Advertisement

ಪದವಿ ಸೆಮಿಸ್ಟರ್‌ ಪರೀಕ್ಷೆ ಒಂದು ತಿಂಗಳ ಕಾಲ ಮುಂದೂಡಲು ಮನವಿ

08:51 PM Feb 10, 2022 | Team Udayavani |

ಬೆಂಗಳೂರು : ಪದವಿ ಕೋರ್ಸ್‌ಗಳ ಸೆಮಿಸ್ಟರ್‌ ಪರೀಕ್ಷೆ ಒಂದು ತಿಂಗಳ ಕಾಲ ಮುಂದೂಡಲು ಮನವಿ ಸಲ್ಲಿಕೆಯಾಗಿದೆ. ಈ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್‌, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ. ಕೊರೋನಾ ಮತ್ತು ಒಮಿಕ್ರಾನ್‌ ಪ್ರಕರಣಗಳ ಹೆಚ್ಚಳ, ಅತಿಥಿ ಉಪನ್ಯಾಸಕರ ಮುಷ್ಕರದಿಂದಾಗಿ ಬೋಧನಾ ಕಾರ್ಯ ಅಪೂರ್ಣವಾಗಿದೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರದೀಪ್‌ ಮನವಿ ಮಾಡಿದ್ದಾರೆ.

Advertisement

ಈ ಬಗ್ಗೆ ಗುರುವಾರ ಪತ್ರ ಬರೆದಿರುವ ಅವರು, ಕೆಲವು ವಿಶ್ವವಿದ್ಯಾಲಯಗಳು ಈಗಾಗಲೇ ಸೆಮಿಸ್ಟರ್‌ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿವೆ. ಆದರೆ, ಬೋಧನಾ ಕಾರ್ಯ ಇನ್ನೂ ಮುಗಿದಿಲ್ಲ. ಹೀಗಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡುವಂತೆ ರಾಜ್ಯದ ಎಲ್ಲ ವಿ.ವಿ.ಗಳಿಗೂ ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಮನೆಯಲ್ಲೇ ಯುವತಿಯ ಅನುಮಾನಾಸ್ಪದ ಸಾವು : ಸಂಬಂಧಿಕರಿಂದ ಠಾಣೆಗೆ ದೂರು

Advertisement

Udayavani is now on Telegram. Click here to join our channel and stay updated with the latest news.

Next