Advertisement

25 ಲಕ್ಷ ಪರಿಹಾರಕ್ಕೆ ಆಗ್ರಹ

01:34 PM Feb 24, 2021 | Team Udayavani |

ಚಿಕ್ಕಬಳ್ಳಾಪುರ: ಜಿಲಿಟಿನ್‌ ಸ್ಫೋಟ ದಲ್ಲಿ ಮೃತಪಟ್ಟಿ ರುವ ಕುಟುಂಬ ಸದಸ್ಯರಿಗೆ ತಲಾ 25 ಲಕ್ಷ ರೂ.ಪರಿಹಾರ ನೀಡಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್‌ ಬಣ) ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ಆಗ್ರಹಿಸಿದ್ದಾರೆ.

Advertisement

ಘಟನಾ ಸ್ಥಳಕ್ಕೆ ಭೇಟಿ ನೀಡಿ ನಂತರ ಮಾತನಾಡಿ, ಜಿಲ್ಲೆಯಲ್ಲಿ ಗಣಿಗಾರಿಕೆ ಯಿಂದರೈತರು ಮತ್ತು ನಾಗರಿಕರು ಸಂಕಷ್ಟ ಎದುರಿ ಸುವಂತಾಗಿದೆ. ಗಣಿಗಾರಿಕೆ ದೂಳಿನಿಂದ ಬೆಳೆಗಳು ಹಾಳಾಗುತ್ತಿದೆ. ಇನ್ನು ಜಿಲ್ಲಾಡಳಿತ, ಪೊಲೀಸರ ನಿರ್ಲಕ್ಷ್ಯದಿಂದ ಜಿಲಿಟಿನ್‌ ನ್ಪೋಟ ನಡೆದಿದೆ ಎಂದು ಆರೋಪಿಸಿದ ಅವರು, ಜಿಲ್ಲೆಯಲ್ಲಿ ಅಕ್ರಮವಾಗಿ ಜಿಲಿಟಿನ್‌ ಸಾಗಾಣಿಕೆ ನಡೆಯುತ್ತಿದೆಯೇ? ಎಂಬ ಅನುಮಾನ ಕಾಡುತ್ತಿದೆ. ಸರ್ಕಾರ ಪ್ರಕರಣದ ಕುರಿತು ಸಮಗ್ರವಾಗಿ ತನಿಖೆ ನಡೆಸಿತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಜಿಲ್ಲೆಯ ನಂದಿ ಸುತ್ತಮುತ್ತ ಕ್ವಾರಿಗಳಿಂದ ಹಬ್ಬುತ್ತಿರುವ ದೂಳಿನಿಂದ ನಾರಾಯಣಪುರ ರೈತರ ಬೆಳೆಗಳು ನಾಶವಾಗಿದೆ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಹಸಿರುಸೇನೆ(ಕೋಡಿಹಳ್ಳಿ ಚಂದ್ರಶೇಖರ್‌ಬಣ) ಜಿಲ್ಲಾಧ್ಯಕ್ಷ ಎಚ್‌.ಪಿ.ರಾಮನಾಥ್‌, ರಾಜ್ಯಸಂಚಾಲಕ ಲಕ್ಷ್ಮಣರೆಡ್ಡಿ, ಚಿಂತಾಮಣಿ ತಾಲೂಕು ಅಧ್ಯಕ್ಷ ರಮಣರೆಡ್ಡಿ, ಶಿಡ್ಲಘಟ್ಟ ತಾಲೂಕುಉಪಾಧ್ಯಕ್ಷ ಮುನಿನಂಜಪ್ಪ ಉಪಸ್ಥಿತರಿದ್ದರು

 

ನಿಶ್ಚಿತ ಗುರಿಯಿಂದ ಯಶಸ್ಸು ಸಾಧ್ಯ :

Advertisement

ಪಾತಪಾಳ್ಯ: ಶ್ರದ್ಧೆ, ಬದ್ಧತೆ ಆತ್ಮವಿಶ್ವಾಸ ಮತ್ತು ನಿಶ್ಚಿತ ಗುರಿ ಇದ್ದಲ್ಲಿ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಪಾತಪಾಳ್ಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕಿ ಕೆ.ಎನ್‌.ಕಲ್ಯಾಣಿ ತಿಳಿಸಿದರು.

ಪಾತಪಾಳ್ಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ,ಶಿಕ್ಷಣವು ಮನುಷ್ಯನ ಜೀವನ ರೂಪಿಸಲು ಇರುವಂತಹ ಏಕೈಕ ಸಾಧನವಾಗಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಭವಿಷ್ಯವನ್ನು ಉಜ್ವಲಗೊಳಿಸಬೇಕು. ಶಿಕ್ಷಣದ ಜೊತೆಗೆ ನೈತಿಕತೆ ಬೆಳೆಸಿಕೊಳ್ಳಬೇಕು ಎಂದರು.  ಉಪನ್ಯಾಸಕ ಎಂ.ಧರ್ಮಪಾಲ್‌ ಮಾತನಾಡಿ, ವಿದ್ಯಾರ್ಥಿಗಳಿಗೆ ಧ್ಯೇಯ ಮತ್ತು ಗುರಿ ಎರಡೂ ಅವಶ್ಯಕ. ಗುರಿಇಟ್ಟುಕೊಂಡು ಸಾಗಿದರೆ ಯಶಸ್ಸು ಲಭಿಸುತ್ತದೆ. ವಿದ್ಯಾರ್ಥಿಗಳು ಪ್ರತಿಯೊಂದುಸ್ಪರ್ಧೆಯಲ್ಲಿ ಭಾಗವಹಿಸಿ ಮುಂದೆ ಬರ ಬೇಕು ಎಂದರು.

ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳಿಸಿದ ಪಿ.ಜಿ ಸುಮಿತ್ರಾ (571)ಹಾಗೂ ಕೆ.ಇ.ಅಮೃತಾ (570) ಅವರನ್ನು ಪಾತ ಪಾಳ್ಯ ಪಿ.ಯು. ಕಾಲೇಜಿನ ಉಪನ್ಯಾಸಕರು ಹಾಗೂ ಶಿಕ್ಷಕರು

ಸನ್ಮಾನಿಸಿದರು. ಉಪನ್ಯಾಸಕ ನಾರಾಯಣ, ಪ್ರಭಾರ ಮಖ್ಯ ಶಿಕ್ಷಕ ಕೆ.ಆರ್‌.ರವಿಕುಮಾರ್‌, ಶಿಕ್ಷಕರಾದ ಎಲ್‌. ರಾಘವೇಂದ್ರ, ಎಂ.ಎಸ್‌.ಶ್ರೀನಿವಾಸನ್‌, ಎಚ್‌.ಯು.ಅಶ್ವಿ‌ನಿ, ದೈಹಿಕ ಶಿಕ್ಷ

Advertisement

Udayavani is now on Telegram. Click here to join our channel and stay updated with the latest news.

Next