Advertisement

ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ

01:20 PM May 23, 2017 | Team Udayavani |

ಹರಿಹರ: ಇಲ್ಲಿನ ಜೈಭೀಮನಗರದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಆಗ್ರಹಿಸಿ ದಸಂಸ (ಅಂಬೇಡ್ಕರ್‌ ವಾದಿ) ವತಿಯಿಂದ ಸಿಪಿಐ ಹಾಗೂ ಅಬಕಾರಿ ಇನ್ಸ್‌ಪೆಕ್ಟರ್‌ ಅವರಿಗೆ ಮನವಿ ಸಲ್ಲಿಸಲಾಯಿತು. 

Advertisement

ನಂತರ ಸ್ಥಳೀಯ ನಿವಾಸಿ ರೂಪ್ಲಾ ನಾಯಕ್‌ ಮಾತನಾಡಿ, ಜೈಭೀಮನಗರ ಬಡವರು, ಕೂಲಿ ಕಾರ್ಮಿಕರೆ ಅಧಿಕ ಸಂಖ್ಯೆಯಲ್ಲಿರುವ ಜನವಸತಿ ಪ್ರದೇಶ. ಇಲ್ಲಿನ ಎರಡು ಶೆಡ್‌ ಅಂಗಡಿ, ಎರಡು ಕಿರಾಣಿ ಅಂಗಡಿಗಳಲ್ಲಿ ಅಕ್ರಮ ವಾಗಿ ಮದ್ಯ ಮಾರಾಟವನ್ನು ಮಾಡಲಾಗುತ್ತಿದೆ.

ಇದರಿಂದ ಈ ಭಾಗದ ಬಹುತೇಕ ಪುರುಷರು, ಕೆಲವು ಮಹಿಳೆಯರು, ಯುವಕರೂ ಕೂಡ ಮದ್ಯವ್ಯಸನಿಗಳಾಗಿದ್ದಾರೆ ಎಂದು ದೂರಿದರು. ದಸಂಸ ಜಿಲ್ಲಾ ಸಂಚಾಲಕ ಡಿ.ಹನುಂಂತಪ್ಪ ಮಾತನಾಡಿ, ಕೋಮು ವಿಷಯದಲ್ಲಿ ಸೂಕ್ಷ ಪ್ರದೇಶವಾಗಿರುವ ಈ ಬಡಾವಣೆಯಲ್ಲಿ ಇಲ್ಲಿನ ಕೋಮು ಸಾಮರಸ್ಯ ಹದಗೆಡಲು ಈ ಅಕ್ರಮ ಮದ್ಯ ಮಾರಾಟವೂ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದರು.

ತಾಲೂಕು ಸಂಚಾಲಕ ಪ್ರಭು ಪೂಜಾರ್‌ ಮಾತನಾಡಿ, ಅಕ್ರಮ ಮದ್ಯ ಮಾರಾಟವನ್ನು ಕೂಡಲೆ ನಿಲ್ಲಿಸಬೇಕು. ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಂಡು ಜೈಭೀಮನಗರದ ಜನರ ಸಾಮಾಜಿಕ ಬದುಕನ್ನು ಕಾಪಾಡಬೇಕು ಎಂದು ಆಗ್ರಹಿಸಿದರು. 

ಮನವಿ ಸ್ವೀಕರಿಸಿದ ಸಿಪಿಐ ಜೆ.ಎಸ್‌. ನ್ಯಾಮಗೌಡರ್‌ ಮಾತನಾಡಿ, ಅಕ್ರಮ ಮದ್ಯಮಾರಾಟ ಮಾಡುವವರ ಮಾಹಿತಿ ಸಂಗ್ರಹಿಸಿ ಅಂತಹವರ ವಿರುದ್ಧ  ಅಬಕಾರಿ ಪೊಲೀಸರೊಂದಿಗೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬಾರದು ಎಂದರು. ಅಬಕಾರಿ ಇನ್ಸ್‌ಪೆಕ್ಟರ್‌ ಎಂ.ಪಿ.ರಂಗಯ್ಯ ಮಾತನಾಡಿ, ಅಕ್ರಮ ಮದ್ಯ  ಮಾರಾಟ ಮಾಡುವವರ ವಿರುದ್ಧ ಈಗಾಗಲೆ ಹಲವು ಪ್ರಕರಣವನ್ನು ದಾಖಲಿಸಲಾಗಿದೆ. 

Advertisement

ಜೈಭೀಮನಗರದಲ್ಲಿ ಮಾರಾಟ ಮಾಡುವವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗುವುದು. ಆ ವಸತಿ ಪ್ರದೇಶದಲ್ಲಿ ಮದ್ಯ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ತಡೆಯಲಾಗುವುದೆಂದು ಎಂದರು. ರಾಜನಹಳ್ಳಿ ಬೀರಪ್ಪ,  ತೆಲಗಿ ಹನುಮಂತಪ್ಪ, ನಾಗೇಂದ್ರಪ್ಪ, ಶಂಕರ್‌ ಹಾಗೂ ಸ್ಥಳೀಯ ನಿವಾಸಿಗಳಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next