Advertisement
ಕೆಎಫ್‌ಡಿಸಿಯಲ್ಲಿ ಕಾರ್ಮಿಕರಾಗಿರುವ ಶ್ರೀಲಂಕಾ ತಮಿಳು ನಿರಾಶ್ರಿತರಿಗೆ 1998ರಲ್ಲಿ ಕೋಕಳದಲ್ಲಿ ನಿವೇಶನ ಮಂಜೂರಾಗಿದೆ. ಅನಂತರ ಅಲ್ಲಿ ಸರ್ವೆ ಕಾರ್ಯ ನಡೆದಿದ್ದರೂ ನಮಗೆ ನಿವೇಶನ ಹಂಚಿಕೆ ಯಾಗಿಲ್ಲ ಎಂದು ತಮಿಳು ಸಂಘದ ಮುಖಂಡ ತಿರುಪತಿ ಎನ್‌ಕೂಪ್ ಸಭೆಯ ಗಮನ ಸೆಳೆದರು.
Related Articles
ಜಿ.ಪಂ. ಎಂಜಿನಿಯರ್ ಪ್ರಭಾಶ್ಚಂದ್ರ ಅವರು ಇಲಾಖಾ ಮಾಹಿತಿ ನೀಡುತ್ತಿದ್ದ ವೇಳೆ ಮಾತನಾಡಿದ ಗ್ರಾಮಸ್ಥ ಅತ್ಯಡ್ಕ ನಾರಾಯಣ ಶೆಟ್ಟಿ ಕಳೆದ 2016- 17ರಲ್ಲಿ ಕ್ರಿಯಾ ಯೋಜನೆ ಮಾಡಿದ್ದರೂ ಈ ತನಕ ಕಾಮಗಾರಿಗಳ ಅಂದಾಜು ಪಟ್ಟಿ ಆಗಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಸತೀಶ್ ಕೆ. ಅವರು ಈಗಾಗಲೇ ಎಂಜಿನಿಯರ್ ಮೇಲೆ 4 ಪ್ರಕರಣಗಳು ದಾಖಲಾಗಿವೆ. ಹೀಗಾದರೆ ಅವರು ಹೇಗೆ ಅಂದಾಜುಪಟ್ಟಿ ಮಾಡುತ್ತಾರೆ ಎಂದು ಹೇಳಿ ದರು. ಸಭೆಗಳಿಗೆ ಬಾರದೆ ಮನೆಯಲ್ಲಿ ಕುಳಿತು ಆರೋಪ ಮಾಡುವ ಕೆಲವು ಜನರ ಕೆಲಸದಿಂದಾಗಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಗ್ರಾಮ ಸಭೆಗೆ ಬಂದು ಅಧಿಕಾರಿಗಳ ಹಾಗೂ ಗ್ರಾ.ಪಂ. ಆಡಳಿತ ಮಂಡಳಿ ಸದಸ್ಯರ ಸಮಕ್ಷಮ ಚರ್ಚಿಸಲಿ. ಅದು ಬಿಟ್ಟು ವಿನಾ ಕಾರಣ ಎಲ್ಲ ಕೆಲಸಗಳಿಗೂ ತಡೆಯೊಡ್ಡುವುದು ಹೇಡಿಗಳ ಲಕ್ಷಣ ಎಂದು ನಾರಾಯಣ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
Advertisement
ಜಿ.ಪಂ. ಎಂಜಿನಿಯರ್ ಪ್ರಭಾಶ್ಚಂದ್ರ ಮಾತನಾಡಿ, ಇಲ್ಲಿನ ಕ್ರಿಯಾಯೋಜನೆ ಕಳೆದ ನವೆಂಬರ್‌ನಲ್ಲಿ ಆಗಬೇಕಾಗಿದ್ದರೂ ಪಿಡಿಒ ದೀರ್ಘಾವಧಿ ರಜೆ ಯಲ್ಲಿದ್ದುದರಿಂದ ವಿಳಂಬವಾಗಿದೆ. ಈಗಿನ ಪಿಡಿಒ ಕಳೆದ ಫೆಬ್ರವರಿಯಲ್ಲಿ ಕ್ರಿಯಾಯೋಜನೆ ತಯಾರಿಸಿ ಕಳುಹಿಸಿದ್ದಾರೆ. ಈ ಬಗ್ಗೆ ಮಳೆಗಾಲ ಮುಗಿದೊಡನೆ ಕ್ರಮ ಕೈಗೊಳ್ಳಲಾಗುವುದು ಎಂದರು.ಸಾಕಷ್ಟು ಸರಕಾರಿ ಸವಲತ್ತುಗಳು ಇರುವ ಕೃಷಿ ಹಾಗೂ ತೋಟಗಾರಿಕಾ ಅಧಿಕಾರಿಗಳು ಸಭೆಗೆ ಬಾರದೇ ಇದ್ದಲ್ಲಿ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಸಿಗುವುದಿಲ್ಲ. ಆದುದರಿಂದ ಅವರು ಕಡ್ಡಾಯ ವಾಗಿ ಸಭೆಗೆ ಬರಬೇಕು ಎಂದು ಸಭೆಯಿಂದ ಆಗ್ರಹ ವ್ಯಕ್ತವಾಯಿತು.
ಅಕ್ರಮ ಸಕ್ರಮ ಆದರೂ ಜಮೀನಿನ ಪೋಡಿ ಆಗಿಲ್ಲ. ಇದರಿಂದ ಜನರಿಗೆ ಯಾವುದೇ ಸೌಲಭ್ಯ ದೊರಕುವುದಿಲ್ಲ. ಐತ್ತೂರು ಗ್ರಾಮವನ್ನು ಅದಷ್ಟು ಬೇಗ ಪೋಡಿ ಮುಕ್ತ ಗ್ರಾಮವಾಗಿಸಿ ಎಂದು ಪೂವಪ್ಪ ಗೌಡ ಅಂತಿಬೆಟ್ಟು ಆಗ್ರಹಿಸಿದರು. ಕೃಷಿ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥ ಕೆ.ಟಿ. ಫಿಲಿಪ್ ಕೊಚ್ಚಿಪರಂಬಿಲ್ ಒತ್ತಾಯಿಸಿದರು.ಗ್ರಾಮದ ಅತ್ಯಡ್ಕ ಪರಿಸರದಲ್ಲಿ 27 ಜನರು ಜ್ವರದಿಂದ ಬಳಲುತ್ತಿದ್ದು, ಅಲ್ಲಿಗೆ ಇಷ್ಟರ ತನಕ ಆರೋಗ್ಯ ಇಲಾಖೆಯ ಸಿಬಂದಿ ಭೇಟಿ ನೀಡಿಲ್ಲ. ಐತ್ತೂರು ಗ್ರಾಮವನ್ನು ಶಿರಾಡಿ ಆಸ್ಪತ್ರೆಯ ವ್ಯಾಪ್ತಿ ಬದ ಲಾಯಿಸಿ ಕಡಬ ವ್ಯಾಪ್ತಿಗೆ
ಸೇರ್ಪಡೆಗೊಳಿಸಬೇಕು. ಈ ಕುರಿತು 23 ವರ್ಷಗಳಿಂದ ಬೇಡಿಕೆ ಇಡುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ಅತ್ಯಡ್ಕ ನಾರಾಯಣ ಶೆಟ್ಟಿ ದೂರಿದರು. ಸುಂಕದಕಟ್ಟೆ ಉಪ ಆರೋಗ್ಯ ಕೇಂದ್ರದ ಕಿ.ಆ. ಸಹಾಯಕಿ ಉಷಾ ಮಾತನಾಡಿ, ಸಮಸ್ಯೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು. ಅಧ್ಯಕ್ಷ ಸತೀಶ್ ಕೆ. ಮಾತನಾಡಿ, ಅಂತಿಬೆಟ್ಟುವಿನಲ್ಲಿ 10 ದಿನಗಳೊಳಗೆ ಅಂಗನವಾಡಿ ವಿಚಾರಕ್ಕೆ ಸಂಬಂಧಿಸಿ ಪ್ರತ್ಯೇಕ ಸಭೆ ಮಾಡಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ಕ್ರಮ ಕೈಗೊಳ್ಳುವ ಭರವಸೆ
ಕಲ್ಲಾಜೆ ಅಂಗನವಾಡಿಯಲ್ಲಿ ಬಾಣಂತಿಯರಿಗೆ ಸರಿಯಾಗಿ ಪೌಷ್ಟಿಕ ಆಹಾರ ವಿತರಣೆಯಾಗುತ್ತಿಲ್ಲ. ಹಾಗೆಯೇ ನಮ್ಮ ಮನೆಯ ಮೇಲೆ ಬಾಗಿಕೊಂಡಿ ರುವ ಅಪಾಯಕಾರಿ ವಿದ್ಯುತ್ ಕಂಬವನ್ನು ತೆರವು ಗೊಳಿ ಸುವಂತೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ಕುಶಾಲಪ್ಪ ಕೇನ್ಯ ದೂರಿದರು. ಮೆಸ್ಕಾಂ ಜೆಎ ನಾಗರಾಜ್ ಮಾತನಾಡಿ, ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಉಪ್ಪಿನಂಗಡಿ – ಕಡಬ-ಸುಬ್ರಹ್ಮಣ್ಯ ವಿದ್ಯುತ್ ಲೈನ್ ಹಾದು ಹೋಗಿರುವ ವಿದ್ಯುತ್ ತಂತಿಗಳ ಅಡಿಯಲ್ಲಿ ಅರಣ್ಯ ಇಲಾಖೆಯಿಂದ ಗಿಡ ನೆಡಲಾಗಿದೆ. ಅದರಿಂದಾಗಿ ಮುಂದೆ ವಿದ್ಯುತ್ ಲೈನ್‌ಗೆ ತೊಂದರೆ ಉಂಟಾಗಲಿದೆ ಎಂದು ಟೋನಿ ಆಕ್ರೋಶ ವ್ಯಕ್ತಪಡಿಸಿದರು. ಕೇನ್ಯದಲ್ಲಿ ವ್ಯಕ್ತಿಯೊಬ್ಬರು ಕೇನ್ಯ -ಆಜನ ಪಂಚಾ ಯತ್ ರಸ್ತೆ ಮತ್ತು ನಿವೇಶನಕ್ಕೆ ಹೋಗುವ ರಸ್ತೆಯನ್ನು ಒತ್ತುವರಿ ಮಾಡಿ ತಮ್ಮ ಜಾಗ ವಿಸ್ತರಿಸಿದ್ದು ನಮಗೆ ಕೂಡಲೇ ಬೇಲಿಯನ್ನು ತೆರವುಗೊಳಿಸಿ ರಸ್ತೆಯನ್ನು ಒದಗಿಸಿ ಎಂದು ಚಂದ್ರಾಕ್ಷ ಸಭೆಯ ಗಮನಕ್ಕೆ ತಂದರು. ಗ್ರಾಮಸಭೆ ಮುಗಿದ ಬಳಿಕ ತಾ| ನೋಡೆಲ್ ಅಧಿಕಾರಿಯ ಸಮಕ್ಷಮ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳ ಲಾಗುವುದು ಎಂದು ಅಧ್ಯಕ್ಷರು ನುಡಿದರು. ನೇಲ್ಯಡ್ಕ ಶಾಲೆ ಅಂಗಳದಲ್ಲಿ ಇರುವ ಒಣಗಿದ ಅಪಾಯಕಾರಿ ಮರವನ್ನು ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದರು.ತಾ.ಪಂ. ಸದಸ್ಯೆ ಪಿ.ವೈ. ಕುಸುಮಾ, ಗ್ರಾ.ಪಂ. ಉಪಾಧ್ಯಕ್ಷೆ ಸಾವಿತ್ರಿ, ಗ್ರಾ.ಪಂ. ಸದಸ್ಯರಾದ ಶ್ರೀಧರ ಗೌಡ, ಗೋಮತಿ, ಧರ್ಮಪಾಲ, ಜಯಲಕ್ಷ್ಮೀ, ಎಂ.ಪಿ. ಯೂಸುಫ್, ಇಸ್ಮಾಯಿಲ್ ಎಂ.ಎಚ್., ಮುತ್ತುಕುಮಾರಿ, ಸುಂಕದಕಟ್ಟೆ ಶಾಖಾ ಅರಣ್ಯ ಉಪ ವಲಯ ಅರಣ್ಯಾಧಿಕಾರಿ ಶಿವಶಂಕರ್, ಮೇಲ್ವಿ ಚಾರಕಿ ಭವಾನಿ, ಶಿಕ್ಷಕಿ ದೇವಕಿ ವಿವಿಧ ಇಲಾಖಾ ಧಿ ಕಾರಿಗಳು ಭಾಗವಹಿಸಿದ್ದರು. ಸಿ.ಪಿ. ಜೋನ್, ಜಯರಾಮ ಕಡಮ್ಮಾಜೆ, ಶಿವ ಎಂ. ಮೊದಲಾದವರು ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿ ದರು. ಪಿಡಿಒ ವಿಲ್ಫೆ†ಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿ, ವಂದಿಸಿದರು. ಖಾಯಂ ಕಾರ್ಯದರ್ಶಿ ನೇಮಿಸಿ
ಐತ್ತೂರು ಗ್ರಾ.ಪಂ.ನಲ್ಲಿ ಸಿಬಂದಿ ಕೊರತೆ ಇದೆ. ಇಲ್ಲಿಗೆ ಖಾಯಂ ಕಾರ್ಯದರ್ಶಿ ನೇಮಕ ಮಾಡುವಂತೆ ಕಳೆದ ಗ್ರಾಮ ಸಭೆಯಲ್ಲಿ ನಿರ್ಣಯಿಸಿದ್ದರೂ ಈ ತನಕ ಯಾಕೆ ನೇಮಕ ಆಗಿಲ್ಲ ಎಂದು ಪೂವಪ್ಪ ಐತ್ತೂರು ಅವರು ಪ್ರಶ್ನಿಸಿದರು. ಅದಕ್ಕೆ ಅತ್ಯಡ್ಕ ನಾರಾಯಣ ಶೆಟ್ಟ ದನಿಗೂಡಿಸಿದರು. 10 ದಿನಗಳೊಳಗೆ ಖಾಯಂ ಕಾರ್ಯದರ್ಶಿ ನೇಮಿಸದಿದ್ದಲ್ಲಿ ಗ್ರಾಮಸ್ಥರು ಗ್ರಾ.ಪಂ.ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು. ಖಾಯಂ ಕಾರ್ಯದರ್ಶಿ ನೇಮಕಕ್ಕೆ ಜಿ.ಪಂ.ಗೆ ಮತ್ತೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು. ತೀರ ಹದಗೆಟ್ಟ ಮರ್ದಾಳ – ಕರ್ಮಾಯಿ ರಸ್ತೆ ದುರಸ್ತಿಗೆ ಆಗ್ರಹ
ಮರ್ದಾಳ -ಕರ್ಮಾಯಿ ಜಿ.ಪಂ. ರಸ್ತೆಯು ತೀರ ಹದಗೆಟ್ಟಿದ್ದು, ವಾಹನ ಸಂಚಾರ ಮಾತ್ರವಲ್ಲ ಜನರು ನಡೆದುಕೊಂಡು ಹೋಗುವುದು ಕಷ್ಟಕರವಾಗಿದೆ. ಜಿ.ಪಂ. ಎಂಜಿನಿಯರ್ ಭೇಟಿ ನೀಡಿ ಪರಿಶೀಲಿಸಿ ಹೋದರೂ ಪ್ರಯೋಜನವಾಗಿಲ್ಲ ಎಂದು ಗ್ರಾ.ಪಂ. ಸದಸ್ಯ ಪಿ.ಪಿ. ಮತ್ಯಾಸ್ ಸಭೆಯ ಗಮನಕ್ಕೆ ತಂದರು. ಅದಕ್ಕೆ ಉತ್ತರಿಸಿದ ಜಿ.ಪಂ. ಎಂಜಿನಿಯರ್ ಈಗಾಗಲೇ ಜಿ.ಪಂ.ನಿಂದ 1 ಲಕ್ಷ ರೂ. ಹಾಗೂ ಶಾಸಕರ ತುರ್ತು ಅನುದಾನ 2 ಲಕ್ಷ ರೂ. ನೀಡಲಾಗುವುದು ಎಂದು ಭರವಸೆ ನೀಡಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.