Advertisement

ಉಡುಪಿ, ಮಂಗಳೂರು ನಗರದಲ್ಲಿ ಸರಕಾರಿ ಬಸ್‌ಗೆ ಬೇಡಿಕೆ

11:22 PM Jul 09, 2023 | Team Udayavani |

ಉಡುಪಿ: “ಶಕ್ತಿ” ಯೋಜನೆಯ ಮೂಲಕ ರಾಜ್ಯ ಸರಕಾರ ತಂದಿರುವ ಮಹಿಳೆಯರ ಉಚಿತ ಬಸ್‌ ವ್ಯವಸ್ಥೆಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ನಡುವೆಯೇ ಮಂಗಳೂರು ನಗರ ಹಾಗೂ ಉಡುಪಿ ನಗರ ಭಾಗದಲ್ಲಿ ಹೆಚ್ಚುವರಿ ಸರಕಾರಿ ಬಸ್‌ ಬೇಕೆಂಬ ಬೇಡಿಕೆ ಹೆಚ್ಚುತ್ತಿದೆ.

Advertisement

ಕೋವಿಡ್‌ ಅವಧಿಯಲ್ಲಿ ನಷ್ಟದ ಕಾರಣ ಕೆಲವೊಂದು ರೂಟ್‌ಗಳಲ್ಲಿ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಇನ್ನೂ ಆರಂಭಗೊಂಡಿಲ್ಲ. ಮತ್ತೆ ಕೆಲವೆಡೆ ಒಂದೇ ರೂಟ್‌ಗೆ ಹಲವು ಬಸ್‌ಗಳು ಓಡಾಡುತ್ತಿದ್ದರೆ ಅದನ್ನು ಕೆಲವೇ ಸಂಖ್ಯೆಗೆ ಸೀಮಿತ ಗೊಳಿಸಲಾಗಿದೆ. ಈಗ ಉಚಿತ ಸೌಲಭ್ಯ ಇರುವುದರಿಂದ ಮತ್ತೆ ಆರಂಭಿಸುವಂತೆ ನಾಗರಿಕರು ಆಗ್ರಹಿಸುತ್ತಿದ್ದಾರೆ.

ಕಾರ್ಯಾಚರಿಸುತ್ತಿರುವ ರೂಟ್‌ಗಳು
ಉಡುಪಿಯಿಂದ ಮಣಿಪಾಲ, ಹೂಡೆ, ಕಲ್ಯಾಣಪುರ, ಮರ್ಣೆ, ಮಲ್ಪೆ,ಕೆಳಸುಂಕ, ಕೊಕ್ಕರ್ಣೆ, ಪೆರ್ಡೂರು, ನೆಲ್ಲಿಕಟ್ಟೆ, ಮಂಚಕಲ್‌, ಕೆಮ್ಮಣ್ಣು-ಹಂಪನಕಟ್ಟೆ, ಹೊನ್ನಾಳ, ಪಡುಕರೆ, ಮಂಗಳೂರಿನಿಂದ ಮುಡಿಪು, ಅಡ್ಯಾರು, ಸ್ಟೇಟ್‌ಬ್ಯಾಂಕ್‌ನಿಂದ ಬಜಪೆ, ಮಲ್ಲೂರು, ಮುಕ್ಕ, ಗುರುಪುರ, ಕೈಕಂಬ, ಗಣೇಶಪುರ, ಮುಡಿಪು, ಸೋಮೇಶ್ವರ, ವಾಮಂಜೂರು, ಕುಂಜತ್ತಬೈಲ್‌, ಚೇಳಾçರು, ಎಂಆರ್‌ಪಿಎಲ್‌ ಕಾಲನಿ, ಮಂಗಳೂರಿನಿಂದ ರೆಹಮತ್‌ ನಗರ, ಅಮ್ಮೆಂಬಳ ದರ್ಗ, ಸ್ಟೇಟ್‌ಬ್ಯಾಂಕ್‌ನಿಂದ ಕಿನ್ಯಾ, ಮಂಗಳೂರಿನಿಂದ ಪರಪ್ಪು, ಸ್ಟೇಟ್‌ಬ್ಯಾಂಕ್‌ನಿಂದ ಕೊಜಪ್ಪಾಡಿ, ಮಂಗಳೂರಿನಿಂದ ಲ್ಯಾಂಡ್‌ ಲಿಂಕ್ಸ್‌-ಬಜಾಲ್‌ ಪಡ್ಪು, ಕಲ್ಪನೆ, ಸ್ಟೇಟ್‌ಬ್ಯಾಂಕ್‌ನಿಂದ ಸಹ್ಯಾದ್ರಿ ಕಾಲೇಜು, ಪರಂಗಿಪೇಟೆ, ರೈಲ್ವೇ ಜಂಕ್ಷನ್‌, ಮಂಗಳೂರಿನಿಂದ ಪಾಣೇಲ- ಮುಡಿಪು, ಪೊಳಲಿ, ಕಟೀಲು.

ಬಸ್‌ಗಳ ಕೊರತೆ
ನಷ್ಟದ ಕಾರಣ ಕೋವಿಡ್‌ ಅವಧಿಯಲ್ಲಿ ಕೆಲವೊಂದು ಬಸ್‌ಗಳನ್ನು ಹಾಸನ ಸಹಿತ ಇತರ ಜಿಲ್ಲೆಯ ಡಿಪೋಗಳಿಗೆ ಕಳುಹಿಸಲಾಗಿತ್ತು. ಪ್ರಸ್ತುತ ಅಲ್ಲಿ ಬೇಡಿಕೆ ಇರುವ ಕಾರಣ ಈ ಭಾಗದಲ್ಲಿ ಬಸ್‌ ಇಲ್ಲದಂತಾಗಿದೆ. ಪ್ರಸ್ತುತ ಸ್ಥಗಿತಗೊಂಡಿರುವ ಉಡುಪಿ ನಗರದ 7 ಹಾಗೂ ಮಂಗಳೂರು ನಗರದ 13 ರೂಟ್‌ಗಳಲ್ಲಿ ಮತ್ತೆ
ಮರುಆರಂಭಿಸುವ ಬಗ್ಗೆ ಸಾರ್ವಜನಿಕರಿಂದ ಬಂದ ಮನವಿಗಳ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಮತ್ತೆ ಹಿಂದಿನ ರೂಟ್‌ಗಳಲ್ಲಿ ಬಸ್‌ ಸಂಚಾರ ಆರಂಭಗೊಂಡರೆ ಉಡುಪಿ ನಗರಕ್ಕೆ 14 ಹಾಗೂ ಮಂಗಳೂರು ನಗರಕ್ಕೆ 34 ಮಂದಿ ಚಾಲನಾ ಸಿಬಂದಿ ಬೇಕಾಗುತ್ತದೆ.

ಬೇಕಿರುವ ಬಸ್‌ ರೂಟ್‌ಗಳು
ಮಣಿಪಾಲದಿಂದ ಉಡುಪಿ ಮಾರ್ಗವಾಗಿ ಹೂಡೆ, ಉಡುಪಿಯಿಂದ ಮಣಿಪಾಲ/ಅಲೆವೂರು, ಪರ್ಕಳ, ಹೆರ್ಗ ಕೆಳಾರ್ಕಳಬೆಟ್ಟು, ಅನಂತನಗರ, ಮೂಡುಬೆಳ್ಳೆ, ಮಾಣಾç ಮೂಲಕ ಹ‌ರಿಖಂಡಡಿಗೆ ಹಾಗೂ ಮಂಗಳೂರು ನಗರದಲ್ಲಿ ಮಂಗಳೂರಿನಿಂದ ಕಟೀಲು, ಸೋಮೇಶ್ವರ, ರೈಲು ನಿಲ್ದಾಣದಿಂದ ಬಜಪೆ, ಸ್ಟೇಟ್‌ಬ್ಯಾಂಕ್‌ನಿಂದ ಶಕ್ತಿನಗರ, ಕುಂಜತ್ತಬೈಲು, ಕಾಟಿಪಳ್ಳ, ಕೈಕಂಬ, ಪಿಲಿಕುಳ, ಮೂಡುಶೆಡ್ಡೆ, ಮಂಗಳಪೇಟೆ, ಬಜಾಲ್‌ ಚರ್ಚ್‌, ಫೈಸಲ್‌ನಗರ/ಜಲ್ಲಿಗುಡ್ಡೆ, ತಲಪಾಡಿ, ಕಿನ್ಯಾ ಭಾಗಕ್ಕೆ ಈ ಹಿಂದಿನಂತೆ ಬಸ್‌ಗಳು ಸಂಚರಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.

Advertisement

ಉಡುಪಿ ಹಾಗೂ ಮಂಗಳೂರು ನಗರದಿಂದ ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್‌ಗಳ ಪ್ರಸ್ತಾವನೆ ಸಾರ್ವಜನಿಕರಿಂದ ಬಂದಲ್ಲಿ ಸ್ವೀಕರಿಸಲಾಗುತ್ತಿದೆ. ಬಸ್‌ನ ಲಭ್ಯತೆಗೆ ಅನುಗುಣವಾಗಿ ಓಡಿಸುವ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. – ರಾಜೇಶ್‌ ಶೆಟ್ಟಿ , ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್ಸಾರ್ಟಿಸಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next