Advertisement

ಪಡಿತರ ಕಾರ್ಡ್ ಇಲ್ಲದವರಿಗೆ ಇಂದಿನಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ

02:07 PM May 26, 2020 | keerthan |

ಬೆಂಗಳೂರು: ಕೇಂದ್ರ ಸರ್ಕಾರ ಪಡಿತರ ಚೀಟಿ ಇಲ್ಲದವರಿಗೆ ರೇಷನ್ ನೀಡುವಂತ ಮಹತ್ವದ ನಿರ್ಧಾರವನ್ನ ಕೈಗೊಂಡಿದ್ದು, ನಮ್ಮ ರಾಜ್ಯದಲ್ಲಿ   ಪಡಿತರ ಚೀಟಿ ಇಲ್ಲದವರಿಗೆ ರೇಷನ್ ವಿತರಣೆ ಮಾಡುವಂತಹ ಕಾರ್ಯ ಪ್ರಾರಂಭವಾಗಿದೆ ಎಂದು ಸಚಿವ ಗೋಪಾಲಯ್ಯ ಹೇಳಿದರು.

Advertisement

ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಡಿತರ ಚೀಟಿ ಇಲ್ಲದವರಿಗೆ ಎರಡು ತಿಂಗಳು ಹತ್ತು ಕೆಜಿ ಅಕ್ಕಿ ಕೊಡುವಂತಹ ಕಾರ್ಯ ಇವತ್ತು ಪ್ರಾರಂಭವಾಗಿದೆ.  ಈ ತಿಂಗಳು ಪ್ರತಿಯೊಬ್ಬ ವ್ಯಕ್ತಿಗೆ ಐದು ಕೆಜಿ ಅಕ್ಕಿ, ಹಾಗೇ ಮುಂದಿನ ತಿಂಗಳು 1ನೇ ತಾರೀಖಿನಿಂದ ಪ್ರತಿಯೊಬ್ಬ ವ್ಯಕ್ತಿಗೆ 5ಕೆಜಿ ಅಕ್ಕಿ , ಒಂದು ಕುಟುಂಬಕ್ಕೆ 2 ಕೆ.ಜಿ ಕಡಲೆಕಾಳು ಕೊಡಲಾಗುವುದು ಎಂದರು.

ಈ ಯೋಜನೆ ಯಾರ ಬಳಿ ರೇಷನ್ ಕಾರ್ಡ್ ಇಲ್ಲ ಅವರಿಗೆಲ್ಲಾ ಅನ್ವಯವಾಗಲಿದ್ದು, ಆಧರ್ ಕಾರ್ಡ್ ತೋರಿಸಿ ವಲಸಿಗರು, ಕೂಲಿ ಕಾರ್ಮಿಕರು, ಇಲ್ಲಿ ಇರುವಂಥವರು, ಕೂಡ ರೇಷನ್ ಪಡೆಯಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next