Advertisement

ನೇಣಿಗೆ ಕರ್ನಾಟಕ ವಿರೋಧ

07:30 AM Mar 13, 2018 | |

ಹೊಸದಿಲ್ಲಿ: ದೇಶದಲ್ಲಿ ಮರಣದಂಡನೆ ರದ್ದು ಮಾಡಬೇಕೇ, ಬೇಡವೇ ಎಂಬ ಪ್ರಶ್ನೆಗೆ ಕರ್ನಾಟಕ ಮತ್ತು ತ್ರಿಪುರ ಸರಕಾರಗಳು “ರದ್ದು ಮಾಡಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿವೆ. ಉಳಿದ 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ಸರಕಾರಕ್ಕೆ ನೀಡಿರುವ ಪ್ರತಿಕ್ರಿಯೆಯಲ್ಲಿ ಶಿಕ್ಷೆಯ ಪರ ತಮ್ಮ ವಾದ ಮಂಡಿಸಿವೆ.

Advertisement

2015ರಲ್ಲಿ ನ್ಯಾ.ಎ.ಪಿ.ಶಾ ನೇತೃತ್ವದ ಕಾನೂನು ಆಯೋಗ ಭಯೋತ್ಪಾದನಾ ಪ್ರಕರಣಗಳ ಹೊರತಾಗಿನ ಕೇಸುಗಳಿಗೆ ಮರಣ ದಂಡನೆ ಶಿಕ್ಷೆ ರದ್ದು ಮಾಡಬೇಕು ಎಂದು ಶಿಫಾರಸು ಮಾಡಿತ್ತು. ಆಯೋಗದ ಶಿಫಾರಸಿನ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯ ಸರಕಾರಗಳಿಗೆ ಶಿಫಾರಸಿನ ಬಗ್ಗೆ ಪತ್ರ ಬರೆದು ಪ್ರತಿಕ್ರಿಯೆ ಕೋರಿತ್ತು. ಕರ್ನಾಟಕ ಸೇರಿದಂತೆ 14 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅಭಿಪ್ರಾಯ ತಿಳಿಸಿವೆ. ತ್ರಿಪುರದಲ್ಲಿ ಚುನಾವಣೆ ನಡೆದು ಸರಕಾರ ಬದಲಾಗಿರುವ ಹಿನ್ನೆಲೆಯಲ್ಲಿ ಪುನಃ ನಿಲುವು ಬದಲಾಗುವ ಸಾಧ್ಯತೆಗಳಿವೆ ಎಂದು ಗೃಹ ಖಾತೆ ಹಿರಿಯ ಅಧಿಕಾರಿ “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ಗೆ ತಿಳಿಸಿದ್ದಾರೆ. 

ಗುಜರಾತ್‌, ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನ, ಬಿಹಾರ, ಜಾರ್ಖಂಡ್‌, ತಮಿಳುನಾಡು ಮತ್ತು ದಿಲ್ಲಿ ಗಲ್ಲು ಶಿಕ್ಷೆ ರದ್ದು ಮಾಡದಂತೆ ಶಿಫಾರಸು ಮಾಡಿವೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಇದುವರೆಗೆ ಅಭಿಪ್ರಾಯವನ್ನೇ ಸಲ್ಲಿಸಿಲ್ಲ. ಅತ್ಯಾಚಾರ ಮತ್ತು ಕೊಲೆಯಂಥ ಹೀನ ಕೃತ್ಯಗಳನ್ನು ಮಾಡಿದವರಿಗೆ ಅದೇ ಶಿಕ್ಷೆ ಕೊಡಬೇಕು ಎಂದು 12 ರಾಜ್ಯಗಳು ತಮ್ಮ ವಾದದಲ್ಲಿ ಪ್ರತಿಪಾದಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next