Advertisement

ಬೇಡಿಕೆ ಈಡೇರಿಕೆಗೆ ಆಗ್ರಹ

03:19 PM Aug 31, 2018 | |

ವಿಜಯಪುರ: ಅಂಗವಿಕಲರ ಕಲ್ಯಾಣಕ್ಕಾಗಿ ಶೇ.3 ರಷ್ಟು ಅನುದಾನ ಮೀಸಲಿರಿಸಿ ಬಳಸುವಲ್ಲಿ ಜುಮನಾಳ ಗ್ರಾಪಂ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ವಿಕಲಚೇತನರು ಗ್ರಾ.ಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಘಟಕದ ನೇತೃತ್ವದಲ್ಲಿ ಜುಮನಾಳ ಗ್ರಾ.ಪಂ ಮುತ್ತಿಗೆ ಹಾಕಿದ ವಿಕಲಚೇತನರು, ಜಿ.ಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖ ವಿನೋದ ಖೇಡ, ಶೇ.3 ರಷ್ಟು ಅನುದಾನವನ್ನು ಅಂಗವಿಕಲರಿಗೆ ಕಾದಿರಿಸದೆ ಇರುವುದು ಸರಿಯಲ್ಲ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. 

ಸರಕಾರದ ಆದೇಶದನ್ವಯ ಎಲ್ಲ ಗ್ರಾಪಂನಲ್ಲಿ ಗ್ರಾಮೀಣ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ನೇಮಕ ಮಾಡಿಕೊಳ್ಳದೆ ಅಂಗವಿಕಲರಿಗೆ ತುಂಬಾ ಅನ್ಯಾಯವಾಗಿದೆ. ಇದನ್ನು ಸರಿಪಡಿಸಿ ಅಂಗವಿಕಲರಿಗೆ ನ್ಯಾಯ ಒದಗಿಸಬೇಕು. ಕೂಡಲೆ ಸಂಬಂಧಪಟ್ಟ ಅಂಗವಿಕಲರ ಕಲ್ಯಾಣ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.

ಭೀಮನಗೌಡ ಪಾಟೀಲ (ಸಾಸನೂರ) ಮಾತನಾಡಿ, ಜುಮನಾಳ ಗ್ರಾಪಂನಲ್ಲಿ ಸುಮಾರು 20 ರಿಂದ 30 ಜನ ಅಂಗವಿಕಲರಿಗೆ ಗ್ರಾಪಂನಿಂದ ದೊರಕಬೇಕಾದ ಸೌಲಭ್ಯಗಳನ್ನು ಲಭಿಸಿರುವುದಿಲ್ಲ. ಕೂಡಲೆ ಈ ಭಾಗದ ಎಲ್ಲ ಅಂಗವಿಕಲರಿಗೆ ಗ್ರಾಪಂನಿಂದ ದೊರಕುವ ಸೌಲಭ್ಯಗಳನ್ನು ಅವರ ಮನೆಗೆ ತೆರಳಿ ಒದಗಿಸಿಕೊಡುವ ಕೆಲಸವನ್ನು
ಸರ್ಕಾರ ಮಾಡಬೇಕು ಎಂದರು. 

Advertisement

ಅಶೋಕ ವಾಲಿಕಾರ, ನಿಮಿಷ ಆಚಾರ್ಯ, ಮಲ್ಲಿಕಾರ್ಜುನ ಉಮರಾಣಿ, ಎ.ಎ.ಹಕೀಂ, ಅಂಬಣ್ಣ ಗುನ್ನಾಪುರ, ಶಂಕ್ರಮ್ಮ ಕೋರಿ, ಕನಸಾ ತುಳಸೆ, ಕಸ್ತೂರಿ ಬೂದಿಹಾಳ, ಗೂಬಾಯಿ ಬಡಿಗೇರ, ಸಂಗಣ್ಣ ಹುಣಶ್ಯಾಳ, ಮಹೇಶ ಮುಧೋಳ, ರಾಜು ಭುಂಯ್ನಾರ, ಪ್ರಶಾಂತ ಗೆಣ್ಣೂರ, ಸುಮಿತ ಪಾಂಡಿಚೇರಿ, ಮಹಾದೇವಿ ಮಾನೆ, ಬೀಬೀ ಆಯೇಷಾ ಶೇಖ, ಶಂಕರ ಪವಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next