Advertisement

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

07:12 PM Jun 25, 2021 | Team Udayavani |

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಈಗ ಕೊರೊನಾದ ಡೆಲ್ಟಾ ರೂಪಾಂತರಿಯು ತೀವ್ರ ಗತಿಯಲ್ಲಿ ವ್ಯಾಪಿಸುತ್ತಿದ್ದು, ಸಿಡ್ನಿಯ ಹಲವು ಪ್ರದೇಶಗಳಲ್ಲಿ ಲಾಕ್‌ ಡೌನ್‌ ಹೇರಲಾಗಿದೆ.

Advertisement

ಜತೆಗೆ, ಶುಕ್ರವಾರದಿಂದ ಮುಂದಿನ ಒಂದು ವಾರ ಕಾಲ ಯಾರೂ ಮನೆಗಳಿಂದ ಹೊರಬಾರದು ಎಂಬ ಆದೇಶ ಹೊರಡಿಸಲಾಗಿದೆ.

2 ವಾರಗಳ ಹಿಂದೆ ಸಿಡ್ನಿ ಏರ್‌ ಪೋರ್ಟ್‌ ನಿಂದ ಕ್ವಾರಂಟೈನ್‌ ಹೋಟೆಲ್‌ಗೆ ವಿದೇಶಿ ಪ್ರಯಾಣಿಕರನ್ನು ಕರೆದೊಯ್ದಿದ್ದ ಲಿಮೋಸಿನ್‌ ಚಾಲಕರೊಬ್ಬರಲ್ಲಿ ಡೆಲ್ಟಾ ಸೋಂಕು ಪತ್ತೆಯಾಗಿತ್ತು. ಅದಾದ ಬೆನ್ನಲ್ಲೇ 65 ಡೆಲ್ಟಾ ಕೇಸುಗಳು ದೃಢಪಟ್ಟಿದ್ದು, ಸಿಡ್ನಿಯಾದ್ಯಂತ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ :ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

Advertisement

Udayavani is now on Telegram. Click here to join our channel and stay updated with the latest news.

Next