Advertisement
ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಆಟಗಾರ್ತಿ, ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸದಸ್ಯೆ ಶಾಂತಾ ರಂಗಸ್ವಾಮಿ, “ವನಿತಾ ಟೆಸ್ಟ್ ಕ್ರಿಕೆಟ್ ಮತ್ತೆ ಆರಂಭವಾಗುತ್ತಿರುವುದು ಸ್ವಾಗರ್ತಾಹ. ಭಾರತ ತಂಡ ಇದೇ ವರ್ಷ ಆಸ್ಟ್ರೇಲಿಯದಲ್ಲಿ ಪಿಂಕ್ ಬಾಲ್ ಟೆಸ್ಟ್ ಆಡಲಿರುವುದು ಉತ್ತಮ ಬೆಳವಣಿಗೆ. ಆದರೆ ಅಲ್ಲಿಗೆ ತೆರಳುವ ಮುನ್ನ ದೇಶಿ ಕ್ರಿಕೆಟ್‌ನಲ್ಲಿ ಹೊನಲು ಬೆಳಕಿನ ಪಂದ್ಯಗಳನ್ನು ಆಯೋಜಿಸಬೇಕು’ ಎಂದು ಸಲಹೆ ನೀಡಿದ್ದಾರೆ.
Related Articles
“ವನಿತಾ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಬಳಿಕ ಆಸ್ಟ್ರೇಲಿಯ ವಿರುದ್ಧದ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿಯೂ ಪಾಲ್ಗೊಳ್ಳಲಿದೆ. ದೀರ್ಘ ಮಾದರಿಯ ಕ್ರಿಕೆಟ್‌ಗೆ ಹೆಚ್ಚಿನ ಉತ್ತೇಜನ ಕೊಡಬೇಕು. ಪಿಂಕ್‌ಬಾಲ್ ಕ್ರಿಕೆಟ್‌ನಲ್ಲಿ ಭಾರತದ ಆಟಗಾರ್ತಿಯರು ಹೆಚ್ಚಿನ ಅನುಭವ ಹೊಂದಿಲ್ಲ. ಆದ್ದರಿಂದ ಹಗಲು-ರಾತ್ರಿ ದೇಶಿ ಟೂರ್ನಿಗಳನ್ನು ಆಯೋಜಿಸಬೇಕು’ ಎಂದು ಶಾಂತಾ ರಂಗಸ್ವಾಮಿ ಬಿಸಿಸಿಐಗೆ ಸಲಹೆ ನೀಡಿದರು.
Advertisement
ಪಿಂಕ್‌ಬಾಲ್ ಟೆಸ್ಟ್ಭಾರತ-ಆಸ್ಟ್ರೇಲಿಯ ವನಿತಾ ಕ್ರಿಕೆಟ್ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ. ಈ ಸರಣಿಯಲ್ಲಿ ಮೂರು ಏಕದಿನ (ಸೆ. 19-24), ಮೂರು ಟಿ20 (ಅ. 7-11) ಮತ್ತು ಒಂದು ಪಿಂಕ್‌ಬಾಲ್ ಟೆಸ್ಟ್ ಪಂದ್ಯವನ್ನು ಆಡಲಾಗುವುದು. ಇದು ಭಾರತದ ವನಿತೆಯರು ಆಡುತ್ತಿರುವ ಚೊಚ್ಚಲ ಅಹರ್ಶಿನಿ ಟೆಸ್ಟ್ ಆಗಿದ್ದು, ಅಕ್ಟೋಬರ್ 30ರಂದು ಪರ್ತ್‌ನಲ್ಲಿ ಆರಂಭವಾಗಲಿದೆ. ಪರ್ತ್ ಡೇ-ನೈಟ್ ಪಂದ್ಯವನ್ನು ಆಯೋಜಿಸುತ್ತಿರುವುದು ಕೂಡ ಇದೇ ಮೊದಲು.