ಯಾದಗಿರಿ: ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ವಿವಿಧ ಸಂಘಟನೆಗಳು ಹೋರಾಟ, ಪ್ರತಿಭಟನೆ, ನಡೆಸಲು ಸೂಕ್ತ ಸ್ಥಳ ಮತ್ತು ವಿಶೇಷ ಮೂಲ ಸೌಕರ್ಯ ಒದಗಿಸಿಕೊಡುವಂತೆ ಆಗ್ರಹಿಸಿ ಟೋಕರಿ ಕೋಲಿ ಸಮಾಜದ ಬಾಂಧವರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು. ನಗರದಲ್ಲಿ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸುವುದು, ಹೋರಾಟ, ಪ್ರತಿಭಟನೆ ಧರಣಿ ಮಾಡುವುದು ಸರ್ವೇ ಸಾಮಾನ್ಯ. ಜಿಲ್ಲಾಡಳಿತ ಭವನದ ಎದುರು ಜನಜಂಗುಳಿ ಸೇರುವುದರಿಂದ ತೊಂದರೆ ಆಗುತ್ತದೆ. ಕಾರಣ ಇಂತಹ ಹೋರಾಟಗಳಿಗಾಗಿ ಪ್ರತ್ಯೇಕ ಸ್ಥಳ ನೀಡಿ, ಪ್ರತಿಭಟನಾಕಾರರಿಗೆ ಶೆಡ್ ನಿರ್ಮಾಣ ಮತ್ತು ಅದರಲ್ಲಿ ಶುದ್ಧ ಕುಡಿಯುವ ನೀರು ವಿದ್ಯುತ್ ಸಂಪರ್ಕ ಅಳವಡಿಸಿಕೊಡಬೇಕು ಎಂದು ಆಗ್ರಹಿಸಿದರು. ಟೋಕರಿ ಕೋಲಿ (ಕಬ್ಬಲಿಗ) ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಆನಂದ ಕಾಡಂಗೇರಿ, ಲಕ್ಷ್ಮಣ ತಡಿಬಿಡಿ, ವಿಶ್ವಕರ್ಮ ಸಮಾಜದ ಮುಖಂಡರಾದ ದೇವಿಂದ್ರಪ್ಪ ವಡಿಗೇರಿ ವೀರಣ್ಣ ನಾಯ್ಕಲ್ ಬನ್ನಪ್ಪ ಯಾದಗಿರಿ ಕಾಳಪ್ಪ ದುಪ್ಪಲ್ಲಿ ಹಾಗೂ ವಿಠ್ಠಲ ಹೇರೂರು ಅಭಿಮಾನಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.