ಕೋಲಾರ: ನಗರದ ಹೊರವಲಯದ ಹಸಾಳದಲ್ಲಿರುವ ಕಾನೂನು ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಕಳೆದ 19 ರಂದು ಉಪಾಹಾರದಲ್ಲಿ ಹಲ್ಲಿ ಬಿದ್ದ ಘಟನೆ ಅನಿರೀಕ್ಷಿತವಾಗಿ ನಡೆದಿದ್ದು, ಹಾಸ್ಟೆಲ್ ವಾರ್ಡನ್ ಗೂ ಘಟನೆಗೂ ಸಂಬಂಧವಿಲ್ಲದ ಕಾರಣ ಅವರ ಅಮಾನತ್ತು ರದ್ದುಪಡಿಸಿ ಅವರ ಸೇವೆಯನ್ನು ಮುಂದುವರಿಸುವಂತೆ ಆಗ್ರಹಿಸಿ ಕಾನೂನು ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳು ಜಿಪಂ ಸಿಇಒ ಯುಕೇಶ್ ಕುಮಾರ್ ಅವರಿಗೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ವಿಧ್ಯಾರ್ಥಿ ಮುಖಂಡರು ಕಳೆದ ಬುಧವಾರ ಬೆಳಗ್ಗೆ ಉಪಾಹಾರ ತಿನ್ನುವ ಸಮಯದಲ್ಲಿ ವಿದ್ಯಾರ್ಥಿಯ ತಟ್ಟೆಯಲ್ಲಿ ಹಲ್ಲಿ ಕಂಡು ಬಂದಿದ್ದು ವಾಸ್ತವವ. ತಕ್ಷಣವೇ ಎಲ್ಲಾ ವಿದ್ಯಾರ್ಥಿಗಳು ಜಾಗೃತರಾಗಿ ಉಪಾಹಾರ ಸೇವನೆ ಅಲ್ಲಿಗೆ ಬಿಟ್ಟದ್ದು. ವಾರ್ಡನ್ ಕೂಡಲೇ ಆಗಮಿಸಿ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. 34 ವಿದ್ಯಾರ್ಥಿಗಳು ಚಿಕಿತ್ಸೆ ಪಡೆದಿದ್ದಾರೆ. ಯಾವ ವಿದ್ಯಾರ್ಥಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ. ಆದರೂ ಗುರುವಾರ ಮಧ್ಯಾಹ್ನ ಹಾಸ್ಟೆಲ್ ವಾರ್ಡನ್‌ರನ್ನು ಅಮಾನತು ಮಾಡಿರುವ ವಿಷಯ ಗೊತ್ತಾಗಿ ಬೇಸರವಾಗಿದೆ ಎಂದರು.
ವಾರ್ಡನ್ ಬಗ್ಗೆ ತಪ್ಪು ಕಲ್ಪನೆ ಬರುವಂತೆ ಸೃಷ್ಟಿ ಮಾಡಿರುವ ವಿಚಾರವಾಗಿದೆ ಯಾರೋ ಬೇಕಾಗಿಯೇ ಈ ಘಟನೆ ನಡೆಯುವಂತೆ ಮಾಡಿದ್ದಾರೆ. ನಮ್ಮ ಹಾಸ್ಟೆಲ್‌ಗೆ ಇದುವರೆಗೆ 5-6 ವಾರ್ಡನ್‌ಗಳು ಬಂದಿದ್ದಾರೆ. ಆದರೆ ಪ್ರಸ್ತುತ ಇರುವ ವಾರ್ಡನ್ ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಇವರು ನಿರ್ಲಕ್ಷ ಮಾಡಲು ಸಾಧ್ಯವಿಲ್ಲವೆಂದು ವಿದ್ಯಾರ್ಥಿಗಳು ಸಿಇಒ ರವರಿಗೆ ವಿವರಿಸಿ ಇವರ ಅಮಾನತ್ತನ್ನು ರದ್ದುಗೊಳಿಸಿ ಅವರನ್ನೇ ಹಾಸ್ಟೆಲ್ ವಾರ್ಡನಾಗಿ ಮುಂದುವರಿಸುವಂತೆ ಮನವಿ ಮಾಡಿದರು.
ಕಾನೂನು ಕಾಲೇಜು ಹಾಸ್ಟೆಲ್ ವಿದ್ಯಾರ್ಥಿ ಗಳಾದ ನವೀನ್ ಕುಮಾರ್ , ಶ್ರೀಹರಿ, ವೇಣು, ಪವನ್, ಹೇಮಂತ್, ಗಿರೀಶ್, ರಾಹುಲ್, ಶ್ರೀಕಾಂತ್, ಶ್ರೀಧರ್, ಆದರ್ಶ್, ಶಿವ ನಾಗರಾಜ್, ದುರ್ಗಾ ಪ್ರಸಾದ್, ರಂಜಿತ್ ಕುಮಾರ್, ಕಾರ್ತಿಕ್, ಗೋಕುಲ್, ಗುರುರಾಜ್ ಮತ್ತಿತರರಿದ್ದರು.
ಇಲಾಖಾ ತನಿಖೆ ನಡೆದ ನಂತರ ವಾರ್ಡನ್ ಲೋಪವಿಲ್ಲದಿದ್ದರೆ ಕರ್ತವ್ಯದಲ್ಲಿ ಮುಂದುವರಿಸಲಾಗು ವುದು. ಅ ಕಾರಿಗಳ ಪರಿಶೀಲನೆ ವೇಳೆ ಯಲ್ಲಿ ವಿದ್ಯಾರ್ಥಿಗಳು ಅವರ ಬಗ್ಗೆ ಮತ್ತು ಅವರ ಸಕಾರಾತ್ಮಕ ನಡವಳಿಕೆ ಕುರಿತು ಹೇಳಿಕೆ ಮತ್ತು ದಾಖಲೆಗಳನ್ನು ನೀಡಿ ಸಹಕರಿಸಿ.
-ಯುಕೇಶ್ ಕುಮಾರ್, ಜಿಪಂ ಸಿಇಒ