Advertisement

ಪ್ರವಾಹ ಸಂತ್ರಸ್ತರಿಗೆ ಪರಿಹಾರ ಚೆಕ್‌ ವಿತರಣೆ

11:28 AM Sep 18, 2018 | Team Udayavani |

ಎಚ್‌.ಡಿ.ಕೋಟೆ: ಪ್ರವಾಹದಲ್ಲಿ ನೊಂದವರ ಕಷ್ಟ ಸುಖಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯದ ಒಂದು ಭಾಗ ಎಂದು ಸಂಸದ ಆರ್‌.ಧ್ರುವನಾರಾಯಣ್‌ ತಿಳಿಸಿದರು. ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಕಬಿನಿ ಹಿನ್ನೀರಿನ ಪ್ರವಾಹಕ್ಕೆ ಸಿಲುಕಿದ 68 ಕುಟುಂಬಗಳಿಗೆ  7 ಲಕ್ಷ ರೂ.ಗಳ ಪರಿಹಾರದ ಚೆಕ್‌ಗಳನ್ನು ವಿತರಿಸಿ ಮಾತನಾಡಿದರು.

Advertisement

ಕಳೆದ ತಿಂಗಳಲ್ಲಿ ಸುರಿದ ಭಾರಿ ಮಳೆ, ಪ್ರವಾಹದಿಂದ ಅನೇಕ ಗ್ರಾಮಗಳು ಜಲಾವೃತಗೊಂಡು ಕೋಟ್ಯಂತರ ರೂ. ನಷ್ಟ ಉಂಟಾಗಿತ್ತು. ಇದರಿಂದ ನೂರಕ್ಕೂ ಹೆಚ್ಚು ಮನೆಗಳು ಹಾನಿಯಾಗಿದ್ದವು. ಸಾವಿರಾರು ಎಕರೆ ಜಮೀನಿನಲ್ಲಿ ಫಸಲು ನದಿ ಪ್ರವಾಹಕ್ಕೆ ಸಿಕ್ಕಿ ಆಪಾರ ನಷ್ಟವನ್ನುಂಟು ಮಾಡಿತ್ತು.

ಈ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಈ ಭಾಗದ ಜನರಿಗೆ ಪರಿಹಾರ ಕೊಡಲಾಗುತ್ತಿದೆ ಎಂದು ಹೇಳಿದರು. ಕ್ಷೇತ್ರದ ಶಾಸಕ ಅನಿಲ್‌ ಕುಮಾರ್‌, ಜಿಪಂ ಸದಸ್ಯ ಶ್ರೀಕೃಷ್ಣ, ತಾಪಂ ಸದಸ್ಯರಾದ ಅಂಕಪ್ಪ, ಸರೋಜಿನಿ, ಡಿ.ಬಿ.ಕುಪ್ಪೆ ಗ್ರಾಪಂ ಅಧ್ಯಕ್ಷ ತಿರುಪತಿ, ಕಾಂಗ್ರೆಸ್‌ ಜಿಲ್ಲಾ ಗ್ರಾಮಾಂತರ ಅಧ್ಯಕ್ಷೆ ನಂದಿನಿ,

ರಾಜ್ಯ ಬೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮ್‌, ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಏಜಾಜ್‌ ಪಾಷಾ, ಡಿಸಿಸಿ ಸದಸ್ಯ ಕೃಷ್ಣಪುರ ಪರಶಿವಮೂರ್ತಿ, ಶೀಲಾ, ಪಿ.ರವಿ, ಪ್ರಭುಸ್ವಾಮಿ, ಬಸವರಾಜು, ತಾಪಂ ಇಒ ದರ್ಶನ್‌, ಉಪ ತಹಶೀಲ್ದಾರ್‌ ಪುಟ್ಟಸ್ವಾಮಿ, ಗ್ರಾಮಲೆಕ್ಕಿಗ ಮಹಮದ್‌ ಗೌಸ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next