Advertisement

ಹಡಪದ ಅಭಿವೃದ್ದಿ ನಿಗಮ ಸ್ಥಾಪನೆಗೆ ಒತ್ತಾಯ

10:04 AM Feb 17, 2022 | Team Udayavani |

ಕಲಬುರಗಿ: ಸಾಮಾಜಿಕ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿರುವ ಹಡಪದ ಸಮಾಜ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಬೇಕೆಂದು ಆಗ್ರಹಿಸಿ ಅಖೀಲ ಭಾರತ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ತಾಲೂಕು ಘಟಕ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಹಡಪದ, ನಾವಿ, ಕ್ಷೌರಿಕ, ನಾವಲಿಗ, ನಾಯಿಂದಾ, ಭಂಡಾರಿ ಹೀಗೆ ವಿವಿಧ ವಿಭಾಗದಲ್ಲಿ ಆಯಾ ಪದಗಳಿಂದ ಕರೆಸಿಕೊಳ್ಳುವ ಸಮುದಾಯವು ರಾಜ್ಯದ 20 ಜಿಲ್ಲೆಗಳಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಸಮುದಾಯದ ಪ್ರಗತಿಗಾಗಿ ರಾಜ್ಯ ಸರ್ಕಾರ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು. ಮಂಡಳಿಗೆ 50 ಕೋಟಿ ರೂ. ಅನುದಾನ ಮೀಸಲಿಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಹಡಪದ ಅಪ್ಪಣ್ಣನವರ ಪೀಠ ಇರುವ ತಂಗಡಗಿ ಮಠದ ಅಭಿವೃದ್ಧಿಗಾಗಿ ಎರಡು ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ಹಡಪದ ಸಮಾಜವನ್ನು ಪ್ರಗರ್ವ-1 ಅಥವಾ ಪರಿಶಿಷ್ಟ ವರ್ಗಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಸಮುದಾಯದ ಮುಖಂಡರಾದ ಈರಣ್ಣ ಹಡಪದ ಅವರನ್ನು ಯಾವುದಾದರೂ ಒಂದು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಆಗ್ರಹಿಸಿದರು.

ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ತೊನಸನಳ್ಳಿ, ಗೌರವಾಧ್ಯಕ್ಷ ಮಲ್ಲನಗೌಡ ಫರಹತಾಬಾದ, ಪ್ರಧಾನ ಕಾರ್ಯದರ್ಶಿ ವಿನೋದ ಅಂಬಲಗಿ, ಮುಖಂಡರಾದ ರಮೇಶ ಕೌಲಗಾ, ಬಸವರಾಜ, ರಮೇಶ ಹಡಪದ, ಸುನೀಲಕುಮಾರ ಭಾಗಹಿಪ್ಪರಗಾ, ಮಲ್ಲಿಕಾರ್ಜುನ ಸುಗೂರ, ಭೀಮರಾಯ ಹಡಪದ, ಬಸವರಾಜ ಹಳ್ಳಿಶಹಾಬಾದ, ರೇವಣಸಿದ್ಧಪ್ಪ, ಶಿವಾನಂದ ಬಬಲಾದಿ, ಶರಣು ರಾಜಾಪೂರ, ಶಂಕರ ಹರವಾಳ, ಮಲ್ಲು ಅವರಾದ, ರಮೇಶ ಮಲಕೂಡ ವಕೀಲರು, ಸಿದ್ರಾಮ ಯಾಗಾಪೂರ, ಶಿವುಕುಮಾರ ಸಿಂದಗಿ, ಮಲ್ಲು ಬೆಳಗುಪ್ಪಿ, ಅರುಣ ಗೊಬ್ಬೂರು, ಸಂದಿಧೀಪ ಮಹಾಗಾಂವ್‌, ನಾಗರಾಜ ಸಾತನೂರ ಹಾಗೂ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next