ಮೈಸೂರು: ನರಸಿಂಹರಾಜ ಕ್ಷೇತ್ರಕ್ಕೆ ಬಿಜೆಪಿ ಶಾಸಕರಿಲ್ಲ ಎಂಬ ಚಿಂತೆ ಬೇಡ. ನಾನು ಇಲ್ಲಿಯ ಶಾಸಕನಾಗಿ ಹಾಗೂ ಸಚಿವನಾಗಿಯೂ ಕಾರ್ಯನಿರ್ವ ಹಿಸುತ್ತೇನೆ. ನಿಮ್ಮ ಏನೇ ಕೆಲಸ ಇದ್ದರೂ ನನ್ನ ಗಮನಕ್ಕೆ ತನ್ನಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ತಿಳಿಸಿದರು.
ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮಾರುತಿ ವೃತ್ತದ ಬಳಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳ ಕರಪತ್ರ ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿನೇತೃತ್ವದ ಕೇಂದ್ರ ಸರ್ಕಾರ ಇಂದು ಅನೇಕ ಜನಪರ ಯೋಜನೆಗಳನ್ನು ತಂದಿ¨ªಾರೆ. ಕೋವಿಡ್ 19 ಸಂದರ್ಭದಲ್ಲಿ ಅವರು ಕೈಗೊಂಡ ಯೋಜನೆಗಳು ಜನೋಪಯೋಗಿಯಾಗಿವೆ ಎಂದರು.
ಚವಾನ್ ಪ್ರಾಶ್ ವಿತರಣೆ: ಶಾಸಕರಾದ ರಾಮದಾಸ್ ಕ್ಷೇತ್ರದ 80 ಸಾವಿರ ಮನೆಗಳಿಗೆ ಚವನ್ ಪ್ರಾಶ್ ವಿತರಣೆ ಮಾಡಿರುವುದು ಎಲ್ಲರಿಗೂ ಅನುಕರಣೀಯ. ನಾನು ಈಗ ನನ್ನ ಯಶವಂತಪುರ ಕ್ಷೇತ್ರದಲ್ಲೂ ಕೋವಿಡ್ 19 ಬಾಧಿತರಿಗೆ ಕೊಡಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.
ಸಂಕಲ್ಪ ಪ್ರತಿಜ್ಞಾವಿಧಿ: ಪ್ರಧಾನಿ ನರೇಂದ್ರ ಮೋದಿ ಕರೆಯ ಮೇರೆಗೆ ಆತ್ಮನಿರ್ಭರ ಯೋಜನೆ ಸಂಕಲ್ಪಕ್ಕೆ ನಾನೂ ಕೊಡುಗೆ ನೀಡುತ್ತೇನೆ. ಯಥೇತ್ಛವಾಗಿ ಸ್ವದೇಶಿ ಉತ್ಪನ್ನವನ್ನು ಖರೀದಿಸುತ್ತೇನೆ. ಕೋವಿಡ್ -19 ಸೋಂಕಿನ ವಿರುದ್ಧ ಹೋರಾಡುತ್ತೇನೆ ಎಂದು ಜನಪ್ರತಿನಿಧಿಗಳು ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಈ ವೇಳೆ ಅರಣ್ಯ ಸಚಿವ ಆನಂದ್ ಸಿಂಗ್, ಶಾಸಕರಾದ ರಾಮದಾಸ್, ನಾಗೇಂದ್ರ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಹಾಗೂ ಮೈಸೂರು ಗ್ರಾಮೀಣ ಜಿಲ್ಲಾಧ್ಯಕ್ಷ ಮಹೇಂದ್ರ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಮಂಜುನಾಥ್ ಇತರರಿದ್ದರು.