Advertisement

ಸಂವಿಧಾನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಿ: ನ್ಯಾ|ನರೇಂದರ್‌

07:32 PM Jan 27, 2021 | Team Udayavani |

ಧಾರವಾಡ: ಭಾರತೀಯ ಸಂವಿಧಾನ ಅಮೂಲ್ಯವಾಗಿದ್ದು, ಸಂವಿಧಾನದ ನಿರ್ಮಾತೃಗಳು ತಿಳಿಸಿರುವ ಮೌಲ್ಯಗಳನ್ನು ಪ್ರತಿಯೊಬ್ಬ ಭಾರತೀಯ ಪಾಲಿಸುವುದರೊಂದಿಗೆ ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಇಲ್ಲಿನ ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ಜಿ.ನರೇಂದರ್‌ ಹೇಳಿದರು.

Advertisement

ನಗರದ ಹೊರವಲಯದ ಕರ್ನಾಟಕ ಉಚ್ಚ ನ್ಯಾಯಾಲಯ ಧಾರವಾಡ ಪೀಠದ ಆವರಣದಲ್ಲಿ 72ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿಅವರು ಮಾತನಾಡಿದರು.   ರಚನಾಕಾರರು ವಿಶ್ವಯೋಗ್ಯವಾಗಿರುವ ಮೌಲ್ಯಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದು, ಅವುಗಳನ್ನು ನಾಗರಿಕ ಸಮಾಜದಲ್ಲಿ ಎತ್ತಿ ಹಿಡಿಯಲು ಶ್ರಮಿಸೋಣ. ಈ ದಿನಾಚರಣೆ ನಾವು ಸಂವಿಧಾನಕ್ಕೆ ಮತ್ತು ಅದರ ನಿರ್ಮಾತೃಗಳಿಗೆಸಲ್ಲಿಸುವ ಗೌರವವಾಗಿದೆ ಎಂದರು.

ಇದನ್ನೂ ಓದಿ:ದೆಹಲಿ ರೈತರ ಹೋರಾಟ ಬೆಂಬಲಿಸಿ ಪ್ರತಿಭಟನೆ

ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶಕುಮಾರ, ಅಶೋಕ ಎಸ್‌. ಕಿಣಗಿ, ರವಿ ಹೊಸಮನಿ, ಹಂಚಾಟೆ ಸಂಜೀವಕುಮಾರ, ಪಿ.ಎನ್‌. ದೇಸಾಯಿ ಮತ್ತು ಪಿ. ಕೃಷ್ಣ ಭಟ್‌, ಅಧಿಕ ಮಹಾ ವಿಲೇಖಾನಾಧಿಕಾರಿಗಳಾದ ಕೆ.ಸಿ. ಸದಾನಂದಸ್ವಾಮಿ, ರೋಣ ವಾಸುದೇವ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next