ಹುಣಸೂರು: ಏಪ್ರಿಲ್‌ನಲ್ಲಿ ತಾಲೂಕಿನಲ್ಲಿ ಬಿರುಗಾಳಿ ಮಳೆಯಿಂದ ಹಾನಿಗೊಳಗಾದ ಹನಗೋಡು ಭಾಗದ ಸಂತ್ರಸ್ತರಿಗೆ ಪ್ರಕೃತಿ ವಿಕೋಪನಿಧಿ ಯೋಜನೆಯಡಿ ಶಾಸಕ ಎಚ್.ವಿಶ್ವನಾಥ್ ಪರಿಹಾರದ ಚೆಕ್ ವಿತರಿಸಿದರು.
ತಾಲಕೂಕಿನ ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಕಳೆದ ತಿಂಗಳ ಹಿಂದೆ ಬಿರುಗಾಳಿ ಮಳೆಗೆ ವಡ್ಡಂಬಾಳು ಗ್ರಾಮ ಸೇರಿದಂತೆ ಹನಗೋಡು, ಮುದಗನೂರು, ಕೊಳುವಿಗೆ, ತಟ್ಟೆಕೆರೆ ಹೆ„ರಿಗೆ ಗ್ರಾಮಗಳಲ್ಲಿ ವಾಸದ ಮನೆ, ಕೊಟ್ಟಿಗೆಗೆ ಹಾನಿ ಹಾಗೂ ಬಾಳೆಬೆಳೆ, ಮೆಣಸಿನಕಾಯಿ ಬೆಳೆ, ತೆಂಗು, ಅಡಕೆ ಸೇರಿ ಇತರೆ ರೈತರ ಜಮೀನುಗಳಲ್ಲಿ ಲಕ್ಷಾಂತರ ರೂ.,ಗಳ ಬೆಳೆ ಹಾನಿಯಾಗಿತ್ತು.
ಹಾನಿಗೀಡಾದ ಪ್ರದೇಶಕ್ಕೆ ಅಂದು ತಾಲೊಕು ಆಡಳಿತದೊಂದಿಗೆ ಶಾಸಕ ಎಚ್.ವಿಶ್ವನಾಥ್ ಪರಿಶೀಲನೆ ನಡೆಸಿ ನಷ್ಟಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಲು ತಾಲೂಕು ಆಡಳಿತಕ್ಕೆ ಸೂಚಿಸಿದ್ದರು. ಅದರಂತೆ ಗುರುವಾರ ಮಂಜೂರಾದ ಪರಿಹಾರದ ಚೆಕ್‌ಗಳನ್ನು ಸಾಂಕೇತಿಕವಾಗಿ ವಡ್ಡಂಬಾಳಿನಲ್ಲಿ ವಿತರಿಸಿದರು.
ಶಾಸಕರೊಂದಿಗೆ ಜಿಪಂ ಸದಸ್ಯ ಕಟ್ಟನಾಯ್ಕ, ತಹಶೀಲ್ದಾರ್ ಬಸವರಾಜ್, ತಾಪಂ ಇಒ ಕೃಷ್ಣಕುಮಾರ್ ಹಾಗೂ ಹನಗೋಡು ಉಪ ತಹಶೀಲ್ದಾರ್ ತಿಮ್ಮಯ್ಯ, ಗ್ರಾಮ ಲೆಕ್ಕಿಗರಾದ ಶಶಿಕುಮಾರ್, ಮಹದೇವ್, ದೊಡ್ಡೇಶ್, ಶ್ಯಾಮಣ್ಣ, ಪಿಡಿಒ ನಾಗೇಂದ್ರಕುಮಾರ್ ಇದ್ದರು.
ತಾಲೂಕಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ವೇಳೆ ನೊಂದ ಕುಟುಂಬಗಳಿಗೆ ತಕ್ಷಣವೇ ವರದಿ ತರಿಸಿ ಹಾನಿಯಾಗಿರುವಷ್ಟು ಪರಿಹಾರ ನೀಡಿ ತಕ್ಷಣವೇ ನೆರವಾಗಬೇಕೆಂದು ತಹಶೀಲ್ದಾರರಿಗೆ ಸೂಚಿಸಿದರು.