಗಂಟೆ ಮಾತ್ರ ತೆರೆದಿಡಲು ಗ್ರಂಥಾಲಯ ನಿರ್ದೇಶಕರೇ ಆದೇಶಿಸಿದ್ದರು. ಇದರಿಂದ ಗ್ರಾಮೀಣ ಭಾಗದ ಶಾಲಾ – ಕಾಲೇಜು ಹೋಗುವ ಮಕ್ಕಳಿಗೆ, ಸಾರ್ವಜನಿಕರಿಗೆ ಪತ್ರಿಕೆ, ಪುಸ್ತಕಗಳನ್ನು ಓದಲು ತುಂಬಾ ತೊಂದರೆಯಾಗುತ್ತಿದೆ.
Advertisement
ಸಚಿವರಿಗೆ ಮನವಿ ಸಲ್ಲಿಕೆಗ್ರಾಮೀಣ ಗ್ರಂಥಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಂಥಾಲಯ ಮೇಲ್ವಿಚಾರಕರ ಬದುಕು ಸಂಕಷ್ಟದಲ್ಲಿದೆ. 2016 ರಲ್ಲಿ ಹೊರಡಿಸಿದ ಅಧಿಸೂಚನೆಯಂತೆ ಕನಿಷ್ಠ ವೇತನ ಜಾರಿಯಾಗಲಿ. ಸಮಯ ಮಿತಿ ಸಡಿಲಿಸಿ ದಿನಕ್ಕೆ 8 ಗಂಟೆ ತೆರೆದಿರುವಂತೆ ಮಾಡಲಿ. ಕೆಲಸದ ಭದ್ರತೆ ನೀಡಲಿ ಎನ್ನುವುದು ಎಲ್ಲ ಗ್ರಂಥಪಾಲಕರ ಬೇಡಿಕೆಯಾಗಿದೆ. ಈ ಬಗ್ಗೆ ನಮ್ಮ ರಾಜ್ಯ ಸಂಘದಿಂದ ಸಚಿವ ಈಶ್ವರಪ್ಪನವರಿಗೂ ಮನವಿ ಸಲ್ಲಿಸಲಾಗಿದೆ.
– ಸುರೇಶ್ ಹೆಮ್ಮಾಡಿ, ಅಧ್ಯಕ್ಷರು, ಕುಂದಾಪುರ ತಾ| ಗ್ರಾಮೀಣ ಗ್ರಂಥಾಲಯ ನೌಕರರ ಸಂಘ ಪ್ರಸ್ತಾವ ಸಲ್ಲಿಕೆ
ಗ್ರಾಮೀಣ ಗ್ರಂಥಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಂಥಾಲಯ ಮೇಲ್ವಿಚಾರಕರ ವೇತನ ಹೆಚ್ಚಳ ಹಾಗೂ ಕನಿಷ್ಠ ವೇತನ ನಿಯಮ ಜಾರಿ ಕುರಿತಂತೆ ಈಗಾಗಲೇ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪಂಚಾಯತ್ ರಾಜ್ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ.
– ಸತೀಶ್ ಎಸ್. ಹೊಸಮನಿ, ರಾಜ್ಯ ನಿರ್ದೇಶಕರು, ಗಂಥಾಲಯ ಇಲಾಖೆ