Advertisement

“ಸವಲತ್ತುಗಳನ್ನು ಅರ್ಹರಿಗೆ ತಲುಪಿಸಿ’

03:45 AM Jul 04, 2017 | Team Udayavani |

ಮೂಲ್ಕಿ:  ಅಂಗವಿಕಲರಿಗಾಗಿ ಸರಕಾರದಿಂದ  ಸಿಗುವ ಸವಲತ್ತುಗಳನ್ನು ಅಂಗವಿಕಲರಿಗೆ ತಲುಪಿಸುವಲ್ಲಿ ಜನ ಪ್ರತಿನಿಧಿಗಳು ಹೆಚ್ಚಿನ ಒತ್ತು ಕೊಟ್ಟು ಶ್ರಮಿಸಿದಾಗ ಯಾವುದೇ ಯೋಜನೆ ಯಶಸ್ವಿಯಾಗುತ್ತದೆ ಎಂದು ಮೂಲ್ಕಿ ನಗರ ಪಂಚಾಯತ್‌ ಅಧ್ಯಕ್ಷ ಸುನೀಲ್‌ ಆಳ್ವ ಹೇಳಿದರು.

Advertisement

ಅವರು ಮೂಲ್ಕಿ ನಗರ ಪಂಚಾಯತ್‌ನ ಎಸ್‌ಎಫ್‌ಸಿ ಅನುದಾನದಲ್ಲಿ ಕಾಯ್ದಿರಿಸಿದ ಶೇ. 3ರ ಅನುದಾನದಲ್ಲಿ 6 ಮಂದಿ ವಿಕಲ ಚೇತನರಿಗೆ 83,400 ರೂ. ವೆಚ್ಚದಲ್ಲಿ  ಸೈಕಲ್‌, ಶ್ರವಣ ಸಾಧನ  ಹಾಗೂ ಇತರ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು. ಮುಖ್ಯಾಧಿಕಾರಿ ಇಂದೂ ಎಂ.ಯೋಜನೆಯ ಮಾಹಿತಿ ನೀಡಿ ದರು. ಉಪಾಧ್ಯಕ್ಷೆ ರಾಧಿಕಾ ಯಾದ‌ವ ಕೋಟ್ಯಾನ್‌, ಸ್ಥಾಯೀ ಸಮಿತಿ ಅಧ್ಯಕ್ಷ ಜಿ. ಎಂ. ಹರ್ಷರಾಜ್‌ ಶೆಟ್ಟಿ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next